ಕೊಪ್ಪಳ, ಜು.೨೯ ಉದ್ಯೋಗ ಮತ್ತು ತರಬೇತಿ ಇಲಾಖೆ ವತಿಯಿಂದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕೊಪ್ಪಳದಲ್ಲಿ ಖಾಲಿ ಉಳಿದಿರುವ ವಿವಿಧ ವೃತ್ತಿ ತರಬೇತಿ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪಳದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿದ್ಯುತ್ ಶಿಲ್ಪಿ ವೃತ್ತಿ ತರಬೇತಿಗೆ ಆನ್‌ಲೈನ್ ಪ್ರವೇಶ ಪಡೆದು, ಉಳಿದ ಸ್ಥಾನಗಳಿಗೆ ಮೆರಿಟ್ ಕಂ ರಿಸರ್ವೇಶನ್ ಆಧಾರದ ಮೇಲೆ ನಡೆಸಲಾಗುತ್ತಿರುವ ಕ್ಯಾಷುವಲ್ ರೌಂಡ್ ಪ್ರವೇಶ ಪ್ರಕ್ರಿಯೆ ಇದಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಈ ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವವರು ಹಾಗೂ ಅರ್ಜಿ ಸಲ್ಲಿಸಿ ಯಾವುದೇ ವೃತ್ತಿಯಲ್ಲಿ ಸ್ಥಾನ ಪಡೆಯದೇ ಇರುವವರು ಸಹ ಪುನಃ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಗಳನ್ನು ಕೊಪ್ಪಳ ನಗರದ ಈ ಸಂಸ್ಥೆಯಿಂದ ಪಡೆಯಬಹುದಾಗಿದ್ದು, ಹೊಸದಾಗಿ ಅರ್ಜಿ ಸಲ್ಲಿಸಲು ಜು.೩೦ ಕೊನೆ ದಿನಾಂಕವಾಗಿದೆ.
ಲಭ್ಯವಿರುವ ವೃತ್ತಿಗಳಲ್ಲಿ ಖಾಲಿ ಉಳಿದಿರುವ ಸ್ಥಾನಗಳ ಹಂಚಿಕೆ ಸಂಬಂಧವಾಗಿ ಜು.೩೧ ರಂದು ಸಮಾಲೋಚನೆ ನಡೆಸುವುದರಿಂದ ಎಲ್ಲ ಅಭ್ಯರ್ಥಿಗಳು ಅಂದು ಬೆಳಿಗ್ಗೆ ೦೯ ಗಂಟೆಗೆ ಸಂಸ್ಥೆ ಆವರಣದಲ್ಲಿ ಹಾಜರಿರಬೇಕು ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರಾಚಾರ್ಯರು, ದೂರವಾಣಿ ಸಂಖ್ಯೆ: ೦೮೫೩೯-೨೨೧೩೬೭ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.

0 comments:
Post a Comment