PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜು. 20 ಕೊಪ್ಪಳ ಜಿಲ್ಲೆಯಲ್ಲಿ ಕೆಲವೆಡೆ ಹೆಸರು ಬೆಳೆಗೆ ಬುರುಗು ತಿಗಣೆ (ಸ್ಪಿಟಲ್ ಬಗ್) ಬಾಧೆ ಕಾಣಿಸಿಕೊಂಡಿದ್ದು, ಇದರ ನಿರ್ವಹಣೆಗೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವು ರೈತರಿಗೆ ಸಲಹೆಗಳನ್ನು ನೀಡಿದೆ.
     ಕೊಪ್ಪಳ ಜಿಲ್ಲೆಯ ಕವಲೂರು, ಗುಡಿಗೇರಿ, ಬನ್ನಿಕೊಪ್ಪ, ಅಳವಂಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಪೀಡೆಯು ಇತ್ತೀಚಿಗೆ ಕಾಣಿಸಿಕೊಂಡಿದೆ.  ಬುರುಗು ತಿಗಣೆಯ ಮರಿ ಹುಳುಗಳು ಗಿಡದ ರಸ ಹೀರುವುದರಿಂದ ಹುಳುಗಳ ಸುತ್ತಲು ಬುರುಗು ಅಥವಾ ನೊರೆಯಿಂದ ಕೂಡಿರುತ್ತದೆ. ಈ ಪೀಡೆಗೆ ಸುಮಾರು 37 ಆಶ್ರಿತ ಸಸ್ಯಗಳಿವೆ ಎಂದು ವರದಿಯಾಗಿದೆ.  2012ರಿಂದ ಇತ್ತೀಚಿಗೆ ಕರ್ನಾಟಕದ ಹೆಸರು ಬೆಳೆಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು ಶೇ. 25-30 ರಷ್ಟು ಬೆಳೆಗೆ ಹಾನಿಯುಂಟು ಮಾಡುತ್ತದೆ.
ಲಕ್ಷಣಗಳು :  ಎಲೆ ಮತ್ತು ಕಾಯಿಗಳ ಕೋನಗಳಲ್ಲಿ ನೊರೆ ಅಥವಾ ಬುರುಗಿನಂತಹ ಅಂಟು ಪದಾರ್ಥ ಕಾಣಿಸಿಕೊಳ್ಳುತ್ತದೆ. ಶೇ. 75 ರಷ್ಟು ಹಾನಿಯು ಎಳೆಯ ಕಾಯಿಗಳ ಗುಂಪುಗಳ ಬುಡದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಾನಿಯು ಹೆಚ್ಚಾದಂತೆ ಕಾಯಿಗಳು ಉದುರಿ ಇಳುವರಿಯಲ್ಲಿ ನಷ್ಟವಾಗುತ್ತದೆ.
ನಿರ್ವಹಣಾ ಕ್ರಮಗಳು : ಪೀೀಡೆ ಬಾಧಿತ ಗಿಡಗಳನ್ನು ಕಿತ್ತು ನಾಶ ಪಡಿಸಬೇಕು.  ಪ್ರತಿ ಲೀ. ನೀರಿಗೆ 1 ಗ್ರಾಂ ಅಸಿಫೇಟ್ ಅಥವಾ 0.25 ಮಿ.ಲೀ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಅಥವಾ 2 ಮಿ.ಲೀ ಕ್ಲೋರ್‍ಪೈರಿಫಾಸ್ 20 ಇ.ಸಿ ಬೆರೆಸಿ ಬುರುಗು ಅಥವಾ ನೊರೆ ತೊಯ್ಯುವಂತೆ ಸಿಂಪರಣೆ ಮಾಡಬೇಕು.
       ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಷಯ ತಜ್ಞರಾದ ರೋಹಿತ್   (9845194328) ಇವರನ್ನು ಸಂಪರ್ಕಿಸಬೇಕು ಎಂದು ಕೊಪ್ಪಳದ ವಿಸ್ತರಣಾ ಮುಂದಾಳು ಡಾ. ಎಂ.ಬಿ ಪಾಟೀ
ಲ (9480696319) ತಿಳಿಸಿದ್ದಾರೆ.

Advertisement

0 comments:

Post a Comment

 
Top