PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ - ಕೊಪ್ಪಳ ನಗರದಲ್ಲಿ ಅಖಿಲ ಕರ್ನಾಟಕ ಹರಿದಾಸ ಕೂಟ ಕೊಪ್ಪಳ ಸಮಸ್ತ ಬ್ರಾಹ್ಮಣ ಸಮಾಜದ ವತಿಯಿಂದ  ಪ್ರಥಮ ಬಾರಿಗೆ ಶ್ರೀ ಶ್ರೀ ೧೦೦೮ ಶ್ರೀ ವಿಧ್ಯೇಶತೀರ್ಥಶ್ರೀಪಾದಂಗಳವರು ತಮ್ಮ ೩೬ ನೇ ಚಾತುರ್ಮಾಸ್ಯ ವೃತವನ್ನು ಕೈಗೊಳ್ಳುತ್ತಿ ರುವುದು ಕೊಪ್ಪಳ ಜಿಲ್ಲೆಯ ಭಕ್ತರಿಗೆ ಸಂತಸ ತಂದಿದೆ.     ನಗರದ ಶ್ರೀ ಮಹ್ಯಾಂತಯ್ಯ ಕಲ್ಯಾಣ ಮಂಟಪದಲ್ಲಿ ಅಗಷ್ಟ ೨ ರಿಂದ ಅಕ್ಟೋಬರ್ ೨ ರ ವರೆಗೆ ೫೫ ದಿನಗಳ ಕಾಲ ಶ್ರೀಗಳು ಶ್ರೀ ಕೋದಂಡರಾಮದೇವರಪೂಜೆ ನಿತ್ಯ ಪಾಠ-ಪ್ರವಚನ. ವಿದ್ವದಗೋಷ್ಠಿ, ದಾಸಾಸಾಹಿತ್ಯದ ವೈವಿದ್ಯಮಯ ಕಾರ್ಯಕ್ರಮಗಳು ಲೋಕಕಲ್ಯಾಣಾರ್ಥವಾಗಿ ಹೋಮ-ಹವನಗಳು ನಿತ್ಯ ಅನ್ನಸಂತರ್ಪಣೆ ಹಾಗೂ ಅನೇಕ ಧಾರ್ಮಿಕ ಕಾರ್ಯಗಳು ಜರುಗುವುವು. ಕೊಪ್ಪಳ ಇತಿಹಾಸದಲ್ಲೆ ಚಾತುರ್ಮಾಸ್ಯ ಮೊಟ್ಟಮೊದಲನೇ ಬಾರಿಗೆ ನಡೆಯುತ್ತಿದ್ದು ಇದೊಂದು ಐತಿಹಾಸಿಕ ಕಾರ್ಯಕ್ರಮ . ಅಗಷ್ಟ ೨ ರ ರವಿವಾರ ಧ್ವಾಜಾರೋಹಣ ಹಾಗೂ ಸಾಮೂಹಿಕ ಭಜನೆ, ಅಗಷ್ಠ ೩ ರಂದು ಶ್ರೀಗಳವರ ಭವ್ಯ ಶೋಬಾಯಾತ್ರೆ, ಅಗಷ್ಟ ೪ ರಂದು ಚಾತುರ್ಮಾಸ್ಯ ದಿಕ್ಷಾವೃತ ಸಂಕಲ್ಪಕಾರ್ಯಕ್ರಮ ನಡೆಯಲಿದೆ. ಇದರೊಟ್ಟಿಗೆ ೫೫ ದಿನಗಳಕಾಲ ಆರಾಧನೆಗಳು, ವ್ಯಾಸ-ದಾಸ ಸಾಹಿತ್ಯದ ವೈಭವ, ಧಾಮಿಕ ಗೋಷ್ಠಿಗಳ ಜೊತೆಗೆ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಕಾರ್ಯಕ್ರಮಗಳು.

Advertisement

0 comments:

Post a Comment

 
Top