PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ- ತಾಲೂಕಿನ ಹಲಗೇರಿ ಗ್ರಾಮದಲ್ಲಿ ದಿನಾಂಕ: ೨೭/೦೭/೨೦೧೫ ರಂದು ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ  ಯೋಜನೆ ಕೊಪ್ಪಳ ಪ್ರಗತಿ ಬಂಧು ಸ್ವಸಾಹಯ ಸಂಘಗಳ ಒಕ್ಕೂಟ ಗ್ರಾಮ ಪಂಚಾಯತ ಹಲಗೇರಿ ಸಂಯುಕ್ತ ಆಶ್ರಯದಲ್ಲಿ ಹೈನುಗಾರಿಕೆ ವಿಚಾರ ಸಂಕೀರ್ಣ ಹಮ್ಮಿಕೊಳ್ಳಲಾಗಿತ್ತು.ತಾ.ಪಂ ಸದಸ್ಯ ದೇವಪ್ಪ ಹೆಚ್ ಗುಡ್ಲಾನೂರ ಉದ್ಘಾಟಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ದೇವಪ್ಪ ಓಜನಹಳ್ಳಿ ವಹಿಸಿದ್ದರು, ಮುಖ್ಯಅತಿಥಿಗಳಾಗಿ ಜಿಲ್ಲಾ ನಿರ್ದೇಶಕ ಹೆಚ್ ಎಲ್ ಮುರಳಿಧರ, ಸಾಹಿತಿ ಪರಮೇಶಗೌಡ  ಪಾಟೀಲ್, ವಕೀಲ ಎಸ್.ಬಿ ಪಾಟೀಲ್, ಯೋಜನಾಧಿಕಾರಿಗಳಾದ ಸರೇಂದ್ರನಾಯಕ್, ಪಶುವೈಧ್ಯಾಧಿಕಾರಿಯಾದ ಶಿವರಾಜ ಶೆಟ್ಟರ, ಸರ್ವಮಂಗಳ ಜಿ ಪಾಟಿಳ್, ಶರಣಪ್ಪ ಉತ್ತಂಗಿ ಉಪಸ್ಥಿತರಿದ್ದರು.ಪ್ರಾಸ್ತಾವಿಕವಾಗಿ ಸಾಹಿತಿ ಪರಮೇಶಗೌಡ ಪಾಟೀಲ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತೀರಾ ಹಿಂದುಳಿದ ಪ್ರದೇಶವಾದ ಕೊಪ್ಪಳದಲ್ಲ ಹೊಸಬೇಳಕು ಮೂಡಿಸುತ್ತದೆ. ಗ್ರಾಮದ ಜನರನ್ನು ಒಗ್ಗೂಡಿಸಿ ಸ್ವಸಾಹಯ ಪ್ರಗತಿ ಬಂಧು  ತಂಡಗಳನ್ನು ರಚಿಸಿ ಸಾಲಸೌಲಭ್ಯ ನೀಡಿ ಕುಟುಂಬ ಅಭಿವೃದಿಯಲ್ಲಿ ಹೊಸ ಸಂಚಲನ ಮೂಡಿಸುತ್ತದೆ ಕೃಷಿಯೇತರ ಚಟುವಟಿಕೆಯಾಗಿ ಹೈನುಗಾರಿಕೆ ಮಾಡುವ ಬಗ್ಗೆ ವಿಚಾರಣ ಗೊಷ್ಠಿ ಮೂಲಕ ಅವರಿಗೆ ಅರಿವು ಮೂಡಿಸುತ್ತದೆ ಅವರಲ್ಲಿ ಸ್ವ ಉದ್ಯೋಗ ಬಗ್ಗೆ ದಾರಿ ದೀಪವಾಗಿದೆ ಎಂದು ಹೆಳಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪಶು ವೈಧ್ಯಾಧಿಕಾರಿ ಶಿವರಾಜ ಶೆಟ್ಟರ್ ಅವರು ಮಹಿಳೆಯರ ಅಬಲೆಯರು ಎಲ್ಲಾ ರಂಗದಲ್ಲಿ ಸಾಧನೆ ಮಾಡಿದ್ದಾರೆ ಹೈನುಗಾರಿಕೆ ಸ್ವಉದ್ಯೋಗದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರು ಪ್ರಗತಿ ಬಂದು ಸ್ವಸಾಹಯ ಸಂಘದ ಸದಸ್ಯರು ಗುರು ಹಿರಿಯರು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಎ.ಎಸ್ ಅಪ್ಪಣ್ಣ ನೀರೂಪಿಸಿದರು, ಕೃಷಿ ಮೇಲ್ವಿಚಾರಕರಾದ ಮಂಜುನಾಥ ಸ್ವಾಗತಿಸಿದರು, ವಿರೇಶ ಹಾಲವಗುಂಡಿ ವಂಧಿಸಿದರು.

Advertisement

0 comments:

Post a Comment

 
Top