ಕೊಪ್ಪಳ- ಮಕ್ಕಳ ಸಂಖ್ಯೆಯ ನೆಪವೊಡ್ಡಿ ಸರಕಾರವು ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ಖಂಡನೀಯ ಸಂಗತಿಯಾಗಿದೆ ಎಂದು ಕೊಪ್ಪಳ ಜಿಲ್ಲಾ ೬ನೇ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಈಶ್ವರ ಹತ್ತಿ ಹೇಳಿದರು.
ಅವರು ನಗರದ ಪಾನಗಂಟಿ ಕಲ್ಯಾಣ ಮಂಟಪದಲ್ಲಿ ರವಿವಾರದಂದು ಚುಟುಕು ಸಾಹಿತ್ಯ ಪರಿಷತ್ತ್ ವತಿಯಿಂದ ಏರ್ಪಡಿಸಲಾಗಿದ್ದ ಜಿಲ್ಲಾ ೬ನೇ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸರಕಾರವು ಮಕ್ಕಳ ಸಂಖ್ಯೆಯ ನೆಪವೊಡ್ಡಿ ಕನ್ನಡ ಶಾಲೆಗಳನ್ನು ಮುಚ್ಚಲು ಹೋರಟಿದೆ. ಈ ವಿಷಯ ಖಂಡನೀಯವಾಗಿದೆ. ಭಾಷೆ ವಿಷಯದ ಕುರಿತು ಸಂವಿಧಾನದ ತಿದ್ದುಪಡಿಯಾಗಬೇಕಾಗಿದೆ. ಇಲ್ಲದಿದ್ದರೆ ಗೋಕಾಕ್ ಮಾದರಿಯ ರೀತಿಯಲ್ಲಿ ಚಳುವಳಿಯಾಗಬೇಕು. ಕರ್ನಾಟಕದ ಏಕೀಕರಣದ ಸಮಯದಲ್ಲಿ ಹೈದ್ರಾಬಾದ್ ಕರ್ನಾಟಕದ ಜನರು ಮೈಸೂರು ಭಾಗದ ಜನರಿಗಿಂತ ಹೆಚ್ಚು ಧೈರ್ಯಶಾಲಿಗಳಾಗಿದ್ದರು. ಏಕೀಕರಣದ ಸಮಯದಲ್ಲಿ ಧಾರವಾಡದ ಕರ್ನಾಟಕ ಸಂಘ ನೀಡಿದ ಕೊಡುಗೆ ಅಪಾರವಾಗಿದೆ. ಇಂತಹ ಸಮ್ಮೇಳನಗಳನ್ನು ಹಮ್ಮಿಕೊಳ್ಳುವುದರ ಮೂಲಕ ಪ್ರತಿಯೊಬ್ಬರು ನಾಡಿನ ಚಿಂತನೆಯ ಬಗ್ಗೆ ಚರ್ಚೆ, ವಿಷಯ ಮಂಡನೆ ಮುಂತಾದ ವಿಷಯಗಳನ್ನು ಅರಿಯಬಹುದು. ಅಲ್ಲದೇ ಜಗತ್ತಿನ ವಿವಿಧ ಮೂಲೆಗಳಲ್ಲಿ ನೆಲೆಸಿರುವ ಕನ್ನಡದ ಮನಸ್ಸುಗಳನ್ನು ಸಮ್ಮೇಳನದ ಮೂಲಕ ಒಂದುಗೂಡಿಸುವಂತಹ ಕೆಲಸವಾಗಬೇಕಿದೆ ಎಂದರು.
ಮುಂದುವರೆದು ಮಾತನಾಡಿದ ಅವರು, ನನ್ನನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿರುವುದು ನನಗೆ ನೀಡಿದ ಗೌರವವಲ್ಲ. ಇದು ವ್ಯಕ್ತಿಗೆ ನೀಡಿದ ಗೌರವವಲ್ಲ. ಇದು ಅಕ್ಷರ ಲೋಕಕ್ಕೆ ಸಂದ ಗೌರವವಾಗಿದೆ. ಮುಂದಿನ ದಿನಮಾನಗಳಲ್ಲಿ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ರೈತರಿಗೆ ಸಂಬಂಧಿಸಿದಂತೆ ಗೋಷ್ಠಿಯನ್ನು ಕೂಡ ಏರ್ಪಡಿಸಬೇಕು. ಯುವ ಬರಹಗಾರರು, ಸಾಹಿತಿಗಳು ಇತ್ತೀಚಿಗೆ ಜರುಗುತ್ತಿರುವ ರೈತರ ಆತ್ಮಹತ್ಯೆಯ ಕಡೆಯೂ ಕೂಡ ತಮ್ಮ ಗಮನವನ್ನು ಹರಿಸಬೇಕು. ರೈತರ ಕುರಿತಾದ ಕೃತಿಗಳನ್ನು ಹೆಚ್ಚೆಚ್ಚು ಪ್ರಕಟಿಸಬೇಕು. ಅವರಿಗೆ ಧೈರ್ಯ ತುಂಬುವ ಕೆಲಸ ಪ್ರತಿಯೊಬ್ಬ ನಾಗರಿಕನಿಂದಾಗಬೇಕು. ನಾಡಿನ ವಿಷಯ ಬಂದಾಗ ಪ್ರತಿಯೊಬ್ಬರು ಕೂಡ ನಾಡಿನ ರಕ್ಷಣೆಗೆ ಕೈಜೋಡಿಸಬೇಕೆಂದು ಕೊಪ್ಪಳ ಜಿಲ್ಲಾ ೬ನೇ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಈಶ್ವರ ಹತ್ತಿ ಹೇಳಿದರು.
ಸಮಾರಂಭದ ಉದ್ಘಾಟನೆಯನ್ನು ಕಲಬುರ್ಗಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ: ಎಸ್.ಎಂ.ಹಿರೇಮಠ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಹನುಮಂತಪ್ಪ ಅಂಡಗಿ ಚಿಲವಾಡಗಿ ವಹಿಸಿ ಮಾತನಾಡಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿಗೆ ಸರ್ಕಾರದಿಂದ ಯಾವುದೇ ರೀತಿಯ ಅನುದಾನವಿಲ್ಲದಿದ್ದರೂ ಕೂಡ ಕೊಪ್ಪಳದಲ್ಲಿ ಎರಡು ರಾಜ್ಯ ಮಟ್ಟದ ಹಾಗೂ ಆರು ಜಿಲ್ಲಾ ಮಟ್ಟದ ಸಮ್ಮೇಳನವನ್ನು ಪರಿಷತ್ತ ವತಿಯಿಂದ ನೆರವೇರಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಲಾಗುತ್ತಿರುವ ಅನುದಾನವನ್ನು
ಕಾರ್ಯಕ್ರಮದಲ್ಲಿ ವಿಮಲಾ ಇನಾಮದಾರ ಅವರ ಸಿರಿಸಂಪದ ಹಾಗೂ ಚಿಗುರು ಚಿನ್ನ, ಡಾ.ಪಾರ್ವತಿ ಪೂಜಾರ ಅವರ ಶಬ್ದಕ್ಕೆ ನಾಚಿದೊಡೆಂತಯ್ಯ, ಎ.ಇ.ಮುನಿರಾಜ್ ಅವರ ಪಾಪು (ಪಕ್ಕ ಅಪರಂಜಿ) ಎಂಬ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
ವೇದಿಕೆಯ ಮೇಲೆ ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತಿನ ಪ್ರಧಾನ ಸಂಚಾಲಕರಾದ ಡಾ.ಎಂ.ಜಿ.ಆರ್.ಅರಸ್, ಮೈಸೂರಿನ ಕೌಸ್ತುಭ ಪತ್ರಿಕೆ ಸಂಪಾದಕರಾದ ರತ್ನಾ ಹಾಲಪ್ಪಗೌಡ, ಹಂಪಿ ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ.ಕೆ.ರವೀಂದ್ರನಾಥ, ವಕೀಲರ ಸಂಘದ ಜಿಲ್ಲಾಧ್ಯಕ್ಷರಾದ ರಾಘವೇಂದ್ರ ಪಾನಗಂಟಿ, ಹಿರಿಯ ಸಾಹಿತಿ ಮುನಿಯಪ್ಪ ಹುಬ್ಬಳ್ಳಿ, ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಪ್ರೋ.ವಿ.ಎಂ.ರಾಜಶೇಖರ, ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರಾದ ಎಸ್.ಕೆ.ಪಾಟೀಲ್, ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಹಲಿಗೇರಿ, ರಾಯಚೂರು ಜಿಲ್ಲಾ ಚುಸಾಪ ಅಧ್ಯಕ್ಷರಾದ ಬೀರಪ್ಪ ಶಂಭೋಜಿ, ಬಸವೇಶ್ವರ ಕರ್ಮವೀರ ಕಲಾ, ಸಾಹಿತ್ಯ ಸಂಸ್ಕೃತಿಕ ವೇದಿಕೆ ಆಹೇರಿಯ ಅಧ್ಯಕ್ಷರಾದ ಬಂಡೆಪ್ಪ ಜಿ.ತೇಲಿ ಸೇರಿದಂತೆ ಅನೇಕರು ಹಾಜರಿದ್ದರು. ಸರಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಸ್ವಾಗತಿಸಿದರು. ಯಲಬುರ್ಗಾ ತಾಲೂಕ ಚುಸಾಪ ಅಧ್ಯಕ್ಷರಾದ ಶಾಂತವೀರ ಬನ್ನಿಕೊಪ್ಪ ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮವನ್ನು ಸಾಹಿತಿಗಳಾದ ಶಂ.ನಿಂ.ತಿಮ್ಮನಗೌಡರ ನಿರೂಪಿಸಿದರು.
ಮುಂದಿನ ದಿನಗಳಲ್ಲಿ ಸರಕಾರವು ಕೂಡ ಚುಸಾಪಗೆ ಒದಗಿಸಬೇಕು. ವಿವಿಧ ಸಂಘಟನೆಗಳಿಗೆ ಸರಿಸಮಾನವಾದ ರೀತಿಯಲ್ಲಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಚುಸಾಪದಿಂದ ನಡೆಸಲಾಗಿದೆ ಎಂದು ತಿಳಿಸಿದರು.

0 comments:
Post a Comment