ಕೊಪ್ಪಳ,
ಜು. ೨೭ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಔಷಧ ಮಾರಾಟ
ಸಂಸ್ಥೆಗಳ ತಪಾಸಣೆ ಮಾಡಿ ಮಾದರಿ ಪಡೆದ ಔಷಧಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದ್ದು,
ವಿವಿಧ ಔಷಧಗಳು ಉತ್ತಮ ಗುಣಮಟ್ಟ ಹೊಂದಿಲ್ಲವೆಂದು ಘೋಷಿಸಲ್ಪಿಟ್ಟಿವೆ. ಸಾರ್ವಜನಿಕರು ಈ
ಕೆಳಗಿನ ಬ್ಯಾಚ್ ಸಂಖ್ಯೆಯ ಔಷಧಗಳನ್ನು ಉಪಯೋಗಿಸಬಾರದು ಹಾಗೂ ಎಚ್ಚರಿಕೆ ವಹಿಸುವುದು
ಅಗತ್ಯವಾಗಿದೆ ಎಂದು ಕೊಪ್ಪಳ ಸಹಾಯಕ ಔಷಧ ನಿಯಂತ್ರಕ ರೇಣುಕಸ್ವಾಮಿ ಅವರು
ತಿಳಿಸಿದ್ದಾರೆ.
ಔಷಧಿ ಹೆಸರು, ಬ್ಯಾಚ್ ಸಂಖ್ಯೆ ಹಾಗೂ ತಯಾರಕರ ವಿವರ ಇಂತಿದೆ. ಪ್ಯಾರಾಸೆಟಮಾಲ್ ಪ್ಯಾರಾರಿಕ್ಸ್ ೬೫೦, ಬ್ಯಾಚ್ ಸಂ: ಜಿಟಿ-೭೪೧, ಝೀ ಲ್ಯಾಬೊರೆಟರೀಸ್ ಲಿಮಿಟೆಡ್, ಸಾಹಿಬ್- ೧೭೩೦೨೫. ಅಗರಾಲ್ ಎಮಲ್ಷನ್, ಬ್ಯಾಚ್ ನಂ. ೪೨೦-೦೯೧೦೩೦, ಮೆ: ಪಿಫೈಜ್ಹರ್ ಲಿಮಿಟೆಡ್, ಪುಣೆ. ಲಿವೋಜಿನ್, ಬ್ಯಾಚ್ ಸಂ. ಎಂ.ಟಿ. ೧೩ಎಲ್೨೩, ಮೆ: ಮಾರ್ಟಿನ್ ಅಂಡ್ ಬ್ರೌನ್ ಬಯೋ ಸೈನ್ಸ್, ಸೋಲನ್ (ಹಿಮಾಚಲ ಪ್ರದೇಶ್), ಪವೊಡಿನ್ ಐಯೋಡಿನ್ ಸಲ್ಯೂಷನ್. ಬ್ಯಾಚ್ ಸಂ. ೦೧೧, ಮೆ: ಮೆಡಿಸ್ಮಿತ್ ಫಾರ್ಮ ಲ್ಯಾಬ್, ಕುವೆಂಪು ನಗರ, ಬೆಂಗಳೂರು. ವೊಮಿಯೋನ್ ಸಿರಪ್, ಬ್ಯಾಚ್ ಸಂ. ಐಪಿವಿ ೧೩೧೨೦೧, ಮೆ: ಮೆರಿನೊ ಲ್ಯಾಬರೇಟರಿಸ್ ಪ್ರೈ.ಲಿ. ಪ್ರಶಾಂತನಗರ, ಹೈದ್ರಾಬಾದ್. ವೆರಾಲ್ ೬೫೦ ಡಿಟಿ. ಬ್ಯಾಚ್ ಸಂ. ವಿಆರ್‌ಎಲ್-೧೦೩, ಮೆ: ಎಂಬಯೋಟಿಕ್ ಲ್ಯಾಬೊರೆಟರಿಸ್ ಪ್ರೈ.ಲಿ. ಕುಂಬಳಗೋಡು, ಬೆಂಗಳೂರು. ಸಿಫಡ್ರಾಕ್ಸಿಲ್ ಡಿಟಿ ೧೨೫. ಬ್ಯಾಚ್ ಸಂ. ಸಿಎಫ್‌ಕೆ ೮೦, ಮೆ: ಮಹೇಂದ್ರ ಲ್ಯಾಬ್ಸ್ ಪ್ರೈ.ಲಿ. ಪೀಣ್ಯ ಇಂಡಸ್ಟ್ರಿಯಲ್ ಏರಿಯಾ, ಬೆಂಗಳೂರು.
ಔಷಧಿ ವ್ಯಾಪಾರಿಗಳು, ವೈದ್ಯರು, ಆಸ್ಪತ್ರೆಗಳು ಈ ಮೇಲಿನ ಔಷಧಗಳನ್ನು ದಾಸ್ತಾನು ಮಾಡುವುದಾಗಲಿ, ಮಾರಾಟ ಮಾಡುವುದಾಗಲಿ, ಉಪಯೋಗಿಸುವುದಾಗಲಿ ಮಾಡಬಾರದು. ಯಾರಾದರೂ ಈ ಔಷಧಿಗಳ ದಾಸ್ತಾನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರು ೦೮೫೩೯-೨೨೧೫೦೧ ಗಮನಕ್ಕೆ ತರುವಂತೆ ತಿಳಿಸಿದ್ದಾರೆ.

0 comments:
Post a Comment