ಕೊಪ್ಪಳ ಜಿಲ್ಲೆಯ ಭಾಗ್ಯನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ ೨೬-೦೬-೨೦೧೫ ರ ಶುಕ್ರವಾರದಂದು ಸುರಭಿ ಸಮಗ್ರ ವ್ಯಸನ ಮುಕ್ತಿ ಹಾಗೂ ಪುನರ್ವಸತಿ ಕೇಂದ್ರ ಇವರ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಮಾರಾಟ ಹಾಗೂ ವಿರೋಧಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಪ್ರಾರ್ಥನೆಯ ಮೂಲಕ ಪ್ರಾರಂಭಿಸಲಾಯಿತು. ಇದರ ಅಧ್ಯಕ್ಷತೆಯನ್ನು ವಿ. ಹೆಚ್ಚ್ ಮಂಡಸುಪ್ಪಿ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ವಸಂತ ಪ್ರೇಮರವರು ಉದ್ಘಾಟಿಸಿದರು. ಜಿಲ್ಲಾ ಮಾನಸಿಕ ರೋಗ ತಜ್ಞರಾದ ಡಾ. ಎಂ.ಎಂ. ಕಟ್ಟಿಮನಿಯವರು ಮುಖ್ಯ ಅಥಿತಿಗಳಾಗಿ ಮಾತನಾಡಿ ಯುವಕರೆ ಮುಂದಿನ ನಾಡಿನ ನಾಗರಿಕರು ದುಷ್ಚಟದಿಂದ ದೂರವಿರಬೇಕು, ಸಮಾಜದ ಒಳತಿಯನ್ನು ಕಾಪಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇನ್ನೊರ್ವ ಅಥಿತಿಯಾದ ಶ್ರೀಮತಿ ಸಂಧ್ಯಾ ಮಾದಿನೂರ ಮಾತನಾಡಿ ಮದ್ಯಪಾನವು ಸಮಾಜದಲ್ಲಿ ಅತ್ಯಂತ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದರಿಂದ ಸಮಾಜದ ವಾತಾವರಣವೆ ಹಾಳಾಗಿ ಹೋಗುತ್ತಿದೆ. ಹಾಗಾಗಿ ಯವಕರು ಎಚ್ಚೆತ್ತುಕೊಂಡು ಸಮಾಜದಲ್ಲಿ ಸತ್‌ಪ್ರಜೆಯಾಗಿ ಬದುಕಬೇಕು ಎಂದು ಹೇಳಿದರು. ಡಾ. ಬಸವರಾಜ ಬಾಚಲಾಪೂರ ಇವರು ಮಾತನಾಡಿ ಸಮಾಜದಲ್ಲಿನ ಮದ್ಯಪಾನಿಯಗಳ ಸರ್ವೆ ಮಾಡಿ ಜಾಗೃತಿಯನ್ನು ಮೂಡಿಸಿ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವ ಹೊಣೆ ನಮ್ಮೆಲ್ಲರದ್ದಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯ ಸ್ಥಾನ ವಹಿಕೊಂಡಂತಹ ವಿ.ಹೆಚ್. ಮಂಡಸುಪ್ಪಿ ಅವರು ಮಾತನಾಡಿ ಪ್ರತಿ ವರ್ಷ ದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮದ್ಯಪಾನದಿಂದ ಜನರು ಅಸುನಿಗುತ್ತಿದ್ದಾರೆ ಎಂದು ಹೇಳಿದರು. ಸುರಭಿ ವ್ಯಸನ ಮುಕ್ತಿ ಕೇಂದ್ರದ ಯೋಜನಾ ನಿರ್ದೇಶಕರಾದ ಅಶೋಕ ದರಿಯಪ್ಪನವರ, ಹಾಗೂ ಎಲ್ಲಾ ಸಿಬಂದಿವರ್ಗದವರು ಉಪಸ್ಥಿತರಿದ್ದರು. ಜಾಫರ ಸಾಧಿಕ ನಿರೂಪಿಸಿದರು. ಸುರಭಿ ಕೇಂದ್ರದ ಆಪ್ತಸಮಾಲೋಚಕರಾದ ಕರಕಪ್ಪ ಎಸ್. ಮೇಟಿ ಸ್ವಾಗತಿಸಿದರು. ಮರ್ದಾನಅಲಿ ಮಿರ್ಜಾರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭುಕುಮಾರ ರವರು ವಂದಿಸಿದರು.
Subscribe to:
Post Comments (Atom)
0 comments:
Post a Comment