PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-  ಶೈಕ್ಷಣಿಕ ಅಭಿವೃದ್ದಿಗೆ ಸಂಘ ಸಂಸ್ಥೆಗಳ ಸಹಕಾರ ಅಗತ್ಯವಾಗಿದೆ ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಬಿ.ಹೇಳಿದರು.ನಗರದ ಕ್ಷೇತ್ರ ಸಮನ್ವಯ ಕಾರ್ಯಾಲಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಕ್ಷರ ಪೌಂಡೇಶ ವತಿಯಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ೪ ಮತ್ತು ೫ ತರಗತಿ ಗಣಿತ ವಿಷಯದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ದಿಯನ್ನು ಬಯಸುವುದಾದರೆ ಕೇವಲ ಇಲಾಖೆಯ ಪ್ರಯತ್ನದಿಂದ ಯಶಸ್ವಿ  ಕಾಣಲು ಸಾಧ್ಯವಿಲ್ಲ.ಶೈಕ್ಷಣಿಕ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಇಲಾಖೆ,ಸಂಘ ಸಂಸ್ಥೆಗಳು ಹಾಗೂ ಸಮುದಾಯದ ಸಹಕಾರವು ಕೂಡಾ ಅಗತ್ಯವಾಗಿದೆ.ನಮ್ಮ ತಾಲೂಕಿನದಲ್ಲಿ ಶೈಕ್ಷಣಿಕ ಅಭಿವೃದ್ದಿಗೆ ಅಕ್ಷರ ಪೌಂಡೇಶನ ನೀಡಿದ ಕೊಡುಗೆ ಅಪಾರವಾಗಿದೆ.ಅಲ್ಲದೆ ಕಳೇದ ವರ್ಷದಲ್ಲಿ ತಾಲೂಕಿನ ಎಲ್ಲಾ ಶಾಲೆಯ ಶಿಕ್ಷಕರಿಗೆ ಇಂಗ್ಲೀಷ್ ತರಬೇತಿಯನ್ನು ನೀಡಿದ್ದಾರೆ.ಈ ವರ್ಷದಲ್ಲಿ ೪ ಮತ್ತು ೫ ನೇತರಗತಿ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಗಣಿತ ವಿಷಯದ ತರಬೇತಿಯನ್ನು ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ.ತರಬೇತಿಗೆ ಹಾಜರಾಗಿರುವ ಪ್ರತಿಯೊಬ್ಬ ಶಿಕ್ಷಕರು ವಿಷಯವನ್ನು ಕರಗತ ಮಾಡಿಕೊಂಡು ತರಗತಿಯ ಕೋಣೆಯಲ್ಲಿ ಅದನ್ನು ಅನುಷ್ಟಾನಗೊಳಿಸಬೇಕು.ಅಂದಾಗ ಮಾತ್ರ ಇಂತಹ ತರಬೇತಿಗಳಿಗೆ ಮಹತ್ವ ಬರಲು ಸಾಧ್ಯವಾಗುತ್ತದೆ.ತರಬೇತಿಗಳು ಶಿಕ್ಷಕರು ನವೀನ ವಿಚಾರಗಳನ್ನು ಅರಿಯಲು ಸಹಾಯಕವಾಗುತ್ತದೆ ಎಂದು ಹೇಳಿದರು.
  ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಬಿ.ಆರ್.ಪಿ.ಮಹಮ್ಮದ್ ರಫೀ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಷಯ ಪರಿವಿಕ್ಷಕರಾದ ಆರ್.ಗುರುಬಸವರಾಜ,ಅಕ್ಷರ ಪೌಂಡೇಶನ ಧಾರವಾಡದ ಮುಖ್ಯಸ್ಥರಾದ ಎಂಜಲಿನ,ಪ್ರಭಾರಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶೇಷಪ್ಪಯ್ಯಾ ಸ್ವಾಮಿ,ಶಿಕ್ಷಣ ಸಂಯೋಜಕರಾದ ಶ್ರೀನಿವಾಸ ಪೋಲಿಸ್ ಪಾಟೀಲ,ಹನುಮಂತಪ್ಪ ನಾಯಕ,ಬಿ.ಆರ್.ಪಿ.ಎಂ.ಎಚ್.ಕುರಿ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮವನ್ನು ಬಿ.ಆರ್.ಪಿ.ಲೋಕೇಶ ನಿರೂಪಿಸಿದರು.

Advertisement

0 comments:

Post a Comment

 
Top