PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜೂ. ೨೯ (ಕರ್ನಾಟಕ ವಾರ್ತೆ) : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಸಲಾಗುವ  ಪರೀಕ್ಷಾ ಮಂಡಳಿಯಲ್ಲಿ ನೋಂದಾಯಿಸಲ್ಪಟ್ಟು ಸಂಕೇತ ಸಂಖ್ಯೆ ಹೊಂದಿರುವ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಶಿಕ್ಷಕರಿಂದ (ಶಾಲೆಗಳಿಂದ) ಬೋಧಿಸಿರುವ ಅಭ್ಯರ್ಥಿಗಳಿಗೆ ಹಾಗೂ ಖಾಸಗಿ ಅಭ್ಯರ್ಥಿಗಳಿಂದ, ಮಂಡಳಿಯು ನಿಗದಿಪಡಿಸಿದ ಪರೀಕ್ಷಾ ಕೇಂದ್ರಗಳ ಮೂಲಕ ಅಕ್ಟೋಬರ್/ನವೆಂಬರ್‌ನಲ್ಲಿ ನಡೆಯಲಿರುವ ಶಾಸ್ತ್ರೀಯ ಸಂಗೀತ (ಕರ್ನಾಟಕ/ಹಿಂದೂಸ್ತಾನಿ), ಭರತನಾಟ್ಯ/ಕೂಚುಪುಡಿ/ಕಥಕ್ ಮತ್ತು ತಾಳವಾದ್ಯ (ಕರ್ನಾಟಕ/ಹಿಂದೂಸ್ತಾನಿ) ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  ಇದೇ  ೨೦೧೫ ರ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಕಿರಿಯ ದರ್ಜೆ, ಹಿರಿಯ ದರ್ಜೆ, ವಿದ್ವತ್ ಪೂರ್ವ ಮತ್ತು ವಿದ್ವತ್ ಅಂತಿಮ ಸಂಗೀತ, ನೃತ್ಯ ಮತ್ತು ತಾಳವಾದ್ಯ ಪರೀಕ್ಷೆಗಳನ್ನು ನಡೆಸಲಾಗುವುದು.  ಪರೀಕ್ಷಾ ಕೇಂದ್ರದಲ್ಲಿ   ಅರ್ಜಿ ವಿತರಣೆ ಜು. ೦೧ ರಿಂದ ಪ್ರಾರಂಭವಾಗಲಿದೆ.  ಅರ್ಜಿ ಸ್ವೀಕರಿಸಲು ಜು. ೨೦ ಕೊನೆಯ ದಿನಾಂಕ.  ದಂಡ ಸಹಿತ ಅರ್ಜಿ ಸ್ವೀಕರಿಸಲು ಜು. ೨೫ ಕೊನೆಯ ದಿನಾಂಕವಾಗಿದೆ.  ಹೆಚ್ಚಿನ ವಿವರಗಳನ್ನು ಉಪಪ್ರಾಂಶುಪಾಲರು, ಬಾಲಕಿಯರ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು, ಕೊಪ್ಪಳ ಇವರಿಂದ ಪಡೆಯುವಂತೆ ತಿಳಿಸಿದೆ.

Advertisement

0 comments:

Post a Comment

 
Top