ಕೊಪ್ಪಳ, ಜೂ. 12 ಕೊಪ್ಪಳ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಗಳು ಜೂ.15 ರಿಂದ 22 ರವರೆಗೆ ಜಿಲ್ಲೆಯ 11 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯಲ್ಲಿ ಅಹಿತಕರ ಘಟನೆಗಳು, ನಕಲು ಮುಂತಾದವುಗಳನ್ನು ತಡೆಗಟ್ಟಲು ಹಾಗೂ ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ಪಾರದರ್ಶಕತೆಯಿಂದ ನಡೆಸಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದಲ್ಲಿ ನಾಲ್ಕು ಜಾಗೃತ ದಳಗಳನ್ನು ರಚಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಮಸುಂದರ ತಿಳಿಸಿದ್ದಾರೆ.
ಜಿಲ್ಲಾ ಜಾಗೃತ ದಳದ ವಿವರ:
ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮುಖ್ಯಸ್ಥರಾಗಿರುವ ತಂಡದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿಯ ವಿಷಯ ಪರಿವೀಕ್ಷಕ ಎಂ.ಎಸ್.ಬಡದಾನಿ ಹಾಗೂ ಬೆಟಗೇರಿಯ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ಸದಸ್ಯರಾಗಿದ್ದಾರೆ. ಮುನಿರಾಬಾದ ಡಯಟ್ ನ ಉಪನಿರ್ದೇಶಕರು ಮುಖ್ಯಸ್ಥರಾಗಿರುವ ತಂಡದಲ್ಲಿ ಮುನಿರಾಬಾದ್ ಡಯಟ್ ಉಪನ್ಯಾಸಕ ಶಾಂತಪ್ಪ ಹಾಗೂ ಮುನಿರಾಬಾದ್ ಡಯಟ್ ಉಪನ್ಯಾಸಕಿ ರೇಖಾ ಜಿ. ಸದಸ್ಯರಾಗಿದ್ದಾರೆ. ಎಸ್.ಎಸ್.ಎ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿಗಳು ಮುಖ್ಯಸ್ಥರಾಗಿರುವ ತಂಡದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಆರ್.ಗುರುಬಸವರಾಜ ಹಾಗೂ ಭಾಗ್ಯನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಸುಜಾತಾ ಸದಸ್ಯರಾಗಿದ್ದಾರೆ. ಕೊಪ್ಪಳ ಜಿಲ್ಲಾ ಪಂಚಾಯತ್ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿಗಳು ಮುಖ್ಯಸ್ಥರಾಗಿರುವ ತಂಡದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿಯ ವಿಷಯ ಪರಿವೀಕ್ಷಕ ಆರ್.ಹೆಚ್.ಪತ್ತಾರ ಹಾಗೂ ತಾಲೂಕಾ ಪಂಚಾಯತ್‍ನ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಅಶೋಕ ಕುಲಕರ್ಣಿ ಸದಸ್ಯರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
Home
»
»Unlabelled
» ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ : ಜಾಗೃತ ದಳ ರಚನೆ
Advertisement
Subscribe to:
Post Comments (Atom)
0 comments:
Post a Comment