ಕೊಪ್ಪಳ, ಜೂ.೨೯ ಕೇಂದ್ರ ಸರ್ಕಾರದಿಂದ ಗೋಧಿ ಪೂರೈಕೆಯಲ್ಲಿ ಕೊರತೆಯಾದ ಕಾರಣದಿಂದ ಜುಲೈ ತಿಂಗಳಿಗೆ ಪಡಿತರ ಗೋಧಿ ಬದಲಿಗೆ ಅಕ್ಕಿ ಹಂಚಿಕೆ ಮಾಡಲಾಗಿದೆ. ಜಿಲ್ಲೆಯ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ಅಂತ್ಯೋದಯ ಕಾರ್ಡಿಗೆ ೨೯ ಕೆ.ಜಿ ಅಕ್ಕಿ, ೦೬ ಕೆ.ಜಿ ಗೋದಿ ವಿತರಿಸಲಾಗುತ್ತಿತ್ತು. ಬಿಪಿಎಲ್ ಕಾರ್ಡುದಾರರಿಗೆ ಕುಟುಂಬದ ಒಬ್ಬ ಸದಸ್ಯರಿಗೆ ೦೩ ಕೆ.ಜಿ ಅಕ್ಕಿ, ೦೨ ಕೆ.ಜಿ ಗೋಧಿ ಪೂರೈಸಲಾಗುತ್ತಿತ್ತು. ಆದರೆ, ಜುಲೈ ತಿಂಗಳಿಗೆ ಕೇಂದ್ರ ಸಕಾರದಿಂದ ಗೋಧಿ ಪೂರೈಕೆಯಲ್ಲಿ ಕೊರತೆಯಾದ ಕಾರಣ ಗೋಧಿಯ ಬದಲಾಗಿ ಅಕ್ಕಿಯನ್ನು ವಿತರಿಸಲು ಕ್ರಮವಹಿಸುವಂತೆ ಆಹಾರ ಇಲಾಖೆಯ ಆಯುಕ್ತರು ನಿರ್ದೇಶನ ನೀಡಿದ್ದಾರೆ. ಅದರಂತೆ ಅಂತ್ಯೋದಯ ಕಾರ್ಡುದಾರರಿಗೆ ೩೫ ಕೆ.ಜಿ ಅಕ್ಕಿ, ಬಿಪಿಎಲ್ ಕಾರ್ಡುದಾರರಿಗೆ ಕುಟುಂಬದ ಪ್ರತಿ ಸದಸ್ಯರಿಗೆ ೦೫ ಕೆ.ಜಿ ಅಕ್ಕಿ ನಂತೆ ಬಿಡುಗಡೆ ಮಾಡಲಾಗಿದ್ದು, ಸಾರ್ವಜನಿಕರು ಬದಲಾವಣೆಯನ್ನು ಗಮನಿಸಿ, ತಮ್ಮ ಪಡಿತರ ಚೀಟಿಗೆ ಲಭ್ಯವಿರುವ ದಾಸ್ತಾನನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
Subscribe to:
Post Comments (Atom)
0 comments:
Post a Comment