ಕೊಪ್ಪಳ : ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿದಾರರ ಸಂಘವು ವಿದ್ಯುತ್ ಕಂಪನಿಗಳು ರಾಜ್ಯ ವ್ಯಾಪ್ತಿಯಲ್ಲಿ ಬರುವ ಗುತ್ತಿಗೆ ಕಾಮಗಾರಿಗಳನ್ನು ಕೋಟಿಗಟ್ಟಲೇ ಟೆಂಡರ್ ಕರೆದು ಕಂಪನಿಗಳಿಗೆ ಕಾಮಗಾರಿಗಳನ್ನು ನೀಡುತ್ತೀರುವುದನ್ನು ವಿರೋಧಿಸಿ ರಾಜ್ಯ ಸಂಘವು ಜೂನ್ ೧೫ ರಿಂದ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕೊಪ್ಪಳ ಜಿಲ್ಲಾ ಅನುಮತಿ ಪಡೆದ ವಿದ್ಯುತ್ ಗುತ್ತಿದಾರರ ಸಂಘವು ಬೆಂಬಲಿಸಿದೆ.
ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡುವಂತೆ ಆಗ್ರಹಿಸಿ ಈ ಮುಷ್ಕರ ನಡೆಸಲಾಗುತ್ತಿದೆ, ವಿದ್ಯುತ್ ಗುತ್ತಿಗೆದಾರರಿಗೆ ನ್ಯಾಯ ಸಿಗುವವರೆಗೆ ಮುಷ್ಕರ ಮುಂದುವರಿಯುವುದರಿಂದ ಗ್ರಾಹಕರು ಸಹಕರಿಸಬೇಕೆಂದು ಜಿಲ್ಲಾ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಮಹಾಬಳೇಶ್ವರ ಕೊಪ್ಪಳ, ಉಪಾಧ್ಯಕ್ಷ ಸುರ್ರಫ್ ರಾಜ್‌ರೆಹಮಾನ್,ಮೌಲಾಹುಸೇನ್ ಬನ್ನಿಕೊಪ್ಪ, ಸಹಕಾರ್ಯದರ್ಶಿ ಯಮನೂರಪ್ಪ ನಡುವಲಮನಿ,ಅನಿಲಕುಮಾರ ದೇಸಾಯಿ,ಕೊಪ್ಪಳ ತಾಲೂಕಾ ಅಧ್ಯಕ್ಷ ಎಂ.ನಾರಾಯಣ ಹುಲಗಿ, ಮಾಜಿ ಜಿಲ್ಲಾಧ್ಯಕ್ಷ ಕನಕಪ್ಪ ಚೆನ್ನದಾಸರ್,ಉಪಾಧ್ಯಕ್ಷ ಎಂ.ಡಿ.ಆಯೂಬ್, ನಿರ್ದೇಶಕ ರೋಶನ್‌ಅಲಿ ಮಂಗಳೂರು, ಬಸವರಾಜ್ ಪಟ್ಟಣಶೆಟ್ಟಿ, ಮಂಜುನಾಥ ಚಿಲವಾಡ್ಗಿ,ಮಂಜುನಾಥ ಪಲ್ಲೆದ್,ಎಂ.ಡಿ.ಜಾಫರ ಹಾಗೂ ಸರ್ವ ಸದಸ್ಯರು ತಿಳಿಸಿದ್ದಾರೆ.
0 comments:
Post a Comment