PLEASE LOGIN TO KANNADANET.COM FOR REGULAR NEWS-UPDATES

ಹೈದ್ರಾಬಾದ್ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಕೊಪ್ಪಳ ಜಿಲ್ಲೆಯು ಶಿಕ್ಷಣದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಜಿಲ್ಲೆಯಲ್ಲಿರುವ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಬಹುತೇಕವಾಗಿ ದಲಿತ ಹಿಂದುಳಿದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಅಬ್ಯಾಸ ಮಾಡುತ್ತಿದ್ದು ಅವುರುಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣಕ್ಕಾಗಿ ಜಿಲ್ಲಾ ಹಾಗೂ ತಾಲ್ಲೂಕ ಕೇಂದ್ರಗಳಲ್ಲಿನ ಬಾಲಕರ ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜುಗಳನ್ನು ಅವಲಂಭಿಸಿರುತ್ತಾರೆ. ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಪದವಿ ಪೂರ್ವ ಶಿಕ್ಷಣವು ಮಹತ್ವದ ಘಟ್ಟದ್ದಾಗಿದ್ದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾಧಿ ಹಾಕಿ ತಿರುವು ನೀಡುವ ಶಿಕ್ಷಣವಾಗಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಇದೇ ಶಿಕ್ಷಣವನ್ನು ಪಡೆಯಲು ವಿದ್ಯಾರ್ಥಿಗಳು ಹೆಣಗಾಡಬೇಕಾದ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಗೆ ಮೂಲ ಕಾರಣ ಕಾಲೇಜು ಕಟ್ಟಡದ ಅವ್ಯವಸ್ಥೆ ಹಾಗೂ ಉಪನ್ಯಾಸಕರ ಕೊರತೆ. ನಾಲ್ಕೂ ತಾಲ್ಲೂಕುಗಳಲ್ಲಿರುವ ಕಾಲೇಜು ಕಟ್ಟಡಗಳು ಬಹಳ ಹಳೇ ಕಟ್ಟಡಗಳಾಗಿದ್ದು ಕೊಪ್ಪಳದ ಬಾಲಕರ ಕಾಲೇಜು ನಿಜಮರ ಕಾಲದ್ದಾಗಿದೆ. ಸಾವಿರಾರು ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಇಂತಹ ಕಾಲೇಜುಗಳು ಶಿಥಿಲಾವಸ್ಥೆಯಲ್ಲಿದ್ದು ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಪಾಠ ಕೇಳುವ ಪರಿಸ್ಥಿತಿ ಬಂದೊದಗಿದೆ. ಇದಕ್ಕೆ ಕಳೆದ ಸಾಲಿನ ಬಾಲಕಿಯರ ಪದವಿ ಪೂರ್ವ ಕಾಲೆಜಿನಲ್ಲಿ ನಡೆದ ಘಟನೆಯೇ ಸ್ಪಷ್ಟ ಉದಾಹರಣೆಯಾಗಿದೆ. ಕಾಲೇಜಿನಲ್ಲಿ ತರಗತಿಗಳು ಕಾಲೇಜು ಹಾಗೂ ಹೈಸ್ಕೂಲ್ ಶಿಕ್ಷಣ ಪಾಳಿ ಪದ್ದತಿಯಲ್ಲಿ ನಡೆಯುತ್ತಿದ್ದು. ಜಿಲ್ಲೆಯಲ್ಲಿನ ಶೈಕ್ಷಣಿಕ ಪ್ರಗತಿ ಹಿನ್ನಡೆಗೆ ಹಿಡಿದ ಸ್ಪಷ್ಟ ಉದಾಹರಣೆಯಾಗಿದೆ. ಮತ್ತು ಯಾವುದೇ ಕಾಲೆಜುಗಳಲ್ಲಿ ಗ್ರಂಥಾಲಯದ ವ್ಯೆವಸ್ಥೆ ಇರುವುದಿಲ್ಲ. ೨೦೧೫-೧೬ ನೇ ಸಾಲಿಗೆ ೦೬ ಜಿಲ್ಲೆಗಳಿಗೆ ೩೨೩.೨೭ ಕೋಟಿ ರೂಗಳ ಅನುದಾನ ಬಳಕೆಗೆ ಮುಂದಾದ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯು ೦೬ ಜಿಲ್ಲೆಗಳ ಶೈಕ್ಷಣಿಕ ಹಾಗೂ ಆರೋಗ್ಯ ಮತ್ತು ಸಾಮಾಜಿಕ ಅಭಿವೃದ್ದಿಗೆ ಒತ್ತುಕೊಡುವುದು ಬಿಟ್ಟು ೦೬ ಜಿಲ್ಲೆಗಳ ಶಿಕ್ಷಣಕ್ಕಾಗಿ ಕೇವಲ ೧೩% ಮಾತ್ರ ಮೀಸಲಿಟ್ಟಿರುವುದು ದುರದೃಷ್ಟಕರ. ಕನಿಷ್ಟ ೩೦% ಶಿಕ್ಷಣಕ್ಕಾಗಿ ಅನುದಾನ ನೀಡಬೇಕಾಗಿತ್ತು. ೦೬ ಜಿಲ್ಲೆಗಳಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗಾಗಿ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಗ್ರಂಥಾಲಯಕ್ಕೆ ಪುಸ್ತಕ ಖರೀದಿಗಾಗಿ ಗ್ರಂಥಾಲಯ ಕಟ್ಟಡಕ್ಕಾಗಿ, ಕಾಲೇಜಿಗೆ ಹೆಚ್ಚುವರಿ ಕಟ್ಟಡಕ್ಕಾಗಿ ಅನುದಾನ ಬಿಡುಗಡೆಮಾಡಬೇಕು. ಈ ಬಗ್ಗೆ ಕೂಡಲೇ ಜಿಲ್ಲೆಯ ಜನ ಪ್ರತಿನಿಧಿಗಳು ಗಮನ ಹರಿಸಿ ಸೂಕ್ತ ಕ್ರಮವಹಿಸಲು ಎಸ್.ಎಫ್.ಐ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ..

Advertisement

0 comments:

Post a Comment

 
Top