PLEASE LOGIN TO KANNADANET.COM FOR REGULAR NEWS-UPDATES

ಯೋಗ ಬರೀ ವ್ಯಾಯಾಮವಲ್ಲ ಮನಸ್ಸು ದೇಹ ಸುಸ್ಥಿತಿಯಲ್ಲಿಡುವ ಒಂದು ಕ್ರಿಯೇ. ಯೋಗ ಪ್ರಾಣಯಾಮಗಳು ದೈಹಿಕ, ಮಾನಸಿಕ ಆರೋಗ್ಯಕ್ಕೆ ರಾಮಬಾಣವಾಗಿದೆ. ಯೋಗದಿಂದ ದೇಹದೊಳಗೆ ಪ್ರಾಣವಾಯು ಹೆಚ್ಚಾಗುತ್ತೆ ಮತ್ತು ಜೀವನದಲ್ಲಿ ಯೋಗ ಅಳವಡಿಕೆಯಿಂದ ಆರೋಗ್ಯ ವೃದ್ದಿ ಆಗುತ್ತೆ. ಇದರಿಂದ ದಿನವಿಡಿ ಚೈತನ್ಯದಾಯಕರಾಗಿರುತ್ತೆವೆ. ಎಂದು ಗಂಗಾವತಿ ತಾಲೂಕ ಪಂಚಾಯತ ಸದ್ಯಸರಾದ ರುದ್ರಪ್ಪ ಉಣ್ಣಿಕುರಿ ತಿಳಿಸಿದರು ಇವರು ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮದಲ್ಲಿ ಭಾರತ ಸರಕಾರ ನೆಹರು ಯುವ ಕೇಂದ್ರ ಕೊಪ್ಪಳ, ಬಸವೇಶ್ವರ ಯುವಕ ಸಂಘ (ರಿ) ವೆಂಕಟಗಿರಿ, ಲಕ್ಷೀವೆಂಕಟೇಶ್ವರ ಯುವಕ ಸಂಘ (ರಿ) ವೆಂಕಟಗಿರಿ ಮತ್ತು ಕೊಪ್ಪಳ ನಗರದ ವಂದೇಮಾತರಂ ಯುವ ಸೇವಾ ಸಂಘ (ರಿ), ಇವರ ಸಂಯುಕ್ತಾಶ್ರಯದಲ್ಲಿ ಗಂಗಾವತಿ ತಾಲೂಕ ಮಟ್ಟ ಯುವ ಸಂಸತ್ತಿನ ಅಣುಕು ಪ್ರದರ್ಶನ ಮತ್ತು ಯೋಗ ದಿಂದ ಶಾಂತಿ ಎಂಬ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಜೆ.ಡಿ.ಎಸ್ ಮುಂಖಡರಾದ ಮಂಜುನಾಥ ವಹಿಸಿದ್ದರು, ಮುಖ್ಯಅತಿಥಿಗಳಾಗಿ ವಿಮೋಚನಾ ಸಂಸ್ಥೆಯ ಸಿ.ಡಿ.ಪಿ ಸದಾಶಿವ ಕಾಂಬ್ಳೇ, ಆರ್ಟ ಆಫ್ ಲಿವೀಂಗ್‌ನ ಯುವಾಚಾರ್ಯ ಮತ್ತು ವಂದೇಮಾತರಂ ಯುವ ಸೇವಾ ಸಂಘದ ಅಧ್ಯಕ್ಷರಾದ ರಾಕೇಶ ಕಾಂಬ್ಳೇಕರ್. ಯುವ ಮುಂಖಡರಾದ ಪ್ರಕಾಶ ಎಂ, ಶ್ರೀಬಸವೇಶ್ವರ ಯುವಕ ಸಂಘದ ಅಧ್ಯಕ್ಷರಾದ ಇಂತಿಹಾಜ್ ಮುಜೆದಾರ್, ಶ್ರೀಲಕ್ಷೀವೆಂಕಟೇಶ್ವರ ಯುವಕ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಗಂಜಿ, ಪಂಚಾಯತ ಬಿಲ್‌ಕಲೆಕ್ಟರ್ ಯಮನೂರಪ್ಪ, ವೇದಿಕೆ ಮೇಲೆ ಉಪಸ್ಥಿತರಿದರು. ಪ್ರಾಸ್ತಾವಿಕವಾಗಿ ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವ ಪಡೆಯಾದ ಗವಿಸಿದ್ದಮ್ಮ ಹಿರೇಮಠ ಮಾಡಿದರು. ಯುವಕ ಸಂಘದ ಯಲ್ಲಪ್ಪ ತಾಳಿಕೇರಿ ನಿರೂಪಿಸಿದರು ಕಾರ್ಯಕ್ರಮನ್ನು ಅಮರನಾಥ ವಂದಿಸಿದ್ದರು.

Advertisement

0 comments:

Post a Comment

 
Top