
ಕಾರ್ಯಕ್ರಮದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಮ್.ಬಿ. ಪಾಟೀಲ ಅವರು, ತಾಯಂದಿರ ಷೋಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಮಹಿಳೆಯರಿಗೆ ಆಹಾರ ಧಾನ್ಯ ಉತ್ಪಾದನೆಯಲ್ಲಿ ಸ್ವಾವಲಂಭನೆಗೆ ಕರೆ ನೀಡಿದ ಅವರು, ನಮ್ಮ ಮನೆಯ ಅಂಗಳದಲ್ಲಿ ನಮ್ಮ ಆಹಾರ ಎಂಬ ಯುಕ್ತಿಯಂತೆ ಕುಟುಂಬಕ್ಕೆ ಬೇಕಾಗುವ ಆಹಾರವನ್ನು ನಾವೇ ಬೆಳೆದು ಸ್ವಾವಲಂಬಿಯಾಗಲು ತಿಳಿಸಿದರು.
ಗೃಹ ವಿಜ್ಞಾನದ ವಿಷಯ ತಜ್ಞೆ ಕವಿತ ಯ. ಉಳ್ಳಿಕಾಶಿ ಅವರು, ಗರ್ಭಿಣಿ-ಬಾಣಂತಿಯರಲ್ಲಿ ಉಂಟಾಗುವ ಷೋಷಕಾಂಶ ಕೊರತೆಗಳು ಹಾಗೂ ಅವುಗಳ ನಿರ್ವಹಣೆ ಹಾಗೂ ಸಮತೋಲನ ಆಹಾರದ ಬಗ್ಗೆ ತಿಳಿಸಿದರು. ದಿನನಿತ್ಯ ಸಿಗುವ ಆಹಾರದಿಂದ ತಯಾರಿಸಬಹುದಾದ ಪೌಷ್ಠಿಕ ಆಹಾರಗಳ ಪ್ರಾತ್ಯಕ್ಷತೆಯನ್ನು ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಯಿತು. ಸುಮಂಗಲ ಸಜ್ಜನ, ಮೇಲ್ವಿಚಾರಕಿ ಇವರು ಇಲಾಖೆಯ ಸೌಲಭ್ಯ ಬಗ್ಗೆ ತಿಳಿಸಿದರು. ವಿಜಯಕುಮಾರ ರೆಡ್ಡಿ, ಪ್ರಗತಿಪರ ರೈತರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
0 comments:
Post a Comment