PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ದಿನಾಂಕ 11-06-2015ರಂದು ಪರಮಪೂಜ್ಯ ಶ್ರೀ ಮ.ನಿ.ಪ್ರ.ಜ.ಲಿಂ.ಮರಿಶಾಂತವೀರ ಮಹಾಸ್ವಾಮಿಗಳವರ 48ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ನಿಮಿತ್ಯ ಶ್ರೀ ಎಸ್.ಎಂ.ಕಂಬಾಳಿಮಠ ಇವರ ಶ್ರೀಗಳ ಕುರಿತಾದ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕಂಬಾಳಿಮಠರವರು ಮಾತನಾಡಿ ಹಸಿದವರಿಗೆ ಅನ್ನ, ಬಳಲುವವರಿಗೆ ಆಯುರ್ವೇದ, ಬದುಕಿನ ಬವಣೆಗಳಲ್ಲಿ ನೊಂದು-ಬೆಂದು ಬಂದವರಿಗೆ ಆಧ್ಯಾತ್ಮದ ಅಮೃತ, ದಾಸೋಹವನ್ನು ನಿತ್ಯಾಸತ್ಯ ಕಾಯಕವನ್ನಾಗಿಸಿಕೊಂಡ ಶ್ರೀ ಮಠದ ಪೀಠಾಧಿಪತಿಗಳಲ್ಲಿ ಪರಮಪೂಜ್ಯರು ಪ್ರಾತಃಸ್ಮರಣೀಯರು ಎಂದು ಶ್ರೀಗಳ ಸಾಧನೆಗಳನ್ನು ನೆನೆದರು. ಪದವಿಪೂರ್ವ ಪ್ರಾಚಾರ್ಯರಾದ ಶ್ರೀ ಹೆಚ್.ಪರೀಕ್ಷಿತರಾಜ ಮಾತನಾಡಿ ಶ್ರೀಗಳು ಕೆಲಸ ಮಾಡುವ ರೈತರು, ಕೂಲಿ ಕಾರ್ಮಿಕರ ಬಗ್ಗೆ ಅಪಾರವಾದ ಕಾಳಜಿಯನ್ನು ಇಟ್ಟುಕೊಂಡಿದ್ದರು ಎಂದು ಶ್ರೀಗಳವರನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಎಂ.ಎಸ್.ದಾದ್ಮಿ ಮಾತನಾಡಿ ಜಗತ್ತಿಗೆ ಕೊಡುಗೆ ಕೊಟ್ಟವರನ್ನ ನೆನೆಯೋದೆ ನಮ್ಮ ಧರ್ಮ ಹಾಗೂ ಈ ನಾಡಿಗೆ ತ್ರಿವಿಧ ದಾಸೋಹವನ್ನು ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೀ ಮರಿಶಾಂತವೀರ ಮಹಾಶಿವಯೋಗಿಗಳು ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ಈ ನಾಡಿಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಡಾ.ದಯನಂದ ಸಾಳುಂಕೆ ನಿರ್ವಹಿಸಿದರೆ ವಂದನಾರ್ಪಣೆಯನ್ನು ಡಾ. ವಿರೇಶ ನಡೆಸಿಕೊಟ್ಟರು.

Advertisement

0 comments:

Post a Comment

 
Top