ಕೊಪ್ಪಳ : ಶಿಕ್ಷಣ ಕೇತ್ರಕ್ಕೆ ರವಿಂದ್ರನಾಥ ಠಾಗೋರರ ಕೊಡುಗೆ ಅನನ್ಯ ಎಂದು ಹಿರಿಯ ಸಾಹಿತಿ, ನೇಹ ಸಾಂಸ್ಕೃತಿಕ ಸಂಸ್ತೆಯ ಅದ್ಯಕ್ಷರಾದ ಮಾಹಂತೇಶ ಮಲ್ಲನಗೌಡ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಸ್ಥರಾದ ಶಿವಕುಮಾರ ಕುಕನೂರ ವಹಿಸಿದ್ದರು, ಖಾಜಾವಲಿ ಕುದರಿಮೋತಿ, ರಾಮು ಪೂಜಾರ, ರಾಕೇಶ ಕಾಂಬೇಳಕರ್, ದೇವಾನಂದ, ಅಮರೇಶ ವೇಧಿಕೆಯಲ್ಲಿ ಉಪಸ್ಥಿತರಿದ್ದರು, ಶಿಕ್ಷಕಿ ಸುನಂದಾ ಬಳಗಾನೂರ ಠಾಗೋರ ಜೀವನದ ಬಗ್ಗೆ ಕುರಿತು ಮಾತನಾಡಿದರು, ಶಿಕ್ಷಕಿ ರೇಣುಕಾ ನೀರೂಪಿಸಿ ವಂದಿಸಿದರು.
ಕೊನೆಯಲ್ಲಿ ಠಾಗೋರ ಜನ್ಮದಿನಾಚರಣೆ ನಿಮಿತ್ಯ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ರವಿಕುಮಾರ ಉಪ್ಪಾರ, ದ್ವೀತಿಯ ರಾಹುಲ್ ಚಿನ್ನಿ, ತೃತೀಯ ಕಿರಣಕುಮಾರ ಕವಲೂರ, ಸಮಾಧಾನಕರ ಬಹುಮಾನ ಶೈಲಜಾ, ಗವಿಸಿದ್ದಪ್ಪ ಕುಕನೂರ, ವಿನೋದ ಕುಮಾರ ಗಣಚಾರಿ, ಪ್ರೇಮಾ ಮೇಧಾ ಇವರಿಗೆ ಬಹುಮಾನ ವಿತರಿಸಲಾಯಿತು.
0 comments:
Post a Comment