PLEASE LOGIN TO KANNADANET.COM FOR REGULAR NEWS-UPDATES


ಕನಕಗಿರಿ ೬  : ಗಜಲ್ ಕವಿ ಎಂದೇ ಖ್ಯಾತಿ ಹೊಂದಿರುವ ಕನಕಗಿರಿಯ ಅಲ್ಲಾಗಿರಿರಾಜ್ ಇವರ ನೂರ್ ಗಜಲ್ ಕೃತಿಗೆ ೨೦೧೫ ನೇ ಸಾಲಿನ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ ಬಂದಿದೆ. 
ಮಂಡ್ಯ ಜಿಲ್ಲೆಯ ಯುವ ಬರಹಗಾರರ ಬಳಗ ನೀಡುವ ಈ ಕಾವ್ಯ ಪ್ರಶಸ್ತಿ ಪ್ರದಾನವು ಇದೆ ಶನಿವಾರ ಮೆ ೯ ರಂದು ಮಂಡ್ಯ ನಗರದ ಗಾಂಧಿ ಭವನದಲ್ಲಿ ಹೆಸರಾಂತ ಕನ್ನಡದ ಕವಿ ಡಾ. ಸಿಪಿಕೆ ಅವರಿಂದ ಗಜಲ್ ಕವಿ ಅಲ್ಲಾಗಿರಿರಾಜ್ ಇವರಿಗೆ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಗುವದು. ಮತ್ತು ಸದರಿ ಸಮಾರಂಭವನ್ನು ಕನ್ನಡದ ಪ್ರಸಿದ್ದ ಸಾಹಿತಿ ಹಾಗೂ ವಿಶ್ರಾಂತ ಕುಲಪತಿ ಕರ್ನಾಟಕ ರತ್ನ ನಾಡೋಜ ಡಾ.ದೇ.ಜ.ಗೌ ಅವರು ಉದ್ಘಾಟಿಸುವರು ಎಂದು ಮಂಡ್ಯ ಜಿಲ್ಲಾ ಯುವ ಬರಹಗಾರರ ಬಳಗದ ಅದ್ಯಕ್ಷ ಸತೀಶ್ ಜವರೇಗೌಡ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ. 
ಅಭಿನಂದನೆ:- ನೂರ್ ಗಜಲ್ ಕೃತಿಯ ಮೂಲಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹೆಸರು ಮಾಡಿರುವ   ಅಲ್ಲಾಗಿರಿರಾಜ್ ಇವರಿಗೆ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ ದೊರೆತಿರುವದು ಸಂತಸದ ಸಂಗತಿ ಎಂದು ದಲಿತ ಸಾಹಿತ್ಯ ಪರಿಷತ್ತಿನ ತಾಲೂಕ ಅದ್ಯಕ್ಷರಾದ ರಮೇಶ ಗಬ್ಬೂರ. ಅಲ್ಲಮ ಪ್ರಕಾಶನದ ಡಾ.ಸಿ.ಬಿ ಚಿಲಕರಾಗಿ ದಾಸ ಸಾಹಿತ್ಯ ಸಂಶೋದಕರಾದ ಡಾ.ಪವನಕುಮಾರ ಗುಂಡೂರು ಇವರು ಅಭಿನಂದನೆ ಸಲ್ಲಿಸಿದ್ದಾರೆ.

Advertisement

0 comments:

Post a Comment

 
Top