ಹೊಸಪೇಟೆ: ಭಾರತೀಯ ರಿಜರ್ವ ಬ್ಯಾಂಕಿನಿಂದ ಶಾಖೆಗಳನ್ನು ಆರಂಭಿಸಲು ಅನುಮತಿ ದೊರಕಿದೆ ಎಂದು ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಸಂತಸವನ್ನು ಹಂಚಿಕೊಂಡು ಅವರು, ೩ಶಾಖೆಗಳಿಗೆ ಭಾರತೀಯ ರಿಜರ್ವ ಬ್ಯಾಂಕಿನಿಂದ ಅನುಮತಿ ದೊರಕಿದ್ದು, ಬಳ್ಳಾರಿ, ತೋರಣಗಲ್, ಕೊಟ್ಟೂರು ನಗರಗಳಲ್ಲಿ ನೂತನ ಶಾಖೆ ಆರಂಭಿಸಲಾಗುವುದು ಎಂದರು. ೬ತಿಂಗಳು ಬಿಲ್ಡಿಂಗ್ ಅಂತಿಮಗೊಳಿಸಲು ಹಾಗೂ ಒಂದುವರೆ ವರ್ಷದಲ್ಲಿ ಶಾಖೆ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ನೇಪಾಳದ ಪ್ರಕೃತಿ ವಿಕೋಪ ಸಂತ್ರಸ್ಥರ ನಿಧಿಗೆ ಸಹಾಯ ಧನ ಕಳಿಸಲು ಶುಲ್ಕ ರಹಿತ ಸೇವೆಯನ್ನು ಬ್ಯಾಂಕ್ ಆರಂಭಿಸಲಾಗಿದೆ ಎಂದರು. ನೂತನವಾಗಿ ಪಾನ್ ಕಾರ್ಡು ಸೇವೆಯನ್ನು ಆರಂಭಿಸಲಾಗಿದೆ ಎಂದರು. ಬ್ಯಾಂಕಿನ ವಾರ್ಷಿಕ ವಹಿವಾಟನ್ನು ೩೫೦ಕೋಟಿಗೆ ಹೆಚ್ಚಿಸುವ ಗುರಿಯೊಂದಿಗೆ ಶಾಖೆ ಹೊಂದಿರುವ ನಗರದ ಜನರ ಆರ್ಥಿಕ ವ್ಯವಹಾರ ವೃದ್ಧಿಯಲ್ಲಿ ಅಲ್ಪ ಕಾಣಿಕೆ ಸಲ್ಲಿಸಲು ಸಾಧ್ಯವಾಗುತ್ತದೆ. ಈ ಗುರಿಯನ್ನು ಹೊಂದಲಾಗಿದೆ. ಪ್ರತಿಭಾವಂತ ಹಾಗೂ ಆರ್ಥಿಕ ದುರ್ಬಲ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನವನ್ನು ಶಾಖೆ ಹೊಂದಿರುವ ಎಲ್ಲಾ ತಾಲೂಕುಗಳಿಗೆ ವಿಸ್ತರಿಸಲಾಗುವುದು ಎಂದರು. ಬ್ಯಾಂಕಿನ ಸಿಬ್ಬಂದಿ ಕಲ್ಯಾಣದ ವಿಷಯವಾಗಿ ಸಿಬ್ಬಂದಿಗಳಿಗೆ ವಿಮಾ ಸೌಲಭ್ಯದ ಜೊತೆಗೆ ಇತರೆ ಸೌಲಭ್ಯಗಳ ಯೋಜನೆ ಅಳವಡಿಸಲಾಗಿದೆ ಎಂದರು. ಬ್ಯಾಂಕಿನ ಚಟುವಟಿಕೆ, ಸಾಧನೆ ಹಾಗೂ ಯೋಜನೆಗಳ ಪ್ರಚಾರಕ್ಕಾಗಿ ವಿಕಾಸ ವಿಹಾರ ಹೌಸ್ ಮ್ಯಾಗಜೀನ್ ಶೀಘ್ರದಲ್ಲಿ ಪುನಃ ಆರಂಭಿಸಲಾಗುವುದು ಎಂದು ವಿವರ ನೀಡಿದರು. ಬ್ಯಾಂಕಿನ ನಿರ್ದೇಶಕರಾದ ಚಂದ್ರಹಾಸ್, ಅನಂತ ಜೋಷಿ, ಬ್ಯಾಂಕಿನ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ ಹಿರೇಮಠ, ಉದ್ಯೋಗಿ ಸ್ಪೂರ್ತಿ ಹಾಜರಿದ್ದರು.
0 comments:
Post a Comment