ಕೊಪ್ಪಳ: ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿ.ಯು.ಸಿ ಪಲಿತಾಂಶ ಪ್ರಕಟವಾಗಿದ್ದು ವಾಣಿಜ್ಯ ವಿಭಾಗದಲ್ಲಿ ಕುಮಾರಿ ಅಂಜನಾ ಗೌತಮಚಂದ ಮೆಹತಾ ಶೇ ೯೫.೩೩ (೫೭೨ ಅಂಕಗಳು), ರಾಖೀ ರಾಜೇಶ ಮೂತಾ ಶೇ ೯೩.೦೦ (೫೫೮ ಅಂಕಗಳು), ರವಿ ಹುಸೇನಪ್ಪ ಮದನಾ ಶೇ. ೯೨.೦೫(೫೫೫), ವಂದನಾ ವಿನೋದಕುಮಾರ ಚೋಪ್ರಾ ಶೇ ೮೫.೦೫ (೫೧೩ ಅಂಕಗಳು), ಹನುಮೇಶ ಫಕೀರಪ್ಪ ತಾಳಕೇರಿ ಶೇ ೮೫.೧೬ (೫೧೧ ಅಂಕಗಳು), ವಿಜ್ಞಾನ ವಿಭಾಗದಲ್ಲಿ ಕೆ.ನವೀನ ಚಂದ್ರಶೇಖರ ಶೇ ೯೦.೬೬ (೫೪೪ ಅಂಕಗಳು), ಬಸವರಾಜ ಮಲ್ಲೇಶಪ್ಪ ಬಿನ್ನಾಳ ೮೯.೮೩ (೫೩೯ ಅಂಕಗಳು), ಕಲಾ ವಿಭಾಗದಲ್ಲಿ ವೆಂಕಟೇಶ ಗೋಪಾಲ ಶೇ ೮೮.೩೩ (೫೩೦ ಅಂಕಗಳು) ಒಟ್ಟು ೦೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ಲ್ಲಿ ಉತ್ತಿರ್ಣರಾಗಿರುತ್ತಾರೆ. ಇದಲ್ಲದೆ ೧೮೫ ವಿದ್ಯಾರ್ಥಿಗಳು ಪ್ರಥಮ ವರ್ಗದಲ್ಲಿ, ೯೫ ವಿದ್ಯಾರ್ಥಿಗಳು ದ್ವಿತೀಯ ವರ್ಗದಲ್ಲಿ, ೮೫ ವಿದ್ಯಾರ್ಥಿಗಳು ಸಾಮನ್ಯ ವರ್ಗದಲ್ಲಿ ಉತ್ತೀರ್ಣರಾಗಿರುತ್ತಾರೆ. ಕಾಲೇಜಿನ ಒಟ್ಟು ಫಲಿತಾಂಶ ಶೇಕಡ ೫೪.೦೪% ಬಂದಿರುತ್ತದೆ.
ಕ್ರ. ಸಂ. ವಿಭಾಗ ಒಟ್ಟು ಪರೀಕ್ಷೆಗೆ ಹಾಜರಾದವರ ಸಂಖ್ಯೆ ಪಾಸಾದ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾವಾರು (%)
೧ ಕಲಾ ೨೮೪ ೧೩೯ ೪೮.೪೩
೨ ವಾಣಿಜ್ಯ ೨೨೧ ೧೩೪ ೬೦.೬೩
೩ ವಿಜ್ಞಾನ ೧೧೩ ೬೧ ೫೩.೯೮
ಪೂಜ್ಯ ಶ್ರೀಗಳು, ಆಡಳಿತ ಮಂಡಳಿಯವರು, ಪ್ರಾಚಾರ್ಯರು ಹಾಗೂ ಸಕಲ ಸಿಬ್ಬಂದಿವರ್ಗದವರು ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.
0 comments:
Post a Comment