ಕೊಪ್ಪಳ ಮಹಿಳಾ ಕಾಲೇಜಿಗೆ ೧.೦೮ ಎಕರೆ ಜಮೀನನ್ನು ಮಂಜೂರು ಮಾಡಿ ಬೆಂಗಳೂರಿನ ಕಂದಾಯ ಇಲಾಖೆ ಸಹಾಯಕ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ವರ್ಷದ ಹಿಂದೆಯೇ ಕೊಪ್ಪಳ ನಗರಕ್ಕೆ ಮಹಿಳಾ ಕಾಲೇಜು ಮಂಜೂರಾಗಿತ್ತು. ಆದರೆ, ಜಮೀನಿನ ಕೊರತೆಯಿಂದಾಗಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದ ಕಟ್ಟಡದಲ್ಲಿ ಕಾರ್ಯಾಲಯ ಮತ್ತು ತರಗತಿಗಳನ್ನು ಸರ್ದಾರಗಲ್ಲಿ ಶಾಲೆಯ ಆವರಣದ ಗೋದಾಮು ಹಾಗೂ ವರ್ಗ ಕೋಣೆಗಳಲ್ಲಿ ನಡೆಸಲಾಗುತ್ತಿತ್ತು. ಮಹಿಳಾ ಕಾಲೇಜಿಗೆ ಜಮೀನು ಮಂಜೂರಾತಿಗೆ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಶಾಸಕರು, ಕಾಲೇಜು ಅಭಿವೃದ್ಧಿ ಸಮಿತಿ(ಸಿಡಿಸಿ) ಪ್ರಾಚಾರ್ಯರ ಸತತ ಪ್ರಯತ್ನದಿಂದಾಗಿ ನಗರದ ಸಾರ್ವಜನಿಕ ಮೈದಾನದ ಬಳಿ ೧.೦೮ ಎಕರೆ ಜಾಗದ ಕಾರ್ಯ ನಡೆದು ಜಮೀನು ಮಂಜೂರು ಮಾಡಲಾಗಿದೆ. ಮಹಿಳಾ ಕಾಲೇಜಿಗೆ ಜಮೀನು ಮಂಜೂರಾಗಿದ್ದಕ್ಕೆ ಎಲ್ಲ ಸದಸ್ಯರು, ಸಿಬ್ಬಂದಿಗಳು, ವಿದ್ಯಾರ್ಥಿನಿಯರು ಸಂತಸ ವ್ಯಕ್ತ ಪಡಿಸಿದ್ದಾರೆ ಎಂದು ಮಹಿಳಾ ಕಾಲೇಜು ಪ್ರಭಾರಿ ಪ್ರಾಚಾರ್ಯ ಪ್ರಭುರಾಜ ಕೆ ನಾಯಕ
ತಿಳಿಸಿದ್ದಾರೆ.
Home
»
koppal district information
»
Koppal News
»
school college koppal district
» ಮಹಿಳಾ ಕಾಲೇಜಿಗೆ ಜಮೀನು ಮಂಜೂರು
Subscribe to:
Post Comments (Atom)
0 comments:
Post a Comment