PLEASE LOGIN TO KANNADANET.COM FOR REGULAR NEWS-UPDATES

 ಪ್ರಸಕ್ತ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ 148 ಗ್ರಾಮ ಪಂಚಾಯ್ತಿಗಳಿಗೆ 2015 ರ ಜೂ. 02 ರಂದು ಚುನಾವಣೆ ಜರುಗಲಿದೆ.  ಕೊಪ್ಪಳ ತಾಲೂಕಿನಲ್ಲಿ 38 ಗ್ರಾಮ ಪಂಚಾಯತಿಗಳಲ್ಲಿ 736 ಸದಸ್ಯ ಸ್ಥಾನಗಳು, ಗಂಗಾವತಿಯ 40 ಗ್ರಾಮ ಪಂಚಾಯತಿಗಳಲ್ಲಿ 750, ಯಲಬುರ್ಗಾದ 35 ಗ್ರಾ.ಪಂ. ಗಳಲ್ಲಿ 608 ಹಾಗೂ ಕುಷ್ಟಗಿ ತಾಲೂಕಿನ 35 ಗ್ರಾಮ ಪಂಚಾಯತಿಗಳಲ್ಲಿ 607 ಸೇರಿದಂತೆ ಜಿಲ್ಲೆಯ ಒಟ್ಟು 148 ಗ್ರಾಮ ಪಂಚಾಯತಿಗಳ 2701 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

     ಜಿಲ್ಲೆಯ ಒಟ್ಟು 157 ಗ್ರಾಮ ಪಂಚಾಯಿತಿಗಳ ಪೈಕಿ ಯಲಬುರ್ಗಾ ತಾಲೂಕಿನ ಕುಕನೂರು, ಕುಷ್ಟಗಿ ತಾಲೂಕಿನ ತಾವರಗೇರಾ, ಗಂಗಾವತಿ ತಾಲೂಕಿನ ಕನಕಗಿರಿ ಮತ್ತು ಕಾರಟಗಿ ಹಾಗೂ ಕೊಪ್ಪಳ ತಾಲೂಕಿನ ಭಾಗ್ಯನಗರ ಸೇರಿದಂತೆ ಒಟ್ಟು 05 ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳನ್ನಾಗಿ ಮೇಲ್ದರ್ಜೆಗೇರಿಸಿರುವುದರಿಂದ, ಇಲ್ಲಿ ಚುನಾವಣೆ ನಡೆಯುವುದಿಲ್ಲ.  ಹಾಗೂ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾ.ಪಂ. ಅವಧಿಯು 2015 ರ ನವೆಂಬರ್‍ಗೆ, ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ, ಗಂಗಾವತಿ ತಾಲೂಕಿನ ಸಿದ್ದಾಪುರ ಮತ್ತು ಮುಸ್ಟೂರು ಸೇರಿದಂತೆ 03 ಗ್ರಾಮ ಪಂಚಾಯಿತಿಗಳ ಅವಧಿಯು 2016 ರ ಮಾರ್ಚ್‍ನಲ್ಲಿ ಮುಕ್ತಾಯಗೊಳ್ಳುವುದರಿಂದ, ಒಟ್ಟು 09 ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿ, ಉಳಿದ 148 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ.   
     ಪ್ರತಿಯೊಂದು ಗ್ರಾಮ ಪಂಚಾಯ್ತಿಯು ಹೊಂದಿರುವ ಸದಸ್ಯ ಸ್ಥಾನಗಳ ವಿವರ ಇಂತಿದೆ. ಕೊಪ್ಪಳ ತಾಲ್ಲೂಕಿನ ಕವಲೂರು ಗ್ರಾಮ ಪಂಚಾಯ್ತಿ 21 ಸದಸ್ಯ ಸ್ಥಾನಗಳನ್ನು ಹೊಂದಿದೆ. ಹಟ್ಟಿ -19, ಅಳವಂಡಿ-20, ಬೋಚನಹಳ್ಳಿ-20, ಬೆಟಗೇರಿ-15, ಮತ್ತೂರು-21, ಕಾತರಕಿ-ಗುಡ್ಲಾನೂರು-19, ಬಿಸರಳ್ಳಿ-18, ಹಿರೇಸಿಂದೋಗಿ-18, ಕೋಳೂರು-21, ಹಲಗೇರಿ-18, ಓಜನಹಳ್ಳಿ-23, ಮಾದಿನೂರು-09, ಕಿನ್ನಾಳ-25, ಲೇಬಗೇರಿ-17, ಇರಕಲ್ಲಗಡ-24, ಚಿಕ್ಕಬೊಮ್ಮನಾಳ-19, ಹಾಸಗಲ್-20, ತಾವರಗೇರಾ-24, ಇಂದರಗಿ-14, ಬೂದಗುಂಪಾ-25, ಬಂಡಿಹರ್ಲಾಪುರ-20, ಶಿವಪುರ-14, ಹುಲಿಗಿ-20, ಮುನಿರಾಬಾದ್ (ಯೋಜನಾ ಗ್ರಾಮ)- 25, ಹೊಸಳ್ಳಿ- 29, ಅಗಳಕೇರಾ- 13, ಹಿಟ್ನಾಳ- 19, ಗುಳದಳ್ಳಿ- 15, ಗಿಣಿಗೇರಾ- 28, ಹಿರೇಬಗನಾಳ- 24, ಕುಣಿಕೇರಿ-17, ಗೊಂಡಬಾಳ- 17, ಬಹದ್ದೂರ ಬಂಡಿ-25, ಹಾಲವರ್ತಿ-17, ಕಲಕೇರಾ-14, ಬೇವಿನಹಳ್ಳಿ-14 ಹಾಗೂ ವಣಬಳ್ಳಾರಿ ಗ್ರಾಮ ಪಂಚಾಯತಿಯು 15 ಸದಸ್ಯ ಸ್ಥಾನಗಳನ್ನು ಹೊಂದಿದೆ.
    ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮ ಪಂಚಾಯತಿಯು 22 ಸದಸ್ಯ ಸ್ಥಾನಗಳನ್ನು ಹೊಂದಿದ್ದು, ತುಗ್ಗಲದೋಣಿ- 17, ಹನಮನಾಳ- 12, ಮಾಲಗಿತ್ತಿ- 15, ಜಾಗೀರಗುಡದೂರ- 15, ಯರಗೇರಾ- 20, ಹನುಮಸಾಗರ- 38, ಕಾಟಾಪುರ- 11, ಹೂಲಗೇರಾ- 15, ಅಡವಿಬಾವಿ- 23, ಚಳಗೇರಾ- 24, ಬೆನಕನಾಳ- 24, ಹಿರೇಗೊಣ್ಣಾಗರ- 14, ಹಿರೇಬನ್ನಿಗೋಳ-12, ಕೊರಡಕೇರಾ- 14, ತಳುವಗೇರಾ- 19, ಬಿಜಕಲ್- 23, ದೋಟಿಹಾಳ- 14, ಕ್ಯಾದಿಗುಪ್ಪ- 16, ಮುದೇನೂರ- 13, ಕಂದಕೂರ- 16, ಹಿರೇಮನ್ನಾಪುರ- 25, ಜುಮಲಾಪುರ- 25, ಕಿಲ್ಲಾರಹಟ್ಟಿ- 26, ಮೆಣೆದಾಳ- 19   ಸಂಗನಾಳ-16, ಹಿರೇನಂದಿಹಾಳ-13, ಅಂಟರಠಾಣ-11, ಕೇಸೂರು-16, ಲಿಂಗದಹಳ್ಳಿ-14, ಗುಮಗೇರಾ-13, ಬಿಳೇಕಲ್-12, ತುಮರಿಕೊಪ್ಪ-14, ಹಾಬಲಕಟ್ಟಿ-13 ಮತ್ತು ಶಿರಗುಂಪಿ ಗ್ರಾ.ಪಂ. 13 ಸದಸ್ಯ ಸ್ಥಾನ ಹೊಂದಿದೆ.
     ಯಲಬುರ್ಗಾ ತಾಲೂಕಿನಲ್ಲಿ ಮುಧೋಳ ಗ್ರಾಮ ಪಂಚಾಯತ್ 18 ಸದಸ್ಯ ಸ್ಥಾನ ಹೊಂದಿದೆ.  ಅದೇ ರೀತಿ ಕರಮುಡಿ- 18, ಬಳ್ಳೂಟಗಿ- 18, ಬಂಡಿ- 16, ಗೆದಿಗೇರಿ- 21, ವಜ್ರಬಂಡಿ- 19, ಹಿರೇಅರಳಹಳ್ಳಿ- 21, ಮಾಟಲದಿನ್ನಿ- 18, ಹಿರೇವಂಕಲಕುಂಟಾ- 21, ತಾಳಕೇರಿ- 14, ಗಾಣದಾಳ- 20, ಗುನ್ನಾಳ- 21, ಬೇವೂರ- 17, ಕುದರಿಮೋತಿ- 16, ಹಿರೇಬಿಡನಾಳ- 14, ಮಂಗಳೂರ- 21, ವಣಗೇರಿ- 20, ಮುರಡಿ- 20, ಚಿಕ್ಕಮ್ಯಾಗೇರಿ- 20, ಬಳಗೇರಿ- 18, ಶಿರೂರ- 19, ಬೆಣಕಲ್- 13, ಭಾನಾಪುರ- 14, ತಳಕಲ್- 19, ಇಟಗಿ- 15, ಬನ್ನಿಕೊಪ್ಪ- 13, ಮಂಡಲಗೇರಿ- 17, ಯರೇಹಂಚಿನಾಳ- 17, ಸಂಗನಾಳ- 8, ಕಲ್ಲೂರ- 9, ರಾಜೂರ- 16, ತುಮ್ಮರಗುದ್ದಿ-14, ನೆಲಜೇರಿ-13, ಬೋದೂರ-15 ಮತ್ತು ಮಸಬಹಂಚಿನಾಳ- ಗ್ರಾಮ ಪಂಚಾಯತಿಯು 11 ಸದಸ್ಯ ಸ್ಥಾನಗಳ ಬಲ ಹೊಂದಿದೆ.
     ಗಂಗಾವತಿ ತಾಲೂಕಿನ ಆನೆಗುಂದಿ ಗ್ರಾ.ಪಂ. 14 ಸದಸ್ಯ ಸ್ಥಾನ ಹೊಂದಿದೆ.  ಸಂಗಾಪುರ- 14, ಸಣಾಪುರ-08, ಮಲ್ಲಾಪುರ- 15, ಚಿಕ್ಕಜಂತಕಲ್- 26, ಡಣಾಪುರ- 15, ಜಂಗಮರ ಕಲ್ಗುಡಿ-13, ಉಳೆನೂರು- 20, ಬೆನ್ನೂರು- 17, ಬೂದಗುಂಪಾ- 21, ಯರಡೋಣಾ- 18, ಶ್ರೀರಾಮನಗರ- 24, ಮರಳಿ- 20, ವಡ್ಡರಹಟ್ಟಿ- 33, ಬಸಾಪಟ್ಟಣ- 23, ವೆಂಕಟಗಿರಿ- 24, ಆಗೋಲಿ- 14, ಚಿಕ್ಕಬೆಣಕಲ್- 24, ಚಿಕ್ಕಮಾದಿನಾಳ- 19, ಸುಳೇಕಲ್- 17, ಹಿರೇಖೇಡ- 18, ಕೇಸರಹಟ್ಟಿ- 23, ಹೇರೂರು- 22, ಹೊಸಕೇರಾ- 16, ಹಣವಾಳ- 19, ಗುಂಡೂರು- 24, ಮರ್ಲಾನಹಳ್ಳಿ- 19, ಹುಳ್ಕಿಹಾಳ- 19, ಚಳ್ಳೂರು- 13, ಮೈಲಾಪುರ-18, ಚಿಕ್ಕಡಂಕನಕಲ್- 14, ಗೌರಿಪುರ- 15, ಹುಲಿಹೈದರ- 23, ಬಸರಿಹಾಳ-13, ಕರಡೋಣಾ- 19, ನವಲಿ- 25, ಬೇವಿಹಾಳ- 22, ಬರಗೂರು-16 ಹಾಗೂ ಮುಸಲಾಪುರ ಗ್ರಾ.ಪಂ. 20 ಸದಸ್ಯ ಸ್ಥಾನಗಳನ್ನು ಹೊಂದಿದೆ .

Advertisement

0 comments:

Post a Comment

 
Top