PLEASE LOGIN TO KANNADANET.COM FOR REGULAR NEWS-UPDATES

ಅಖಿಲ ಕರ್ನಾಟಕ ಜನ ಶಕ್ತಿ ವೇದಿಕೆಯಿಂದ ಬೃಹತ್ ಹೋರಾಟ ಉಸ್ತುವಾರಿ ಸಚಿವರ ಮತ್ತು ಮುಖ್ಯಮಂತ್ರಿಗಳ   ಪ್ರತಿಕೃತಿ ದಹನ .
ಗದಗ : ಗದಗಿನ ಗಾಂಧಿ ಸರ್ಕಲ್ ವೃತ್ತದಲ್ಲಿ  ಅಖಿಲ ಕರ್ನಾಟಕ ಜನ ಶಕ್ತಿ ವೇದಿಕೆಯಿಂದ ಬೃಹತ್ ಹೋರಾಟ ನಡೆಯಿತು.   ಉಸ್ತುವಾರಿ ಸಚಿವರ ಮತ್ತು ಮುಖ್ಯಮಂತ್ರಿಗಳ ಮೇರವಣಿಗೆ ಮುಖಾಂತರ ಪ್ರತಿಕೃತಿ ದಹನವನ್ನು ವೇದಿಕೆಯ ಕಾರ್ಯಕರ್ತರು ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಧ್ಯಕ್ಷರಾದ ಸಯ್ಯದ್ ಖಾಲಿದ ಕೊಪ್ಪಳ ಅವರು  ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಯ ರೈತರ ಸಾಲಾಮನ್ನಾ ಮಾಡಬೇಕು. ಹೈದರಾಬಾದ ಕರ್ನಾಟಕದಂತೆ ಉತ್ತರ ಕರ್ನಾಟಕಕ್ಕೂ ಮೀಸಲಾತಿ ಕೊಡಬೇಕು. ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್ ಮಂಡನೆ ಮಾಡಬೇಕು, ಗದಗ ಜಿಲ್ಲೆಗೆ ವಾರಕ್ಕೆ ಕನಿಷ್ಠ ೨ ಸಲವಾದರು ನೀರು ಪೊರೈಕೆ ಮಾಡಬೇಕು. ಗದಗ ಜಿಲ್ಲೆಯಲ್ಲಿ ಕೈಗಾರಿಕೆಗಳು ಸ್ಥಾಪನೆ ಯಾಗಬೇಕು.ಎಂದು ಪ್ರತಿಭಟನಾ ವೇಳೆ ಹೇಳಿದರು. ಮತ್ತು ಜಿಲ್ಲಾ ಅಧ್ಯಕ್ಷರಾದ ರವಿ ಕವಡಕಿ ಅವರು ಮಾತನಾಡಿ ಎಂ ಇ.ಎಸ್. ಸಂಘಟನಿಯನ್ನು ನಿಷೇಧಿಸಬೇಕು. ಗದಗ-ಮುಂಡರಗಿ-ಹೂವಿನ ಹಡಗಲಿ ನೂತನ ರೈಲ್ವೆ ಮಾರ್ಗಕ್ಕೆ ಶೀಘ್ರವಾಗಿ ಅನುದಾನ ಬಿಡುಗಡೆ ಮಾಡಬೇಕು. ಗಜೇಂದ್ರಗಡ ಹಾಗೂಲಕ್ಷ್ಮೇಶ್ವರ ನಗರಗಳನ್ನು ತಾಲೂಕು ಎಂದು ಶೀಘ್ರದಲ್ಲಿ ಘೋಷಿಸಬೇಕು.ಮತ್ತೋಬ್ಬ ನಸರತ್ ಮುಲ್ಲಾನವರ ಅವರು  ತುಂಗಭದ್ರ ನದಿಯ ಹೂಳೆತ್ತುವ ಕಾರ್ಯ ನಡೆಯಬೇಕು. ಮುಂಡರಗಿ ತಾಲೂಕಿನ ಹುಲಿಗುಡ್ಡ ಏತ ನೀರಾವರಿ ಯೋಜನೆಯನ್ನು ಪ್ರಗತಿಗೊಳಿಸಬೇಕು.ಗದಗ ಜಿಲ್ಲೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮಾಡಬೇಕು.ಉತ್ತರ ಕರ್ನಾಟಕದಲ್ಲಿ ಅಭಕಾರಿ ನಿಯಮಗಳನ್ನು ಉಲ್ಲಂಘಿಸಿ ವೈನ ಸೆಂಟರ್ ಹೆಸರಿನಲ್ಲಿ ಬಾರನ್ನಾಗಿ ಪರಿವರ್ತನೆ ಯಗುತ್ತಿದ್ದು ತಕ್ಷಣ ಅಂತಹ  ಪರವಾನಗೆ ರದ್ದು ಪಡಿಸಬೇಕು.ಎಂದು ಹೋರಾಟದಲ್ಲಿ ಮಾತನಾಡಿದರು. 
           ಹೋರಾಟದಲ್ಲಿ ಸ್ಯಯದ್ ಖಾಲಿದ ಕೊಪ್ಪಳ ರಾಜ್ಯಧ್ಯಕ್ಷರು  ಮಾಂತೇಶ ಮಾಳಿಗೆಮನಿ, ರವಿ ವಗ್ಗನವರ, ಮಹಾಂತೇಶ ಅಂಗಡಿ, ಸಮೀರ ಮುಳಗುಂದ,ಚಾಂದ ಜಕ್ಕನಿ, ಅಂಜದ , ರಫೀಕ ಧಾರವಾಡ, ಮಹೇಶ ನಾಯಕ,ನಿಂಗಪ್ಪಾ ಕೋರಿ,ಶಿವು ಕರಡಿ ,ಆಶಾ ಉಳಾಗಡ್ಡಿ,ದಿನಸಾಬ ನಾಲಬಂದ, ಮುಂತಾದವರು ಉಪಸ್ಥಿತರಿದ್ದರು. 

Advertisement

0 comments:

Post a Comment

 
Top