PLEASE LOGIN TO KANNADANET.COM FOR REGULAR NEWS-UPDATES

ಹೊಸಪೇಟೆ:  ಮಾನವ ಹಕ್ಕುಗಳ ಕುರಿತು ಸೇವಾ ಮನೋಭಾವದಿಂದ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಆಪರ ಸಿವಿಲ್ ಹಿರಿಯ ನ್ಯಾಯಾಧೀಶ ಹತ್ತಿಕಾಳು ಪ್ರಭು ಸಿದ್ದಪ್ಪ ಹೇಳಿದರು.
ನಗರದ ತಾಲೂಕು ಕ್ರೀಡಾಂಗಣದ ಒಳಂಗಾಣ ಸಭಾ ಭವನದಲ್ಲಿ ಭಾನುವಾರ ಮಾನವ ಹಕ್ಕುಗಳ ಹೋರಾಟಗಾರರ ಸಂಘವು ಏರ್ಪಡಿಸಿದ್ದ ಮಾನವ ಹಕ್ಕುಗಳು ಮತ್ತು ಮಹಿಳಾ ಹಕ್ಕುಗಳ ಬಗ್ಗೆ ಕಾರ್ಯಕರ್ತರಿಗಾಗಿ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಹಕ್ಕುಗಳ ಪ್ರಶ್ನೆ ಅತ್ಯಂತ ಸಂಕೀರ್ಣವಾಗಿದ್ದು ಇದನ್ನು ಮಾನವೀಯ ನೆಲೆಯಲ್ಲಿ ನೋಡಬೇಕು  ಅಲ್ಲದೆ ಬಾಲಕರ ಹಾಗೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು ಕೂಡಾ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದರು. ಮಾನವ ಹಕ್ಕುಗಳ ಕುರಿತು ಬ್ಲಾಕ್ ಮೇಲ್ ಹೋರಾಟ ಮಾಡುವುದಾಗಲಿ, ಪ್ರಚಾರಕ್ಕಾಗಿ ಹೋರಾಟ ಮಾಡುವುದು ಸಲ್ಲದು, ಮಾನವೀಯ ನೆಲೆಯಲ್ಲಿ ಹೋರಾಟ ರೂಪಿಸಬೇಕಿದೆ. ಇದಕ್ಕಾಗಿ ಕಾನೂನು ನೆರವು ಪಡೆಯಬೇಕಿದೆ ಎಂದರು. 
ಅಧ್ಯಕ್ಷತೆಯನ್ನು ವಹಿಸಿದ್ದ ಮಾನವ ಹಕ್ಕುಗಳ ಹೋರಾಟಗಾರರ ಸಂಘದ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ಕವಿತಾ ಈಶ್ವರಸಿಂಗ್  ಮಾತನಾಡಿ, ಮಹಿಳೆಯರ ಪರ ಅನೇಕ ಕಾನೂನುಗಳಿದ್ದು, ಅವುಗಳನ್ನು ನ್ಯಾಯಸಮ್ಮತವಾಗಿ ಬಳಿಸಿಕೊಳ್ಳಬೇಕೆಂದರು. ಅನ್ಯಾಯ, ದೌರ್ಜನ್ಯಗಳಿಗೆ ಪ್ರತಿಯಾಗಿ ಹೋರಾಟ ನಡೆಸಬೇಕೆಂದರು. ಮುಖ್ಯ ಅತಿಥಿಗಳಾಗಿ ಮಾನವ ಹಕ್ಕುಗಳ ಹೋರಾಟಗಾರರ ಸಂಘದ ರಾಜ್ಯಾಧ್ಯಕ್ಷ ಸಿ. ಲೋಕೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಧಕೃಷ್ಣ ಕರೂರ್, ವಕೀಲರ ಸಂಘದ ಕಾರ್ಯದರ್ಶಿ ಕೆ.ರಾಮಪ್ಪ, ನಿವೃತ್ತ ಸಹಕಾರ ಪ್ರಬಂಧಕ ಆರ್. ಮಂಜುನಾಥ, ನಿವೃತ್ತ ಪೌರಾಯುಕ್ತ ವೈ. ಪರಮೇಶ್ವರಪ್ಪ, ಮಾನವ ಹಕ್ಕುಗಳ ಹೋರಾಟಗಾರರ ಸಂಘದ ತಆಲೂಕು ಅಧ್ಯಕ್ಷ ಕೆ. ಬ್ರಹ್ಮಯ್ಯ, ಕುಷ್ಟಗಿ ಘಟಕದ ಅಧ್ಯಕ್ಷ ನಾಗಪ್ಪ ಸೂಡಿ, ಸಂಪನ್ಮೂಲ ವ್ಯಕ್ತಿ ಎಸ್.ಆರ್. ಹಿರೇಮಠ ಹಾಜರಿದ್ದರು. ಶ್ರಿಮತಿ ರಿಜ್ವಾನ್ ಪ್ರಾರ್ಥಿಸಿದರು. ಎಸ್.ಎಂ. ಮರುಳುಸಿದ್ದಯ್ಯ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪೇಂದ್ರಕುಮಾರ್ ಕೆ.ಎಸ್. ವಂದಿಸಿದರು.ಹೊಸಪೇಟೆ ವಕೀಲರ ಸಂಘ, ತಾಲೂಕು ಕಾನೂನು ನೆರವು ಸಮಿತಿ ಹಾಗೂ  ಮಾನವ ಹಕ್ಕುಗಳ ಹೋರಾಟಗಾರರ ಸಂಘ ಸಂಯುಕ್ತವಾಗಿ ಈ ಕಾರ್ಯಗಾರ ಏರ್ಪಡಿಸಿದ್ದು, ರಾಜ್ಯದ ವಿವಿಧ ಕಡೆಗಳಿಂದ ಪ್ರತಿನಿಧಿಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

Advertisement

0 comments:

Post a Comment

 
Top