ಹನುಮಸಾಗರ ಮತ್ತು ಇನ್ನಿತರ ಗ್ರಾಮಗಳಲ್ಲಿ ಸಂಚಲಿಸಿ ಪ್ರಾಣಿಬಲಿ ತಡೆಯುವ ಬಗ್ಗೆ ಜಾಗೃತಿ ಮೂಡಿಸಲಿದೆ.
ಕೊಪ್ಪಳ : ೨೬.೦೪.೨೦೧೫ ರಂದು ಆರಂಭಗೊಂಡ ಈ ಯಾತ್ರೆ ಕೊಪ್ಪಳದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ಮೆರವಣಿಗೆಯ ಮೂಲಕ ಸಂಚರಿಸಿ ಅಹಿಂಸಾ-ಪ್ರಾಣಿ ದಯಾ ಸಂದೇಶ ಯಾತ್ರೆ ಕುರಿತು ಪ್ರಚಾರ ಮಾಡಿತು. ಪ್ರಚಾರದ ಯಾತ್ರೆಯನ್ನು ಶ್ರೀ ಪದಮಚಂದ ಮೆಹ್ತಾ ಉದ್ಘಾಟಿಸಿ ಚಾಲನೆ ನೀಡಿದರು. ಪ್ರಾರಂಭದಲ್ಲಿ ಬಸವ ಮಂಟಪದಲ್ಲಿ ನಡೆದ ಸಭೆಯಲ್ಲಿ ಧರ್ಮ ಮತ್ತು ದೇವರ ಹೆಸರಿನಲ್ಲಿ ದೇಶದಾದ್ಯಂತ ದೇವಾಲಯ ಜಾತ್ರಾ ಪರಿಸರಗಳಲ್ಲಿ ಪ್ರತಿ ವರ್ಷ ಕೊಟ್ಯಾಂತರ ಸಂಖ್ಯೆಯಲ್ಲಿ ಮೂಕ ಮುಗ್ದ ಪ್ರಾಣಿಗಳನ್ನು ಹರೆಕೆಯ ರೂಪದಲ್ಲಿ ಭಕ್ತಿಯ ಅಮಲಿನಲ್ಲಿ ಅಮಾನುಷವಾಗಿ ಸಾಮೂಹಿಕವಾಗಿ ಬಲಿ ನೀಡಲಾಗುತ್ತಿದ್ದು ಇದು ಘೋರ ಪಾಪ ಕೃತ್ಯವಾಗಿದ್ದು ಇದು ನೈಜ ಧರ್ಮ ಮತ್ತು ದೈವತ್ವಕ್ಕೆ ಕಳಂಕವನ್ನುಂಟು ಮಾಡುತ್ತಿದೆ ಎಂದು ಶ್ರೀ ದಯಾನಂದ ಸ್ವಾಮಿಜಿಯವರು ವಿಷಾದ ವ್ಯಕ್ತಪಡಿಸಿದರು. ವಿಶ್ವಗುರು ಬಸವಣ್ಣನವರು ದಯವೇ ಧರ್ಮದ ಮೂಲ ಧಯವಿರಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ ಧಯವಿಲ್ಲದ ಧರ್ಮ ಅದುಯಾವುದಯ್ಯ ಎಂದರೆ, ಬಗವಾನ್ ಮಹಾವೀರರು ಅಹಿಂಸಾ ಪರಮೊ ಧರ್ಮ: ಎಂದು ಸಾರಿದರು. ಬಗವಾನ ಬುದ್ದರು ಯಾರಿಗೆ ಜೀವ ಕೊಡಲು ಸಾಧ್ಯವಿಲ್ಲವೋ ಅವರಿಗೆ ಜೀವ ತೆಗೆಯುವ ಹಕ್ಕಿಲ್ಲ ಎಂದರು. ಸಂವಿಧಾನ ನಿರ್ಮಾತೃ ಅಂಬೇಡ್ಕರ ರವರು ಭಾರತದ ಸಂವಿದಾನದ ೫೧ ನೇ ಕಲಂನಲ್ಲಿ ಸರ್ವಜೀವಿಗಳ ಬಗ್ಗೆ ಅನುಕಂಪ ಹೊಂದಿರುವುದು/ ಪ್ರತಿಯೊಬ್ಬ ಭಾರತೀಯರ ಆಧ್ಯ ಕರ್ತವ್ಯವೆಂದು ಘೋಷಿಸಿದರು. ಹೀಗಿರುವಾಗ ಅಹಿಂಸೆ ಮತ್ತು ಆಧ್ಯಾತ್ಮದ ನೆಲೆಬಿಡಾದ ಭಾರತದಲ್ಲಿ ದೇವರು ಮತ್ತು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಕೊಟ್ಯಾಂತರ ಪ್ರಾಣಿಗಳ ಬಲಿಯನ್ನು ತಡೆಗಟ್ಟಲ್ಲು ಎಲ್ಲಾ ನಾಗರಿಕರು ಧಾರ್ಮಿಕ ಸಂಗಟನೆಗಳು
ಮಠಾಧಿಶರು ಮುಂದಾಗಬೇಕೆಂದು ಈ ಸಂದರ್ಭದಲ್ಲಿ ಸ್ವಾಮೀಜಿ ಮನವಿ ಮಾಡಿದರು ದೇವಾಲಯಗಳು ವಧಾಲಯಗಳಾಗದೆ ಧಿವ್ಯಾಲಯಗಳಾಗಬೇಕು ಜಾತ್ರಾ ಪರಿಸರಗಳು ಹಿಂಸೆಯ ತಾಣಗಳಾಗದೆ ಕಟುಕರ ಕೇರಿಗಳಾಗದೆ ಶಾಂತಿ ಅಹಿಂಸೆ ಮತ್ತು ಆಧ್ಯಾತ್ಮದ ಧಿವ್ಯ ಧಾಮಗಳಾಗುವಂತೆ ರೂಪಿಸಲು ಸರ್ವರು ಮುಂದಾಗಬೇಕೆಂದು ಅವರು ಇಲ್ಲಿಯವರೆಗೂ ಸುಮಾರು ೮೦೦ ಕಡೆಗಳಲ್ಲಿ ಪ್ರಾಣಿ ಬಲಿ ತಡೆಯುವಲ್ಲಿ ಯಶಸ್ವಿಯಾಗಿದ್ದು ಸುಮಾರು ಎರಡುವರೆ ಕೋಟಿಗೆ ಹೆಚ್ಚು ಪ್ರಾಣಿಗಳನ್ನು ಬಲಿಯಿಂದ ರಕ್ಷಿಸಲಾಗಿದೆ ಎಂದರು. ಈ ದಿಶೆಯಲ್ಲಿ ಸರಕಾರ ಸುದ್ದಿ ಮಾಧ್ಯಮಗಳು ಪೊಲೀಸ ಇಲಾಖೆ ಅನೇಕ ಸಂಘಟನೆಗಳು ಸಹಕಾರ ನೀಡಿವೆ ಎಂದರು. ಈ ಯಾತ್ರೆಯಲ್ಲಿ ಜೈನ ಸಮಾಜದ ಶ್ರೀ ಪದಮಚಂದ ಮೆಹ್ತಾ, ನಿರ್ಮಲಾ ಚೋಪಡಾ, ವಿಜಯ ಸುರಾಣ, ಮಾತೋಶ್ರೀ ಸೋನಾಸುರಾಣ, ಅಭಯಕುಮಾರ ಜೈನ, ವಿಫಿನ್‌ಕುಮಾರ ತಲೆಡಾ, ಕುಮಾರಿ ಸಿಮ್ರನ್, ಪೂಜಾ ಜೈನ್, ಗುಣವಂತಿ ಜೈನ್, ಮಾತ್ರೋಶ್ರೀ, ಮಂಜುಲತಾ ಸುರಾಣ, ನೆವಿರಾಜ ಜೈನ್, ರಾಜೇಂದ್ರಕುಮಾರ ಜೈನ್, ಈಶಣ್ಣ ಕೊರ್ಲಹಳ್ಳಿ, ಬಸವನಗೌಡ ಪಾಟೀಲ, ಶಿವಕುಮಾರ ಏಣಗಿ, ಲಿಂಗನಗೌಡ್ರ ಪಾಟೀಲ, ಸತೀಶ ಮಂಗಳೂರು, ಸುಂಕಪ್ಪ ಅಮರಾಪೂರ, ಕೋಟ್ರಪ್ಪ ಶೇಡದ, ಡಾ. ಶರಣಬಸವನಗೌಡ ಪಾಟೀಲ, ಶರಣಬಸವನಗೌಡ ಹಿರೇಮಠ, ಶರಣಮ್ಮ ಪಾಟೀಲ,ನೀಲಾವತಿ ಹಾದಿಮನಿ, ನೀಲಮ್ಮ ಗೋಶಿ, ಇನ್ನೂ ಅನೇಕ ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ, ಹಾಗೂ ಜೈನ ಸಮಾಜದ ಅನೇಕ ಮುಖ್ಯಸ್ಥರು ಪದಾಧಿಕಾರಿಗಳು ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದರು ಈ ಯಾತ್ರೆಯು ಕೊಪ್ಪಳ ನಗರದ ಪ್ರಮುಖ ಬೀದಿಗಳಲಿ ಸಂಚರಿಸಿ ಹನುಮಸಾಗರದತ್ತ ತೆರಳಿತು.

0 comments:
Post a Comment