ಕೊಪ್ಪಳ,ಏ,೨೫ : ಕೊಪ್ಪಳ ಜಿಲ್ಲಾ ನಾಗರೀಕರ ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ಜಾಗೃತಿ ವೇದಿಕೆ ತಿರುಳ್ಗನ್ನಡ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ರವಿಂದ್ರ ಕಲಾ ಕ್ಷೇತ್ರದ ಕನ್ನಡ ನಯನ ಭವನದಲ್ಲಿ ಇತ್ತಿಚಿಗೆ ಇಟಗಿಯ ಐತಿಹಾಸಿಕ ದೇವಾಲಯಗಳ ಚಕ್ರವರ್ತಿ ಇಟಗಿ ಮಹಾದೇವ ದೇವಸ್ಥಾನ ಉತ್ಸವದ ದಶಮಾನೋತ್ಸವ ಹಾಗೂ ಡಾ.ರಾಜ್‌ಕುಮಾರ್ ರವರ ಪುಣ್ಯ ಸ್ಮರಣೆ ಸಮಾರಂಭದಲ್ಲಿ ಇಟಗಿಯ ಮಹದೇವದೇವಾಲಯದ ವಿವಿಧ ಆಕರ್ಷಕ ಛಾಯಾಗ್ರಹಣಕ್ಕಾಗಿ ಕೊಪ್ಪಳದ ಖ್ಯಾತ ಛಾಯಾಗ್ರಾಹಕ ಉಮೇಶ್ ಡಿಜಿಟಲ್ ಸ್ಟುಡಿಯೋದ ಉಮೇಶ್ ಪೂಜಾರ್ ರವರಿಗೆ ಡಾ||ರಾಜ್‌ಕುಮಾರ್ ಸದ್ಭಾವನಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ಅಭಿಯೋಜಕ ಬಿ.ಎಸ್.ಪಾಟೀಲ್, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಕೃಷ್ಣೇಗೌಡ, ವೇದಿಕೆಯ ಸಂಸ್ಥಾಪಕ ಮಾರುತಿರಾವ್ ಸುರ್ವೆ, ಉದಯವಾರ್ತೆ ಚಾನಲ್‌ನ ವಾರ್ತ ವಾಚಕ ರಾಘವೇಂದ್ರ ಗಂಗಾವತಿ ಸೇರಿದಂತೆ ಕಾರ್ಯಕ್ರಮ ಸಂಘಟಕ ಮಹೇಶ್ ಬಾಬು ಸುರ್ವೆ, ವಿ.ಕೃಷ್ಣ, ಮಂಜುನಾಥ, ಮೋಹನ, ಭರದ್ವಾಜ್ ಕೊಪ್ಪಳ ಜಿಲ್ಲಾ ನಾಗರೀಕರ ವೇದಿಕೆಯ ಹಾಲಿ ಅಧ್ಯಕ್ಷ ಜಿ.ಎಸ್.ಗೋನಾಳ ಮತ್ತು ಮಾಜಿ ಅಧ್ಯಕ್ಷ ಎಂ.ಸಾದಿಕಅಲಿ ಅನೇಕರು ಉಪಸ್ಥಿತರಿದ್ದರು. ಈ ಪ್ರಶಸ್ತಿಗೆ ಕೊಪ್ಪಳದ ಉಮೇಶ್ ಪೂಜಾರ್ ರವರಿಗೆ. ಈ ಹಿಂದೆ ಕೂಡಾ ಚಾಲುಕ್ಯ ವಿಕ್ರಮಾದಿತ್ಯ, ಕೊಪ್ಪಳ ಐಸಿರಿ ಪ್ರಶಸ್ತಿ ಲಭಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈ ಮಹತ್ವದ ಪ್ರಶಸ್ತಿ ಲಭಿಸಿರುವುದಕ್ಕೆ ಅವರ ಅಭಿಮಾನಿ ಸ್ನೇಹಿತರ ಬಳಗ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
Subscribe to:
Post Comments (Atom)
0 comments:
Post a Comment