PLEASE LOGIN TO KANNADANET.COM FOR REGULAR NEWS-UPDATES

 
 ನಗರದ ಎಪಿಎಂಸಿಯಲ್ಲಿ ಭಗತ್‌ಸಿಂಗ್‌ರವರ ೮೪ನೇ ಹುತಾತ್ಮ ದಿನಾಚರಣೆ ಅಂಗವಾಗಿ ವಿಚಾರ ಸಂಕಿರಣ ಜರುಗಿತು. ಭಗತ್‌ಸಿಂಗ್‌ರ ವಿಚಾರಗಳು ಹಾಗೂ ವಿದ್ಯಾರ್ಥಿ ಯುವಜನರ ಮುಂದಿರುವ ಸವಾಲುಗಳು ಎನ್ನುವ ವಿಷಯ ಮಂಡನೆ ಮಾಡಿದ ಶ್ರೀ ಗವಿಸಿದ್ದೇಶ್ವರ ಕಾಲೇಜ ಉಪನ್ಯಾಸಕರಾದ ಶರಣಪ್ಪ ಉಮಚಿಗಿ ಸ್ವಾತಂತ್ರದ ಹೋರಾಟಕ್ಕೆ ದೊಡ್ಡ ಕೊಡುಗೆ ನೀಡಿದ ಭಗತ್‌ಸಿಂಗ್‌ರತಂಹ ನೂರಾರು ಹುತ್ತಾತ್ಮರ ತ್ಯಾಗವನ್ನು ಇತಿಹಾಸದಲ್ಲಿ ಕಡೆಗಣಿಸಲಾಗಿದೆ. ಸಂಪೂರ್ಣ ಸ್ವಾತಂತ್ರದ, ಸಮಾಜವಾದದ ಗುರಿಯೊಂದಿಗೆ ಬ್ರಿಟೀಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ರಾಜೀರಹಿತವಾಗಿ ಹೋರಾಡಿದ್ದರಿಂದಲೇ ಬ್ರಿಟೀಷ್ ಸರ್ಕಾರ ಅವರ ನಾಯಕತ್ವ ಬೆಳೆಯದಂತೆ ಬಲಿತೆಗೆದುಕೊಂಡಿತು. ಈ ಹಿನ್ನಲೆಯಲ್ಲಿ ವಿದ್ಯಾರ್ಥಿ ಯುವಜನರು ಭಗತ್‌ಸಿಂಗ್‌ರವರ ವಿಚಾರಗಳನ್ನು ಮೈಗೂಡಿಸಿಕೊಂಡು ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದರು.
     ಕರ್ನಾಟಕ ರೈತ ಸಂಘದ (ಏಖS) ರಾಜ್ಯಾಧ್ಯಕ್ಷರಾದ ಕಾಂ|| ಡಿ.ಎಚ್.ಪೂಜಾರ ಮಾತನಾಡಿ ದೇಶದ ಸಂಪತ್ತನ್ನು ಲೂಟಿ ಮಾಡುವ ಕಾರ್ಪೊರೇಟ್ ಬಂಡವಾಳಶಾಹಿ ಒಓಅ’S ವಿದೇಶಿ ಕಂಪನಿಗಳು, ಬೆಲೆಏರಿಕೆ, ಬಡತನ, ಹಸಿವು ಆತ್ಮಾಹತ್ಯೆ, ನಿರುದ್ಯೋಗ, ಭ್ರಷ್ಟಚಾರಕ್ಕೆ ಮೂಲ ಕಾರಣವಾಗಿವೆ. ಕಾರ್ಪೊರೇಟ್‌ರ ಕೈಗೊಂಬೆ ದಲ್ಲಾಳಿ ಸರ್ಕಾರವನ್ನು ಕಿತ್ತೆಸದು ಜನತಾ ಪ್ರಜಾಪ್ರಭುತ್ವ ಸ್ಥಾಪಿಸುವ ಧೃಡಸಂಕಲ್ಪ ಮಾಡಬೆಕಾಗಿದೆ. ಭೂಸ್ವಾಧೀನ ಕಾಯ್ದೆ ತಿದ್ಧುಪಡಿಯಿಂದ ರೈತರು ಭೂಮಿ ಹಕ್ಕು ಕಳೆದುಕೊಳ್ಳುತ್ತಾರೆ, ರಕ್ಷಣ ಕ್ಷೇತ್ರವನ್ನು ವಿದೇಶಿ ಕಂಪನಿಗಳಿಗೆ ಒಪ್ಪಿಸಲಾಗಿದೆ, ದೇಶದ ಸಾರ್ವಬೌಮತ್ವವನ್ನು ಬಲಿಕೊಡುವ ಕೇಂದ್ರ ಸರ್ಕಾರದ ವಿರುದ್ಧ ರಾಜಿರಹೀತ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. ಕೋಮುವಾದಿ ಶಕ್ತಿಗಳು ಭಗತ್‌ಸಿಂಗ್‌ರನ್ನು ಕೇಸರಿಕರಣಗೊಳಿಸಿ ಅವರ ಸಮಾಜವಾದದ ವಿಚಾರಗಳು ತಿರುಚುತ್ತಿದ್ದಾರೆ. ದುಡಿಯುವ ಜನರ ಐಕ್ಯತೆಗೆ ದೇಶದ ವಿಮೋಚನ ಹೋರಾಟಕ್ಕೆ ಅಡ್ಡಿಯಾಗಿರುವ ಕೋಮುವಾದ, ದಾರ್ಮಿಕ ಮೂಲಭೂತವಾದದ ವಿರುದ್ಧ ಸಮರ ಸಾರಬೇಕಾಗಿದೆ. 
    ಹಿರಿಯ ಪತ್ರಕರ್ತರು ಹಾಗೂ ಜಿಲ್ಲಾ ಬಚಾವೂ ಅಂದೋಲನ ಸಮಿತಿಯ ಅಧ್ಯಕ್ಷರಾದ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ ಭಗತ್‌ಸಿಂಗ್‌ರ ಕುಟುಂಬ ಸ್ವಾತಂತ್ರ ಹೋರಾಟದಲ್ಲಿ ಮುಖ್ಯಪಾತ್ರ ವಹಿಸಿದ್ದರಿಂದಲೇ ಚಿಕ್ಕ ವಯಸ್ಸಿನಲ್ಲಿಯೇ ಸ್ವಾತಂತ್ರ ಹೋರಾಟದ ಪ್ರೆರಣೆ ಪಡೆದರು. ಬ್ರಿಟೀಷರು ನನ್ನ ದೇಹವನ್ನು ಕೊಲ್ಲಬಹುದು, ಆದರೆ ನಾನು ನಂಬಿದ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲವೆಂದು ಹೇಳುವುದರೊಂದಿಗೆ ಭಗತ್‌ಸಿಂಗ್‌ರವರು ನಗು ನಗುತಾ ನೇಣಿಗೆ ತಮ್ಮ ಕೊರಳನ್ನು ಹೊಡ್ಡಿದರು. ನಿವೃತ್ತ ಪ್ರಾರ್ಚಾಯರಾದ ಮಂಹಾತೇಶ ಮಲ್ಲನಗೌಡ್ರು, ಏಖS ಜಿಲ್ಲಾಧ್ಯಕ್ಷರಾದ ಮಂಜುನಾಥ ಚಕ್ರಸಾಲಿ ವಕೀಲರು, ಸಿಪಿಐ(ಎಂಎಲ್) ಜಿಲ್ಲಾ ಕಾರ್ಯದರ್ಶಿ ಕೆ.ಬಿ.ಗೊನಾಳ ಇತರರು ಮಾತನಾಡಿದರು. ಅಖಿಲ ಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ ಜಿಲ್ಲಾಧ್ಯಕ್ಷರಾದ ಹನುಮೇಶ.ಡಿ.ಪೂಜಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟಿಯುಸಿಐ ಜಿಲ್ಲಾಧ್ಯಕ್ಷರಾದ ಬಸವರಾಜ ನರೇಗಲ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಚೇತನ ಪಾಸ್ತೆ, ಶಾಲಾ, ಕಾಲೇಜ್ - ಹಾಸ್ಟೇಲ್ ವಿದ್ಯಾರ್ಥಿಗಳು ಹಾಗೂ ಯುವಜನರು ಭಾಗವಹಿಸಿದ್ದರು. ಭಗತ್‌ಸಿಂಗ್‌ರ ಆಶಯಗಳನ್ನು ಈಡೇರಿಸೊಣ ಇಂಕಿಲಾಬ್ ಜಿಂದಾಬಾದ್ ಅನೇಕ ಘೋಷಣೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Advertisement

0 comments:

Post a Comment

 
Top