PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಏ.೨೯ (ಕರ್ನಾಟಕ ವಾರ್ತೆ) : ಕೊಪ್ಪಳ ತಾಲೂಕಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಗಣಿತಿ ಕಾರ್ಯ ಅಂತಿಮ ಹಂತ ತಲುಪಿದ್ದು, ಇದುವರೆಗೂ ಗಣತಿಯಾಗದಿರುವ ಯಾವುದೇ ಕುಟುಂಬಗಳು ಇದ್ದಲ್ಲಿ, ಕೂಡಲೆ ದೂರವಾಣಿ ಸಂ: ೦೮೫೩೯-೨೨೦೩೮೧ ಗೆ ಕರೆ ಮಾಡಿ ತಿಳಿಸುವಂತೆ ಕೊಪ್ಪಳ ತಹಸಿಲ್ದಾರ್ ಪುಟ್ಟರಾಮಯ್ಯ ಮನವಿ ಮಾಡಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ ಕಳೆದ ಏ.೧೧ ರಿಂದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಪ್ರಾರಂಭವಾಗಿದ್ದು ಏ. ೩೦ ಕ್ಕೆ ಮುಕ್ತಾಯಗೊಳ್ಳಲಿದೆ.  ಈಗಾಗಲೆ ಗಣತಿ ಕಾರ್ಯ ಅಂತಿಮ ಹಂತ ತಲುಪಿದ್ದು,   ಈ ಗಣತಿ ಕಾರ್ಯದಲ್ಲಿ ಯಾವುದೇ ಕುಟುಂಬಗಳು ಬಿಟ್ಟು ಹೋಗಿದ್ದಲ್ಲಿ, ಬೇರೆ ಊರುಗಳಿಗೆ ಹೋಗಿದ್ದಲ್ಲಿ ಅಥವಾ ತೋಟದ ಮನೆ, ಕೋಳಿ ಫಾರಂ, ಇಟ್ಟಂಗಿ ಬಟ್ಟಿ ಮುಂತಾದ ಕಡೆಗಳಲ್ಲಿ ವಾಸಿಸುತ್ತಿದ್ದು, ಗಣತಿ ಆಗದೇ ಇದ್ದ ಪಕ್ಷದಲ್ಲಿ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ತಹಶೀಲ್ದಾರ ಕಾರ್ಯಾಲಯ, ಕೊಪ್ಪಳ, ದೂರವಾಣಿ ಸಂಖ್ಯೆ ೦೮೫೩೯-೨೨೦೩೮೧ ಗೆ ಕರೆಮಾಡಿ ತಿಳಿಸಿದಲ್ಲಿ, ಗಣತಿಗೆ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಗ್ರಾಮ ಪಂಚಾಯಿತಿ ಪಿ.ಡಿ.ಓ ಗಳು  ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಕುರಿತು ಡಂಗುರ ಸಾರುವ ಮೂಲಕ ಸಾರ್ವಜನಿಕರ ಗಮನಕ್ಕೆ ತರಬೇಕು.
     ಸಮೀಕ್ಷೆ ಕಾರ್ಯ ಕೈಗೊಂಡಿರುವ ಗಣತಿದಾರರು ಹಾಗೂ ಮೇಲ್ವಿಚಾರಕರು ತಮ್ಮ ವ್ಯಾಪ್ತಿಯ ಬ್ಲಾಕುಗಳಲ್ಲಿ ಯಾವುದೇ ಮನೆಗಳು ಬಿಟ್ಟು ಹೋಗದಂತೆ ಗಣತಿ ನಡೆಸಿ, ವಿಳಂಬ ಮಾಡದೆ ಸಕಾಲಕ್ಕೆ ಮಾಹಿತಿ ನೀಡಬೇಕು  ಎಂದು ಕೊಪ್ಪಳ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

Advertisement

0 comments:

Post a Comment

 
Top