PLEASE LOGIN TO KANNADANET.COM FOR REGULAR NEWS-UPDATES


ಹೊಸಪೇಟೆ: ನಗರದಲ್ಲಿ ಇದೇ ದಿ.೨೧ರಂದು ಕೊಟ್ಟೂರುಸ್ವಾಮಿ ಮಠದಲ್ಲಿ ಬಸವಜಯಂತಿ ಅಂಗವಾಗಿ ೪೨ನೇ ಉಚಿತ  ಸಾಮೂಹಿಕ ವಿವಾಹ ನಡೆಯಲಿದೆ.
ಅಂದು ಬೆಳಿಗ್ಗೆ ೧೦ಗಂಟೆಗೆ ಗರಗ ನಾಗಲಾಪುರ ಒಪ್ಪತ್ತೇಶ್ವರ ಮಠದ ಮರಿಮಹಾಂತ ಮಹಾಸ್ವಾಮಿ ಷಟಸ್ಥಲ ಧ್ವಜಾರೋಹಣ ನಡೆಸಲಿದ್ದಾರೆ. ನಂತರ ಬಸವೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದ್ದು ಬೆಳಿಗ್ಗೆ ೧೧ಕ್ಕೆ ೧೫ ಜೋಡಿ ಉಚಿತ ಸಾಮೂಹಿಕ ವಿವಾಹ ಜರುಗಲಿದೆ. ಕೊಟ್ಟೂರು ಸ್ವಾಮಿ ಮಠದ ಜಗದ್ಗುರು ಸಂಗನ ಬಸವ ಮಹಾಸ್ವಾಮಿ ಸಾನಿಧ್ಯದಲ್ಲಿ ಸಮಾರಂಭದಲ್ಲಿ ಆಂಧ್ರ ಪ್ರದೇಶದ ಪಶ್ಚಿಮಾದ್ರಿ ವಿರಕ್ತಮಠದ ಪಂಚಮಸಿದ್ದಲಿಂಗ ಮಹಾಸ್ವಾಮಿ, ದರೂರು ವಿರಕ್ತ ಮಠದ ಕೊಟ್ಟೂರು ದೇಶಿಕರು, ಕರೇಗುಡ್ಡದ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಎಚ್.ಎಂ/ ಗಣಪಯ್ಯ ಶಾಸ್ತ್ರಿ , ವಿಜಯಕುಮಾರ ಶಾಸ್ತ್ರಿ ಸಾಮೂಹಿಕ ವಿವಾಹದ ಪೌರೋಹಿತ್ಯ ನಡೆಸಿಕೊಡಲಿದ್ದಾರೆ. ವಚನ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಡಿವೈಎಸ್‌ಪಿ ಡಿ.ಡಿ. ಮಾಳಗಿ ಬಹುಮಾನ ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಆನಂದ್ ಸಿಂಗ್, ಭೀಮಾನಾಯ್ಕ, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಅಖಿಲಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ಕೊಟ್ಟೂರು ಸ್ವಾಮಿ ಕಲ್ಯಾಣ ಕೇಂದ್ರದ ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ಚಂದ್ರಶೇಖರಪ್ಪ, ವೀರಶೈವ ಸಮಾಜದ ಅಧ್ಯಕ್ಷ ಕೆ.ಕೊಟ್ರೇಶ್, ಗುತ್ತಿಗೆದಾರ ಸಿದ್ದರಾಜ ಗೌಡ್ರು, ವೀರಶೈವ ರುದ್ರಭೂಮಿ ನಿರ್ವಹಣಾ ಸಮಿತಿ ಉಪಾಧ್ಯಕ್ಷ ಎಚ್.ವಿ. ಶರಣಸ್ವಾಮಿ, ಬೂಡಾ ಮಾಜಿ ಅಧ್ಯಕ್ಷ ಗುರುಲಿಂಗನಗೌಡ, ಜೀರ ವೀರೇಶಪ್ಪ, ಕೆ.ಎಂ. ಹೇಮಯ್ಯ ಸ್ವಾಮಿ, ಎನ್. ಬಸವರಾಜಪ್ಪ, ದೀಪಕ್ ಸಿಂಗ್, ಗುಂಡಿ ರಾಘವೇಂದ್ರ, ನಗರಸಭೆ ಸದಸ್ಯ ಚಂದ್ರಕಾಂತ ಕಾಮತ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ವೀರಭದ್ರಯ್ಯ, ಕಾಕುಬಾಳು ಷಡಕ್ಷರಯ್ಯ ಸ್ವಾಮಿ, ಕುರುಬ ಸಮಾಜದ ಅಧ್ಯಕ್ಷ ಜಿ. ಭರಮಲಿಂಗನ ಗೌಡ, ಜೈನ ಸಮಾಜದ ಮುಖಂಡ ಬಾಬು ಲಾಲ್ ಬಿ. ಜೈನ್, ಆರ್ಯವೈಶ್ಯ ಸಮಾಜದ ಭೂಪಾಳ್ ರಾಘವೇಂದ್ರ ಶೆಟ್ಟಿ, ಚಂದನ್ ಸಿಂಗ್, ಹೊನಗಿ ನಾರಾಯಣಪ್ಪ, ತಿಪ್ಪಾರೆಡ್ಡಿ, ಸೊಂಡೂರು ತಿಮ್ಮಪ್ಪ, ನಗರಸಭೆ ಅಧ್ಯಕ್ಷೆ ಕಣ್ಣಿ ಉಮಾದೇವಿ ಶ್ರೀಕಂಠ, ಅಕ್ಕನ ಬಳಗದ ಅಧ್ಯಕ್ಷೆ ಕೋರಿಶೆಟ್ಟಿ ರತ್ನಮ್ಮ, ಜಿ. ಪಂಚಪ್ಪ, ಎಂ. ಗೋವಿಂದರೆಡ್ಡಿ, ಪಿಟಿ. ರುದ್ರಪ್ಪ ಭಾಗವಹಿಸಲಿದ್ದಾರೆಂದು ಕೊಟ್ಟೂರುಸ್ವಾಮಿ ಮಠದ ಭಕ್ತ ಮಂಡಳಿ ತಿಳಿಸಿz

Advertisement

0 comments:

Post a Comment

 
Top