PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಏ. ೨೪. ನಗರದ ತಹಶೀಲ್ದಾರ ಕಛೇರಿಯಲ್ಲಿಂದು ಭಗೀರಥ ಮಹರ್ಷಿ ಭಾವಚಿತ್ರವನ್ನು ಬಿಡುಗಡೆಗೊಳಿಸಲಾಯಿತು.
ತಹಶೀಲ್ದಾರ ಪುಟ್ಟರಾಮಯ್ಯ, ತಾಲೂಕ ಪಂಚಾಯತ ಇಓ ಕೃಷ್ಣಮೂರ್ತಿ, ಕಂದಾಯ ನಿರೀಕ್ಷಕ ಮಂಜುನಾಥ, ಯುವ ಮುಖಂಡ ಶಬ್ಬೀರ ಸಿದ್ಧಖಿ, ಶಿರಸ್ತೇದಾರ ಕಬಾಡೆ ಇತರರಿದ್ದರು.ಇದೇ ಏಪ್ರಿಲ್ ೨೫ ರಂದು ಪ್ರಥಮ ಬಾರಿಗೆ ಸರಕಾರದ ವತಿಯಿಂದ ಆಚರಿಸಲ್ಪಡುತ್ತಿರುವ ಭಗಿರಥ ಮಹರ್ಷಿ ಜಯಂತಿಗೆ ಅನುಕೂಲವಾಗಿಸಲು ಕೊಪ್ಪಳ ತಾಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಬಿಇಓರವರ ಮೂಲಕ ಫೋಟೊಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ಮುದ್ರಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದರು.

ಇದೇ ವೇಳೆ ಮಾತನಾಡಿದ ಭಗೀರಥ ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಯಂಕನಗೌಡ ಹೊರತಟ್ನಾಳ, ಅನ್ಯ ಸಮಾಜದವರಾದರೂ ಭಗೀರಥರ ಭಾವಚಿತ್ರ ಪ್ರಕಟಿಸಿ ಶಾಲೆಗಳಿಗೆ ಉಚಿತವಾಗಿ ನೀಡಿರುವ ಗೊಂಡಬಾಳರ ಕಾರ್ಯವನ್ನು ಸಮಾಜದವತಿಯಿಂದ ಶ್ಲಾಘಿಸುತ್ತೇವೆ, ಸಮಾಜಮುಖಿ ಕಾರ್ಯ ಅಭಿನಂದನಾರ್ಹ ಎಂದರು. ಸರಕಾರ ಅನುಮೋದಿಸಿರುವ ಭಾವಚಿತ್ರಗಳನ್ನು ಕೊಪ್ಪಳದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ) ಮತ್ತು ಯುವಚೇತನ ಶಿವರಾಜ ತಂಗಡಗಿ ಅಭಿಮಾನಿಗಳ ವೇದಿಕೆ ವತಿಯಿಂದ ವಿಶ್ವ ಪ್ರಿಂಟರ್‍ಸ್ ಮುದ್ರಿಸಿದ್ದು ತಾಲೂಕಿನ ಶಾಲಾ ಮುಖ್ಯಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿಮಾಡಿ ಪಡೆದುಕೊಳ್ಳಲು ಕೋರಿದೆ. ಅಲ್ಲದೇ ವಿಶ್ವ ಆಫ್‌ಸೆಟ್ ಪ್ರಿಂಟರ್‍ಸ್, ತಾಲೂಕ ಪಂಚಾಯತ ಕಾಂಪ್ಲೆಕ್ಸ್, ಕೊಪ್ಪಳ ಮತ್ತು ಐಶ್ವರ್ಯ ಪ್ರಿಂಟರ್‍ಸ್ ಅಂಬೇಡ್ಕರ ವೃತ್ತ ಕೊಪ್ಪಳ ಮೊ : ೯೪೪೮೩೦೦೦೭೦ ಇಲ್ಲಿ ಭಾವಚಿತ್ರಗಳು ದೊರೆಯುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

0 comments:

Post a Comment

 
Top