PLEASE LOGIN TO KANNADANET.COM FOR REGULAR NEWS-UPDATES

ಹೊಸಪೇಟೆ: ನಗರದ ವಿಕಾಸ ಸೌಹಾರ್ಧ ಕೋ ಆಪರೇಟಿವ್ ಬ್ಯಾಂಕ್ ೨೦೧೪-೧೫ನೇ ಸಾಲಿನಲ್ಲಿ ೩.೭೫ ಕೋಟಿ ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ಹೇಳಿದರು.
ನಗರದಲ್ಲಿ ಬುಧವಾರ ಬ್ಯಾಂಕಿನಲ್ಲಿ ಆಯೋಜಿಸಿದ್ದ ಸುದ್ಧಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬ್ಯಾಂಕ್ ಇವರೆಗೆ ೩.೭೫ಕೋಟಿ ಶೇರು ಬಂಡವಾಳ ಸಂಗ್ರಹಿಸಿದ್ದು, ೧೩೫ ಕೋಟಿ ಠೇವಣಿ ಸಂಗ್ರಹಿಸಿದೆ. ೯೨ ಕೋಟಿ ಸಾಲ ನೀಡಿದ್ದು, ೨೨೭ ಕೋಟಿ ವ್ಯವಹಾರ ನಡೆಸಿದೆ ಎಂದರು. ಬ್ಯಾಂಕ್ ೧೮ನೇ ವರ್ಷದಲ್ಲಿ ಮುನ್ನಡೆಯುತ್ತಿದ್ದು, ಬ್ಯಾಂಕ್‌ಗಳು ಆರ್ಥಿಕ ಸುಭ್ರತೆಯ ಮಾನದಂಡವಾದ(ಎನ್‌ಪಿಎ) ೦%ಹೊಂದುವ ಮೂಲಕ ೩.೭೫ ಕೋಟಿ ಲಾಭ ಪಡೆದಿದೆ, ಆದಾಯ ತೆರಿಗೆ ಸೇರಿದಂತೆ ಎಲ್ಲ ಮುಂಗಡಗಳನ್ನು ತೆಗೆದಿರಿಸಿದ ನಂತರ ಬ್ಯಾಂಕ್ ನಿವ್ವಳ ೨.೦೧ ಕೋಟಿ ಲಾಭಗಳಿಸಿದೆ ಎಂದರು. ತೋರಣಗಲ್, ಬಳ್ಳಾರಿ, ಹಗರಿಬೊಮ್ಮನಹಳ್ಳಿ ಹಾಗೂ ಕೊಪ್ಪಳ, ಗಜೇಂದ್ರಗಢದಲ್ಲಿ ಬ್ಯಾಂಕ್ ಶಾಖೆ ತೆರೆಯುವ ಪ್ರಯತ್ನ ನಡೆಸಿದೆ ಎಂದು ವಿವರ ನೀಡಿದರು.
 ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಎಸ್.ವಿನಾಯಕ, ಛಾಯಾ ದಿವಾಕರ್, ಚಂದ್ರಹಾಸ್, ರಮೇಶ ಪುರೋಹಿತ್, ವೆಂಕಪ್ಪ ಮಡ್ಡೇರ್, ಆನಂತ ಜೋಷಿ, ಬ್ಯಾಂಕಿನ ಕಾರ್ಯನಿರ್ವಾಹಕ ಅಧಿಕಾರಿ ಮಧುಶ್ರೀ ಹಾಜರಿದ್ದರು.

Advertisement

0 comments:

Post a Comment

 
Top