PLEASE LOGIN TO KANNADANET.COM FOR REGULAR NEWS-UPDATES

ಹೊ
ಸಪೇಟೆ:  ಇಸ್ಲಾಂ ಧರ್ಮದಲ್ಲಿ ಪ್ರತಿಯೊಬ್ಬರಿಗೆ ಖತ್ನಾ ಕಡ್ಡಾಯ ಆಚರಣೆಯಾಗಿದೆ ಇದನ್ನು ಬಡಮುಸ್ಲಿಂರು ಪಾಲಿಸುವುದು ಕಷ್ಟವಾಗಿದೆ ಎಂದು ಸಮಾಜ ಸೇವಕ ನಗರಸಭೆ ಮಾಜಿ ಸದಸ್ಯ ಎಚ್.ಎನ್.ಎಫ್. ಇಮಾಮ್ ನಿಯಾಜಿ ಹೇಳಿದರು.
ಭಾನುವಾರ ನಗರದ ಪರ್ವಾಜ್ ಪ್ಲಾಜಾದಲಿ ೫ನೇ ವರ್ಷದ ಸುನ್ನತೆ ಇಬ್ರಾಹಿಂ ಮೇಳದಲ್ಲಿ ಮಾತನಾಡಿದ ಅವರು, ಈ ಆಚರಣೆಯನ್ನು ನಡೆಸಲು ಆರ್ಥಿಕವಾಗಿ ಹಿಂದುಳಿದ ಬಡ ಮುಸ್ಲಿಂ ಬಾಂಧವರಿಗೆ ಬಹಳ ಕಷ್ಟಸಾಧ್ಯವಾಗಿರುತ್ತದೆ ಎಂಬ ದೃಷ್ಟಿಯಿಂದ ಸುಮಾರು ೫ ವರ್ಷಗಳಿಂದಲೂ ಇಂತಹ  ಉಚಿತ ಖತ್ನಾ (ಮುಂಜಿ) ಮೇಳವನ್ನು ನಡೆಸಲಾಗುತ್ತಿದೆ ಎಂದರು.
ಮುಖ್ಯ ಅತಿಥಿ  ರೈತ ಮುಖಂಡ ಖಾಜಾ ಹುಸೇನ ನಿಯಾಜಿ ಮಾತನಾಡಿ, ನಗರದಲ್ಲಿ ಎಚ್.ಎನ್.ಎಫ್. ಮಹಮ್ಮದ ಇಮಾಮ್ ನಿಯಾಜಿಯವರು  ಉಚಿತವಾಗಿ ೫ ನೇ ವರ್ಷದ ಸುನ್ನತೆ ಇಬ್ರಾಹಿಂ ಮೇಳವನ್ನು ನಡೆಸುತ್ತಿರುವುದು ಸಂತಸದ ಸಂಗತಿಯಾಗಿದೆ. ಬಡತನದಲ್ಲಿರುವ ಅನೇಕ ಮುಸ್ಲಿಂ ಭಾಂಧವರಿಗೆ ಇಂತಹ ಮೇಳವು ಅರ್ಥಿಕ ಹೊರೆಯನ್ನು ಕಡಿಮೆ ಮಾಡಿ ಬಡ ಕುಟುಂಬಗಳಿಗೆ ನೆರವಾಗಲಿದೆ, ಹಾಗು ಇವರು ಇನ್ನೂ  ಅನೇಕ ರೀತಿಯಲ್ಲಿ ಸಮಾಜಕ್ಕೆ ತನ್ನದೇ ಆದ ಸೇವೆಯನ್ನು  ಸಲ್ಲಿಸುತ್ತಿರುವುದರಿಂದ ನಗರದಲ್ಲಿ ಬಹು ಸಂಖ್ಯಾತರಿಗೆ ಅನೂಕೂಲವಾಗಿದ್ದು  ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಮಾಜ ಸೇವೆ ಮಾಡಲು ನಮ್ಮೆಲ್ಲರ ಸಹಕಾರ, ಬೆಂಬಲ ತಮಗೆ ಎಂದೆಂದಿಗೂ ಇರುತ್ತದೆ ಎಂದರು. ನಗರಸಭೆ ಸದಸ್ಯ ಖದೀರ್ ಸಾಬ್ ಮಾತನಾಡಿ,  ಈ ಸುನ್ನತೆ ಇಬ್ರಾಹಿಂ ಮೇಳ ಹಮ್ಮಿಕೊಂಡಿರುವುದು ಮುಸ್ಲಿಂ ಸಮುದಾಯಕ್ಕೆ ಅನುಕೂಲವಾಗಿದೆ ಎಂದರು. ಸಮಾರಂಭದಲ್ಲಿ ಜಿ.ನಾಸೀರ್, ಸೈಯದ್ ಅಬ್ದುಲ್ ವಹಿದ್, ಬಿ.ಮಹಮ್ಮದ್ ಅನ್ಸರ್ ಬಾಷ, ಮಹಮ್ಮದ್  ಇಲಿಯಾಸ್,  ಬಿ.ಬಾಷ, ಎಮ್.ಫೈರೋಜ್ ಖಾನ್, ಕೆ.ಅಮೀರ್ ಬಾಷ, ವಕೀಲರಾದ  ಬಿ.ಜಾಕೀರ್, ಕೆ.ತಬರೇಜ್. ಟಿಂಕರ್ ರಫೀಕ್ ಮತ್ತಿತರರು ಹಾಜರಿದ್ದರು. ಈ ಮೇಳದಲ್ಲಿ ೧೬೦ ಮಕ್ಕಳು ಖತ್ನಾ ಮಾಡಲಾಯಿತು  ಹಾಗೂ ಮಕ್ಕಳಿಗೆ  ಆಹಾರ ಧಾನ್ಯಗಳಾದ ಗೋಧಿ, ಸಕ್ಕರೆ ಮೊಟ್ಟೆ ವಿತರಿಸಲಾಯಿತು. 

Advertisement

0 comments:

Post a Comment

 
Top