PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಅಂಬೇಡ್ಕರ್‌ರವರು ಶೋಷಿತ ಸಮುದಾಯದಲ್ಲಿ ಜನಿಸಿ,ತಾವು ವಿದ್ಯಾರ್ಥಿದೆಸೆಯಲ್ಲಿದ್ದಾಗ ಹಲವು ಅವಮಾನ ಅಪಮಾನಗಳನ್ನು ಮೆಟ್ಟಿ ನಿಲ್ಲುವ ಮೂಲಕ,ಸಮಾಜದಲ್ಲಿನಅಸ್ಪೃಶ್ಯತೆಯನ್ನು ನಿವಾರಿಸಲು ಸ್ವಾಭಿಮಾನಿ ಧೃಡಚಿತ್ತದಿಂದತಮ್ಮ ಹಕ್ಕುಗಳನ್ನು ಪಡೆಯಲು ಶಿಕ್ಷಣವೇ ಮೂಲಮಂತ್ರಎಂಬುದನ್ನರಿತು, ಶಿಕ್ಷಣ ಸಂಘಟನೆ ಹೋರಾಟದತತ್ವದ ಮೂಲಕ ತುಳಿತಕ್ಕೊಳಗಾದ ಸಮುದಾಯದ ಏಳಿಗಾಗಿ ಶ್ರಮಿಸಿದ ಡಾ||ಬಿ.ಆರ್‌ಅಂಬೇಡ್ಕರ್‌ರವರು ಶೋಷಿತರ ನೊಂದವರ ಹಿಂದುಳಿದವರ ಮನುಕುಲದ ಆಸ್ತಿಯಾಗಿದ್ದಾರೆಂದು ಸಂಜೀವಿನಿ ಯೋಜನೆಯ ವಲಯ ಮೇಲ್ವಿಚಾರಕ ಬಿ.ಆರ್. ಪ್ರಸನ್ನಕುಮಾರ ಹೇಳಿದರು.
ತಾಲೂಕಿನಅಳವಂಡಿ ಗ್ರಾಮದಅಂಗನವಾಡಿಕೇಂದ್ರದಲ್ಲಿ ದಿನಾಂಕ : ೧೯-೦೪-೨೦೧೫ರಂದು ಏರ್ಪಡಿಸಲಾಗಿದ್ದ ಸಂವಿದಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್‌ರವರ ೧೨೪ ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಡಾ|| ಬಿ.ಆರ್.ಅಂಬೇಡ್ಕರ್‌ರವರುಅತ್ಯುನ್ನತ ಬ್ಯಾರಿಷ್ಟರ್‌ಕಾನೂನುಪದವಿ ಪಡೆದುದೇಶ ವಿದೇಶಗಳನ್ನು ಸುತ್ತಿಅಪಾರ ಪಾಂಡಿತ್ಯಗಳಿಸಿ ಭಾರತ ಸಂವಿದಾನದಕರಡು ಸಮಿತಿಅಧ್ಯಕ್ಷರಾಗಿಇಡೀ ವಿಶ್ವಕ್ಕೆ ಮಾದರಿಯಾಗಬಲ್ಲ ಎಲ್ಲಾ ಕಾಲಕ್ಕೂ,ಎಲ್ಲಾ ವರ್ಗಕ್ಕೂ,ಎಲ್ಲಾಜಾತಿಜನಾಂಗದವರಿಗೂ, ಅನ್ವಯವಾಗಬಲ್ಲ ಬೃಹತ್ ಸಂವಿದಾನ ರಚಿಸಿ ಭಾರತದ ಪ್ರಜಾ ಪ್ರಭುತ್ವಕ್ಕೆಅತ್ಯುತ್ತಮಕೊಡುಗೆ ನೀಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶೋಷಿತ ಸಮುದಾಯದ ಏಳಿಗೆಗೆ ಮೀಸಲಾತಿ ಸೃಷ್ಟಿಸಿ ಸಮಾನತೆಗಾಗಿ ಹೋರಾಡಿದದೈವಿಸ್ವರೂಪದ ದಿವ್ಯಚೇತನಡಾ|| ಬಿ.ಆರ್.ಅಂಬೇಡ್ಕರ್‌ಎಂದು ತಿಳಿಸಿದರು.
    ಈ ಸಂಧರ್ಭದಲ್ಲಿ ಭೂಮಿಕಸಹಕಾರಿಅಧ್ಯಕ್ಷೆ ಶ್ರೀಮತಿ ಗಂಗಮ್ಮ ಮಾತನಾಡಿಡಾ|| ಬಿ.ಆರ್.ಅಂಬೇಡ್ಕರ್‌ರವರು ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶದೊರೆಯಬೇಕೆಂದು ಸಂವಿಧಾನದಲ್ಲಿ ರೂಪಿಸಿದ್ದ  ಲಿಂಗ ಸಮಾನತೆಯರುವಾರಿಯೆಂದು ಸ್ಮರಿಸಿದರು.
 ಈ ಸಂಧರ್ಭದಲ್ಲಿಗ್ರಾ.ಪಂ. ಉಪಾಧ್ಯಕ್ಷರಾದ ಶ್ರೀಮತಿ ಹುಲಿಗೆವ್ವಯೆಂಕಪ್ಪ ವಡ್ಡರ್, ಅಂಗನವಾಡಿಕೇಂದ್ರದಕಾರ್ಯಕರ್ತೆ ಲಕ್ಷ್ಮೀದಾಸರ, ಸಹಾಯಕಿ ಹನುಮವ್ವ, ಬಾಂದವ್ಯ ಸಂಜೀವಿನಿ ಗ್ರಾ.ಪಂ ಒಕ್ಕೂಟದಅಧ್ಯಕ್ಷೆ ಶ್ರೀಮತಿ ಚಂದ್ರಕಲಾ, ವಾರ್ಡಒಕ್ಕೂಟದಅಧ್ಯಕ್ಷೆಕುಮಾರಿ ಶೋಭಾ ವಡ್ಡg, ಭೂಮಿಕಾಕ್ಷೇತ್ರಾಧಿಕಾರಿರೇಣುಕ, ರೇಣುಕಾ ಮೋರನಾಳ, ಭೋವಿ ಸಮಾಜದತಿಪ್ಪವ್ವ ವಡ್ಡರ, ಹನುಮವ್ವ ವಡ್ಡರ್, ಪಕ್ಕೀರಮ್ಮ ವಡ್ಡರ್. ಪದ್ದವ್ವದಾಸರ್, ಸಮುದಾಯ ಸಂಪನ್ಮೂಲ ವ್ಯಕ್ತಿ ಪ್ರತಿಭಾ, ಹಾಗೂ ಸ್ವ ಸಹಾಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

Advertisement

0 comments:

Post a Comment

 
Top