PLEASE LOGIN TO KANNADANET.COM FOR REGULAR NEWS-UPDATES

ಹೊಸಪೇಟೆ- ಮಹಿಳಾ ಪರ ಚಳುವಳಿಗಳನ್ನು ಪುರುಷ ವಿರೋಧಿ ಹೋರಾಟಗಳೆಂದು ಬಿಂಭಿತವಾಗುತ್ತಿದ್ದು ವಿಷಾಧನೀಯವೆಂದು ಪತ್ರಕರ್ತೆ ರೇಖಾಪ್ರಕಾಶ್ ಖೇಧ ವ್ಯಕ್ತಪಡಿಸಿದರು.
ಅವರು ನಗರದ ಡ್ಯಾಂ ರಸ್ತೆಯಲ್ಲಿರುವ ಪ್ರಗತಿ ಕೃಷ್ಣಾ ಗ್ರಾಮೀಣಾ ಬ್ಯಾಂಕ್‌ನಲ್ಲಿ ಇಂದು ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ನಗರ ಬಡತನ ನಿರ್ಮೂಲನಾ ಯೋಜನೆಯ(ನಲ್ಮು) ಫಲಾನುಭವಿಗಳಿಗೆ ಚೆಕ್ ವಿತರಣಾ ಸಮಾರಂಭದಲ್ಲಿ ಮಾತನಾಡುತ್ತಾ ಮಹಿಳೆಯರು ಸುಶಿಕ್ಷಿತರಾಗಿ ಸ್ವಾವಲಂಭನೆಂದ  ಉತ್ತಮ ಸಮಾಜ ಕಟ್ಟಬೇಕು, ಪ್ರಸ್ತುತ ಸಮಾಜದಲ್ಲಿ ಅತ್ಯಾಚಾರದಂತಹ ಹೀನಾ ಕೃತ್ಯದಿಂದ ಮಹಿಳೆಯರು ನಲುಗಿದ್ದು ಅತ್ಯಾಚಾರಿಗಳಿಗೆ ಸರಕಾರವು ಕಠಿಣ ಕಾನೂನುಗಳನ್ನು ರೂಪಿಸಬೇಕು ಎನ್ನುವ ಇಂಗಿತವನ್ನು ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗರಸಭಾ ಅಧ್ಯಕ್ಷೆ ಕಣ್ಣಿ ಉಮಾದೇವಿ ಮಾತನಾಡಿ ಮಹಿಳೆಯರು ಹಿಂಜರಿಕೆಯನ್ನು ತೊರೆದು ತಮ್ಮ ಸ್ಥಾನಮಾನಗಳಿಗಾಗಿ ಹೋರಾಟ ಮಾಡಬೇಕು ಅವರ  ಏಳ್ಗೆಗಾಗಿ ಪುರುಷರು ಸಹಕಾರ ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಮ್ಯಾನೇಜರ್ ಪ್ರಭುದೇವ  ಮಾತನಾಡಿ  ಪ್ರಗತಿ ಕೃಷ್ಣಾ ಬ್ಯಾಂಕ್ ದಕ್ಷಿಣ ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿದ್ದು ಸುಮಾರು ೧೮ ಸಾವಿರ ಕೋಟಿ ರೂಗಳ ವಹಿವಾಟು ನಡೆಸುತ್ತಿದೆ , ೩೧೦ ಕೋಟಿ ರೂಗಳ ಯೋಜನೆಗಳ ಫಲಾನುಭವಿಗಳಿಗೆ ಸಾಲವನ್ನು ನೀಡಲಾಗಿದೆ,  ಸಾಲ ಪಡೆದವರು ಕಾಲಾವಧಿಯಲ್ಲಿ ಮರು ಪಾವತಿಸಿದರೆ ಮುಂದಿನ ಫಲಾನುಭವಿಗಳಿಗೆ ಅನುಕೂಲ ಮಾಡಿದಂತಾಗುತ್ತದೆ ಎನ್ನುವ ಅಭಿಲಾಷೆಯನ್ನು ವ್ಯಕ್ತಪಡಿಸಿದರು.
ನಗರಸಭೆ ಉಪಾಧ್ಯಕ್ಷೆ ಗೌಸಿಯಾ ಬೇಗಂ ಹಾಗೂ ಸದಸ್ಯ ಶೇಕ್ಷಾವಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು, ಬ್ಯಾಂಕ್ ಸಿಬ್ಬಂಧಿಗಳಾದ ಮಹಾಸ್ವಾಮಿ ಶ್ವೇತಾ, ಟಿ.ಎಸ್. ಗೀತಾ, ಶೈಲಜಾ, ಆರ್. ಸುವರ್ಣ, ವೇಣುಗೋಪಾಲ, ವೆಂಕಟೇಶ್, ಮಹೇಶ, ರಾಮಾನಾಯ್ಕ್ ಹಾಗೂ ವಸಂತ ಹಾಗೂ ಇತರರು ಹಾಜರಿದ್ದರು.
ಸಮಾರಂಭದಲ್ಲಿ ಸ್ವಯಂ ಉದ್ಯೋಗಗಳಿಗಾಗಿ  ಸುಮಾರು ೧೨ ಲಕ್ಷದ ರೂಗಳ ಸುಮಾರು ೬ ಜನ ಫಲಾನುಭವಿಗಳಿಗೆ ಚೆಕ್ಕ್ ವಿತರಿಸಲಾಯಿತು,  ಕವನ ಮತ್ತು ಕೃತಿಕಾ ಪ್ರಾರ್ಥಿಸಿದರು,ಫಿರ‍್ದೋಜ್ ನಿರೂಪಿಸಿದರು, ಗುರಪ್ಪ ವಸ್ತ್ರದ್ ವಂದಿಸಿದರು.
International Womens day celeberated in PGB Hospet

Advertisement

0 comments:

Post a Comment

 
Top