ಕೊಪ್ಪಳ : ದಿ ೨೬-೦೩-೨೦೧೫ರಂದು ಕೊಪ್ಪಳ ತಾಲ್ಲೂಕಿನ ಬುಡಶೆಟ್ನಾಳ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ಶ್ರೀ ಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಜಂಟಿ ಆಶ್ರಯದಲ್ಲಿ ಸಮಗ್ರ ಜಲಾನಯನ ನಿರ್ವಹಣೆ ಯೋಜನೆ ಮೂರನೇಯ ಹಂತದ ಅಡಿಯಲ್ಲಿ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಎರಡು ದಿನದ ಕೌಶಲ್ಯಾಧಾರಿತ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ತರಬೇತಿ ಕಾರ್ಯಕ್ರಮವನ್ನು ಜಂಟಿ ಕೃಷಿ ನಿರ್ದೇಶಕರಾದ ವೀರೇಶ ಹುನಗುಂದ ಅವರು ಉದ್ಘಾಟಿಸಿ ಮಾತನಾಡಿ ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರು ತಮ್ಮ ದಿನ ನಿತ್ಯದ ಕಾರ್ಯಚಟುವಟಿಕೆಗಳ ಜೊತೆಗೆ ಬಿಡುವಿನ ಸಮಯದಲ್ಲಿ ಕಿರು ಉದ್ಯಮಗಳಾದ ಹೈನುಗಾರಿಕೆ, ಟೇಲರಿಂಗ್, ಕಸೂತಿ ಮುಂತಾದ ಚಟುವಟಿಕೆಗಳನ್ನು ಮಾಡಿ ಆರ್ಥಿಕವಾಗಿ ಸಬಲವಾಗಬೇಕೆಂದು ಮಾರ್ಗದರ್ಶನ ಮಾಡಿದರು.
ಸಹಾಯಕ ಕೃಷಿ ನಿರ್ದೇಶಕರಾದ ಸಹದೇವ ಅವರು ಮಾತನಾಡಿ ಜಲಾನಯನ ನಿರ್ವಹಣೆ ಕಾರ್ಯಕ್ರಮದಲ್ಲಿ ಭೂಮಿ ಇರುವ ರೈತರಿಗೆ ಬದುನಿರ್ಮಾಣ, ಒಳಗಟ್ಟೆ, ಕೃಷಿ ಹೊಂಡ ಮುಂತಾದ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತದೆ. ಭೂರಹಿತ, ಕೃಷಿ ಕಾರ್ಮಿಕರಿಗೆ ಮಹಿಳಾ ಸ್ವ ಸಹಾಯ ಗುಂಪುಗಳನ್ನು ರಚಿಸಿ ಅವರಿಗೆ ಕೌಶಲ್ಯಾಧಾರಿತ ತರಬೇತಿ ನೀಡುವುದರಿಂದ ಲಾಭದಾಯಕ ಸಣ್ಣ ಚಟುವಟಿಕೆಗಳನ್ನು ಪ್ರಾರಂಭಿಸಲು ಈ ತರಬೇತಿ ಅನುಕೂಲಾವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಂಜುನಾಥ ಹಳ್ಳಿಕೇರಿ ತರಬೇತಿಯ ಉದ್ದೇಶ ಸಂಸ್ಥೆಯ ಕಾರ್ಯಕ್ರಮಗಳ ಪರಿಚಯ ಮಾಡಿಕೊಟ್ಟರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗವಿಸಿದ್ಧಪ್ಪ ಮೆತಗಲ್ ಅವರು ಗುಂಪಿನ ಸದಸ್ಯರು ತರಬೇತಿ ಸಕ್ರೀಯವಾಗಿ ಭಾಗವಹಿಸಿ ಅದರ ಸದುಪಯೋಗ ಪಡೆದುಕೊಳ್ಳಬೇಕೇಂದು ತಿಳಿಸಿದರು.
ವಜೀರ್‌ಸಾಬ ತಳಕಲ್ ನಿರೂಪಿಸಿದರು ವೆಂಕಟೇಶ ಸ್ವಾಗತಿಸಿದರು ಲಾಯಪ್ಪ ನಂದ್ಯಾಳ ವಂದಿಸಿದರು
0 comments:
Post a Comment