PLEASE LOGIN TO KANNADANET.COM FOR REGULAR NEWS-UPDATES

ಬೆಂಗಳೂರು, : ರಾಜ್ಯದ 2015-16 ನೇ ಸಾಲಿನ ಆಯವ್ಯಯ ಅಂದಾಜಿನ ಮೇಲೆ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ನೀಡಿದ ಉತ್ತರದ ಕೆಲ ಅಂಶಗಳು :
• ಮಾರ್ಚ್ 13, 2015 ರಂದು ಮುಂಗಡ ಪತ್ರ ಮಂಡಿಸಿದ್ದೇನೆ. ಆಯವ್ಯವದ ಅಂದಾಜಿನ ಮೇಲೆ 32 ಮಂದಿ ವಿಧಾನಸಭೆಯಲ್ಲಿ ಮಾತನಾಡಿದ್ದಾರೆ.
ಕಳೆದ ಬಾರಿ 26 ಜನ ಮಾತನಾಡಿದ್ದು, ಇದೊಂದು ಒಳ್ಳೆಯ ಬೆಳವಣಿಗೆ.
• ಕೆಲವು ಇಲಾಖೆಯ ಮೇಲೆ ದೀರ್ಘವಾಗಿ ಚರ್ಚೆ.
• ಚರ್ಚೆಯಲ್ಲಿ ಒಳ್ಳೆಯ ಸಲಹೆ, ಟೀಕೆಗಳು ಬಂದಿವೆ. ಸಮಚಿತ್ತದಿಂದ ಎಲ್ಲವನ್ನು ಸ್ವೀಕಾರ.
• ಬೂಸ ಆಯವ್ಯಯ ಎಂದು ಟೀಕೆ, ದಲಿತಭಾಗ್ಯ, ಅಹಿಂದ ಭಾಗ್ಯ ಎಂದು ಟೀಕೆಗಳು ಬಂದಿವೆ.
• ಇದು ಈ ಸರ್ಕಾರದ ಮೂರನೇ ಆಯವ್ಯಯ.
• ಸರ್ವರನ್ನು ಒಳಗೊಂಡ ಆಯವ್ಯಯವಿದು ಆರ್ಥಿಕವಾಗಿ ವಿಶೇಷವಾಗಿ ದುರ್ಬಲರನ್ನು ಗಮನಿಸುವುದು ಸರ್ಕಾರದ ಆದ್ಯ ಕರ್ತವ್ಯ.
• ಒಂದು ರೂ.ಗೆ ಅಕ್ಕಿ ಕೊಡುತ್ತಿದ್ದು, ಮುಂದಿನ ವರ್ಷ ಪುಕ್ಕಟೆಯಾಗಿ ಕೊಡುವ ಆಲೋಚನೆ ಇದೆ.
• ಎಪಿಎಲ್ ಕಾರ್ಡುದಾರರಿಗೂ ರಿಯಾಯಿತಿ ದರ ಅಕ್ಕಿ. ಇದು ಮಧ್ಯಮ ಹಾಗೂ ಕೆಳಮಧ್ಯಮ ವರ್ಗದವರಿಗೂ ಅನುಕೂಲ.
• ನೀರಾವರಿಗೆ 12000 ದಿಂದ 13,000 ಕೋಟಿ ರೂ. ವೆಚ್ಚ.
• 3 ಲಕ್ಷ ರೂ. ಗಳಿಗೆ ಶೂನ್ಯ ಬಡ್ಡಿದರದ ಸಾಲ. 3 ರಿಂದ 10 ಲಕ್ಷ ರೂ. ವರೆಗೆ ಶೇಕಡಾ 3 ರ ಬಡ್ಡಿದರದ ಸಾಲ.
• ಬಿಪಿಎಲ್ ಕಾರ್ಡುದಾರರಿಗೆ ಸರ್ಕಾರವೇ ಷೇರು ಹಣ ನೀಡಿ ಸಹಕಾರ ಸಂಘಗಳ ಸದಸ್ಯತ್ವ ನೀಡಿಕೆ. 1.08 ಲಕ್ಷ ಕುಟುಂಬಗಳಿಗೆ ಇದರಿಂದ ಪ್ರಯೋಜನ. ಯಶಸ್ವಿನಿ ಯೋಜನೆ ಅವರಿಗೂ ಅನುಷ್ಠಾನ.
• ಈ ಆಯವ್ಯಯವು ಸರ್ವರ ಬಜೆಟ್ ಎಂಬುದು ನನ್ನ ಸ್ಪಷ್ಠ ಅಭಿಪ್ರಾಯ.
• ಬೂಸ ಬಜೆಟ್ ಎಂದು ಹೇಳಿರುವುದು ಸಮಂಜಸವಲ್ಲ.
• ಬದ್ಧತೆಯ ಕಾರ್ಯನಿರ್ವಹಣೆಯಿಂದ ಮಾತ್ರ ಉತ್ತಮ ಆಡಳೀತ ನೀಡಿಕೆ ಸಾಧ್ಯ.
• 2014-15 ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಲ್ಲಿ 15,834 ಕೋಟಿ ರೂ. ವೆಚ್ಚ. ಈ ಆಯವ್ಯಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ವೆಚ್ಚ.
2015-16 ರ ಆಯವ್ಯಯದಲ್ಲಿ 16354 ಕೋಟಿ ರೂ. ವೆಚ್ಚದ ಅಂದಾಜು. 2014-15 ನೇ ಸಾಲಿನಲ್ಲಿ ಫೆಬ್ರವರಿ ಅಂತ್ಯದವರೆಗೆ ಶೇಕಡಾ 50 ರಷ್ಟು ವೆಚ್ಚ.
• ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಪರವಾದ, ಸಾಮಾಜಿಕ ನ್ಯಾಯವನ್ನು ಒಳಗೊಂಡ ಮುನ್ನೋಟವಿರುವ ಆಯವ್ಯಯ.
• ಸಾಮಾಜಿಕ ನ್ಯಾಯ – ನಮ್ಮ ಸಂಸ್ಕøತಿ.
• 1,42,534 ಕೋಟಿ ರೂ. 2015-16 ನೇ ಸಾಲಿನ ಆಯವ್ಯಯದ ಅಂದಾಜು. 2014-15 ನೇ ಸಾಲಿನ ಬಜೆಟ್ ಅಂದಾಜು 1,38,008 ಲಕ್ಷ ರೂ. ಗಳು. ಬೆಳವಣಿಗೆ ದರ ಶೇಕಡಾ 3.27 ಕ್ಕಿಂತ ಹೆಚ್ಷು.
• 14 ನೇ ಹಣಕಾಸು ಆಯೋಗದಲ್ಲಿ ಶೇPಡಾ 42 ಕ್ಕೆ ಹೆಚ್ಚಳವಾದ ಹಿನ್ನೆಲೆಯಲ್ಲಿ 2015-16 ರಲ್ಲಿ 8,300 ಕೋಟಿ ರೂ. ಕೇಂದ್ರದಿಂದ ಹೆಚ್ಚು ಅನುದಾನ.
• ಕೇಂದ್ರದಿಂದ ತೆರಿಗೆ ಬಾಬ್ತು ಒಟ್ಟಾರೆ 24,790 ಕೋಟಿ. ರೂ. ನೀಡಿಕೆ. ಕೇಂದ್ರದಿಂದ 1987 ಕೋಟಿ ರೂ. ಕಡಿಮೆಯಾಗಿದೆ.
• ಕೇಂದ್ರ ಪುರಸ್ಕøತ ಯೋಜನೆಗಳಿಗೆ 4,689 ಕೋಟಿ ರೂ. ಗಳನ್ನು ರಾಜ್ಯ ಹೊಂದಾಣಿಕೆ ಮಾಡಬೇಕಿದೆ.
• ಆಯವ್ಯಯ ಕೇವಲ ಅಂದಾಜುಗಳು ಅಷ್ಟೇ.
• ಕೇಂದ್ರ ಸರ್ಕಾರಕ್ಕೆ ನಿಯೋಗ ಕೊಂಡೊಯ್ಯುವ ಸೂಚನೆ ಸ್ವಾಗತಾರ್ಹ.
• ರಾಜ್ಯದ ಯೋಜನಾ ಗಾತ್ರ 2015-16 ರಲ್ಲಿ 72,597 ಕೋಟಿ ರೂ. ಬೆಳವಣಿಗೆ ದರ ಶೇ 10.67.
• 2014-15 ರಲ್ಲಿ ಯೋಜನಾ ಗಾತ್ರದ ಗುರಿ ಸಾಧನೆ. ಸಾಧಿಸುವ ನಿರೀಕ್ಷೆ ಇದೆ. ಫೆಬ್ರವರಿ ಅಂತ್ಯದವರೆಗೆ ಶೇ 79 ಸಾಧನೆಯಾಗಿದೆ.
• 2014-15 ನೇ ಸಾಲಿನವರೆಗೆ ರಾಜ್ಯದ ಅಂದಾಜು ಸಾಲ ಸುಮಾರು 1,57,000 ಕೋಟಿ ರೂ. ಗಳು. 2014-15 ರವರೆಗೆ ರಾಜ್ಯದ ವಾಸ್ತಾವಿಕ ಸಾಲ ಶೇ. 22.87
• ರಾಜ್ಯ ಸರ್ಕಾರ ಕಳೆದ ಮೂರು ವರ್ಷದಲ್ಲಿ ವಿತ್ತೀಯ ಶಿಸ್ತಿನೊಳಗೆ ಇದೆ.
• ರಾಜ್ಯವು ತೆರಿಗೆ ಸಂಗ್ರಹದಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಹಾಗೆಯೇ ವಾಣಿಜ್ಯ ತೆರಿಗೆ ಸಂಗ್ರಹದಲ್ಲೂ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ.
• ಇಂಧನ ಬೆಲೆ ಏರಿಕೆಯಿಂದ ರಾಜ್ಯದ ತೆರಿಗೆ ಆದಾಯ 450 ರಿಂದ 500 ಕೋಟಿ ರೂ. ಕಡಿಮೆಯಾಗುವ ನಿರೀಕ್ಷೆಯಿದೆ.
• ನೀರಾವರಿಗೆ 11,518 ಕೋಟಿ ರೂ. ನೀಡಿದ್ದು, 2014-15 ನೇ ಸಾಲಿನ 1516 ಕೋಟಿ ರೂ. ಗಳ ಹೆಚ್ಚಳ ಮಾಡಲಾಗಿದೆ (ಸಣ್ಣ ನೀರಾವರಿ ಯೋಜನೆ ಹೊರತುಪಡಿಸಿ)
• ಸರಿಸುಮಾರು ಎಲ್ಲಾ ಇಲಾಖೆಗೆಗಳಿಗೆ ನೀಡಿರುವ ಅನುದಾನದಲ್ಲಿ ಹೆಚ್ಚಳವಾಗಿದೆ.
• 2014-15 ನೇ ಸಾಲಿನಲ್ಲಿ 14,500 ಉಪಾಧ್ಯಾಯರ ನೇಮಕಮಾಡುವ ಗುರಿ ಇದೆ.

Advertisement

0 comments:

Post a Comment

 
Top