ಬೆಂಗಳೂರು : ಜೂನ್ ಮಾಹೆಯೊಳಗೆ ಖಾಲಿ ಇರುವ ಎಲ್ಲಾ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರನ್ನು ನೇಮಕ ಮಾಡಲಾಗುವುದೆಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ತಿನಲ್ಲಿ ಸದಸ್ಯ ಐವಾನ್ ಡಿಸೋಜಾ ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯಾದ್ಯಂತ 26 ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರ ಸ್ಥಾನಗಳು ಖಾಲಿ ಇದ್ದು ಇತ್ತೀಚೆಗೆ ನಾಲ್ವರು ಅಧ್ಯಕ್ಷರನ್ನು ನೇಮಿಸಲಾಗಿದೆ. ಉಳಿದ 22 ಸ್ಥಾನ ಭರ್ತಿಮಾಡಲು ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ ಎಂದರು.
ಇದುವರೆವಿಗೂ ಅಧ್ಯಕ್ಷರ ಸ್ಥಾನಗಳಿಗೆ ನಿವೃತ್ತ ಜಡ್ಜ್‍ಗಳನ್ನು ಮಾತ್ರ ನೇಮಿಸಲಾಗುತ್ತಿತ್ತು. ಹಿರಿಯ ವಕೀಲರನ್ನು ಈ ಹುದ್ದೆಗೆ ನೇಮಿಸಲು ಅವಕಾಶವಿರುವ ಹಿನ್ನೆಲೆಯಲ್ಲಿ ನುರಿತ ಹಿರಿಯ ವಕೀಲರನ್ನು ಈ ಹುದ್ದೆಗೆ ನೇಮಿಸಲು ಕ್ರಮಕೈಗೊಳ್ಳಲಾಗುವುದೆಂದರು.
ಸಾರ್ವಜನಿರಿಗೆ ಅನುಕೂಲವಾಗಿರುವ ಈ ಇಲಾಖೆಯ ಮೇಲೆ ಚರ್ಚೆ ನಡೆದಿರುವುದು ಅಪರೂಪ. ಮಂಗಳೂರಿನ ಜನರು ಬಹಳ ಜಾಗೃತರಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಬ್ರವರಿ ಮಾಹೆಯ ಅಂತ್ಯಕ್ಕೆ 604 ದೂರುಗಳನ್ನು ಈ ವೇದಿಕೆಯ ಮುಖಾಂತರ ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.
0 comments:
Post a Comment