ಹೊಸಪೇಟೆ: ನಗರಸಭೆಯ ವಿಶೇಷ ಸಾಮಾನ್ಯ ಸಭೆಯು ಮಂಗಳವಾರ ೨೦೧೫-೧೬ನೇ ಸಾಲಿನ ೧೭ಲಕ್ಷದ ೧೯ಸಾವಿರ ರೂ. ಉಳಿತಾಯ ಬಜೆಟ್ ಮಂಡಿಸಿತು.
ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಕಣ್ಣಿ ಉಮಾದೇವಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಪೌರಾಯುಕ್ತ ಮಹಮದ್ ಮುನೀರ್ ಬಜೆಟ್ ಮಂಡಿಸಿ, ನಗರಸಭೆಗೆ ೬೮ಕೋಟಿ ೫೨ ಲಕ್ಷದ ೯೦ಸಾವಿರ ೭೫೦ ರೂ. ಆದಾಯವಿದ್ದು, ಖರ್ಚು ೬೮ಕೋಟಿ ೩೫ ಲಕ್ಷದ ೭೧ ಸಾವಿರದ ೭೫೦ ರೂ. ಇರುತ್ತದೆ ಎಂದು ೨೦೧೫-೧೬ನೇ ಸಾಲಿನ ೧೭ಲಕ್ಷದ ೧೯ಸಾವಿರ ರೂ. ಉಳಿತಾಯ ಬಜೆಟ್ ಮಂಡಿಸಿದರು. ಬಜೆಟ್ ಮಂಡನೆಯಾದ ನಂತರ ನಗರಸಭೆ ಹಿರಿಯ ಸದಸ್ಯರಾದ ತ.ಚಿದಾನಂದ, ಕೆ. ಮಲ್ಲಪ್ಪ, ಡಿ.ವೇಣುಗೋಪಾಲ, ಎಂ.ಎಸ್.ರಘು ಇದು ಉಳಿತಾಯ ಬಜೆಟ್ ಆಗಿಲ್ಲ ಎಂದು ಆರೋಪಿಸಿ ಟೀಕಿಸಿದರು. ಕರ ವಸೂಲಾತಿ ಸರಿಯಾಗಿ ನಡೆಯುತ್ತಿಲ್ಲ. ಕರ ವಸೂಲಿಗಾರರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸದಸ್ಯರು ದೂರಿ, ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನಗರಸಭೆ ಸದಸ್ಯ ರೂಪೇಶ್ ಕುಮಾರ್ ಮಾತನಾಡಿ ೧೦ಸಾವಿರಕ್ಕೂ ಅಧಿಕ ಅನಿಧಿಕೃತ ನಳಗಳ ಸಂಖ್ಯೆಯಲ್ಲಿ ಇವೆ. ಇವುಗಳನ್ನು ಪತ್ತೆಹಚ್ಚಿ ಸಕ್ರಮಗೊಳಿಸಿ ತೆರಿಗೆ ಸಂಗ್ರಹಿಸಬೇಕೆಂದು ಆಗ್ರಹಿಸಿದರು.ನಗರದ ಪ್ರಮುಖ ಸ್ಥಳಗಳನ್ನು ಗುರುತಿಸಿ, ಪ್ಲಕ್ಸ್, ಬ್ಯಾನರ್ ಹಾಕಲು ಪರವಾನಿಗೆಗೆ ತೆರಿಗೆ ಸಂಗ್ರಹಿಸಲು ಮುಂದಾಗಬೇಕೆಂದು ಸಲಹೆ ನೀಡಿದರು. ಚರ್ಚೆಯಲ್ಲಿ ಸದಸ್ಯರಾದ ಚಂದ್ರಕಾಂತ ಕಾಮತ್, ಅಂಜಿನಿ, ಗೌಸ್. ನೂರ್ ಜಹಾನ್, ರಾಮಚಂದ್ರಗೌಡ, ಗುಡುಗಂಟಿ ಮಲ್ಲಿಕಾರ್ಜುನ ಮತ್ತಿತರರು ಭಾಗವಹಿಸಿದ್ದರು. ಉಪಾಧ್ಯಕ್ಷೆ ಗೌಸಿಯಾ ಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ಕುಲ್ಲಾಯಪ್ಪ ಹಾಜರಿದ್ದರು.
0 comments:
Post a Comment