ಹೊಸಪೇಟೆ: ನಗರದಲ್ಲಿ ಭಾನುವಾರ ಬಾಬಾ ರಾಮದೇವ ಅವರ ಜನ್ಮದಿನ, ಮಹಿಳಾ ದಿನಾಚರಣೆ ಹಾಗೂ ಕುಟುಂಬ ಮಿಲನ ಕಾರ್ಯಕ್ರಮ ನಡೆಯಿತು.
ಈ ಸಮಾರಂಭವನ್ನು ಹಂಸಾಂಬಾ ಶಾರದಾಶ್ರಮ ಮಠದ ಪ್ರಮೋದಮಾಯಿ ಉಧ್ಘಾಟಿಸಿದರು. ಅಧ್ಯಕ್ಷತೆಯನ್ನು ಭವರ್‌ಲಾಲ್ ಅರ್ಯ ವಹಿಸಿ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿ, ಪುರಷರಿಗೆ ಸಮಾನವಾಗಿ ನಿಂತಿದ್ದಾರೆ. ಡಾಕ್ಟರ್ ,ಇಂಜಿನಿಯರ್, ವಿಮಾನದಲ್ಲಿ ಪೈಲೆಟ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಯಲ್ಲಿ ಮನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆಂದರು.
ಡಾ.ತ್ರಿಶೋಲ್ ಮಾತನಾಡಿ, ಜಾಹಿರಾತುಗಳಿಂದ ವಸ್ತುಗಳನ್ನು ಆಕರ್ಷಣೆಗೆ ಒಳಗಾಗಿ ಖರೀದಿಸಿದರೆ ದುಷ್ಪರಿಣಾಮ ಬೀರುತ್ತವೆ. ಸ್ವದೇಶಿ ವಸ್ತುಗಳನ್ನು ಎಲ್ಲರೂ ಬಳಸುವಂತಾಗಬೇಕೆಂದರು. ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಡಾ. ಎಸ್.ಟಿ ಹಳ್ಳಿಕೇರಿ ವರ್ಷದ ವರದಿಯನ್ನು ಮಂಡಿಸಿದರು. ಸಮಿತಿಯಲ್ಲಿ ಅನೇಕ ವರ್ಷಗಳಿಂದ ಸೇವೆಸಲ್ಲಿಸಿದ ಯೋಗಸಾಧಕರಿಗೆ ಹಾಗು ವಿವಿದ ಪಂದ್ಯಗಳಲ್ಲಿ ಜಯಗಳಿಸಿದ ಮಹಿಳೆಯರಿಗೆ ಮತ್ತು ವಿಶೇಷವಾಗಿ ಸೇವೆ ಸಲ್ಲಿಸಿದ ಧಾಕ್ಷಾಯಿಣಿ ಶಿವುಕುಮಾರ, ಮಂಗಳ, ಬಾಲಚಂದ್ರಶರ್ಮಾ, ಬಸವರಾಜ ನಾಲತ್ವಾಡ್ ಮತ್ತು ಕಿರಣ್ ಕುಮಾರ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅಶೋಕ ಚಿತ್ರಗಾರ ಸ್ವಾಗತಿಸಿದರು. ರೇಣುಕಾ ಪರಗಿ ನಿರೂಪಿಸಿದರು. ಪತಂಜಲಿ ಯೋಗ ಸಮಿತಿ,ಭಾರತ ಸ್ವಾಭಿಮಾನ ಟ್ರಸ್ಟ್, ಮಹಿಳಾ ಪತಂಜಲಿ ಯೋಗ ಸಮಿತಿ,ಯುವ ಭಾರತ, ಕಿಸಾನ ಪಂಚಾಯತ್ ಸಂಯುಕ್ತವಾಗಿ ಈ ಕಾರ್ಯಕ್ರಮ ಆಯೋಜಿಸಿದ್ದವು.
0 comments:
Post a Comment