PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ :  ಕನ್ನಡ ನಾಡಿನ ಸಾಹಿತ್ಯ , ಸಂಸ್ಕೃತಿ ದೇಶದ ಬೆಳವಣಿಗೆಯಲ್ಲಿ ಬಹು ದೊಡ್ಡ ಸಂಪತ್ತಾಗಿದೆ. ಜಾನಪದ ನೃತ್ಯ, ಕೋಲಾಟದಂತಹ ಕಲೆಗಳನ್ನು ಸಂರಕ್ಷಿಸುವುದು ನಮ್ಮೇಲ್ಲರ ಕರ್ತವ್ಯವಾಗಿದೆಯೆಂದು ತಾ. ಪಂ. ಸದಸ್ಯ ಮುದೆಗೌಡ ಪೋಲಿಸ್ ಪಾಟಿಲ್ ಹೇಳಿದರು. ಅವರು ಕೊಪ್ಪಳ ತಾಲೂಕಿನ ಕಾತರಕಿಯಲ್ಲಿ ಶ್ರೀ ಮಾರುತೇಶ್ವರ ಜಾತ್ರಾ ಪ್ರಯುಕ್ತ ಶ್ರೀ ತಾಯಮ್ಮದೇವಿ ಭಜನಾ ಯುವಕ ಸಂಘ ಹಾಗೂ ಶ್ರೀ ಮಾರುತೇಶ್ವರ ಯುವಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ  ಮಾತನಾಡಿದರು. 
ಕಾರ್ಯಕ್ರಮದ ಉದ್ಘಾಟನೆಯನ್ನು  ವಯೋವೃದ್ದಿ ಕಮಲಮ್ಮ ಹಿರೇಗೌಡ್ರ ನೆರವೆರಿಸದರು.    
ಸನ್ಮಾನ ಸ್ವಿಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಚಂದ್ರಮಪ್ಪ ಕಣಕಾಲ ಸನ್ಮಾನ ಜವಬ್ದಾರಿಯನ್ನು ಹೆಚ್ಚಿಸುತ್ತದೆ ಎನ್ನುತ್ತಾ  ಯೋಗ, ಧ್ಯಾನ, ಸಂಗೀತದಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ.  ಇಂತಹ ಭಾರತೀಯ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳನ್ನು ಆಗಾಗ ಮಾಡುತ್ತಿರುವ ಯುವಕ ಸಂಘದ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.  
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಮ್.ಎಫ್. ನಿರ್ದೆಶಕ ವೆಂಕನಗೌಡ ಹಿರೇಗೌಡ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸ್ಥಳೀಯ ಗ್ರಾ.ಪಂ ಅಧ್ಯಕ್ಷ ಯಲ್ಲನಗೌಡ ಮಾಲೀಪಾಟೀಲ, ಗ್ರಾ.ಪಂ  ಉಪಾಧ್ಯಕ್ಷ ಶೋಭಾ ನಾಗನಗೌಡ್ರ, ಗ್ರಾ.ಪಂ ಸದಸ್ಯರಾದ ಯಂಕಪ್ಪ ಕೊರಗಲ್, ದಯಾನಂದ ಪೊಲೀಸಪಾಟೀಲ, ಮೈಲಪ್ಪ ದೇವರಮನಿ, ಹಿರಿಯಾರಾದ ಶಿವರಡ್ಡಿ ಬೂಮಕ್ಕನವರ, ಮಲ್ಲಣ್ಣ ಗುಗ್ರಿ ಈಶಪ್ಪ ಹೊಳೆಯಪ್ಪನವರ, ಇತರರು ಉಪಸ್ಥಿತರಿದ್ದರು. 
ಈ ಸಂದರ್ಭದಲ್ಲಿ ಮಾಜಿ ಯೋಧರಾದ ರವಿ ನಾಗನಗೌಡ್ರ, ಮಂಜುನಾಥ ಅಂಗಡಿ, ಸೈನಿಕ ದಿ.ಮಲ್ಲಪ್ಪ ಇವರ ದರ್ಮ ಪತ್ನಿ ಜಯಶ್ರೀ ಚನ್ನಳ್ಳಿ, ವಯೋವೃದ್ದರಾದ ಕಮಲ್ಲಮ್ಮ ಹಿರೆಗೌಡ್ರ, ಲಕ್ಷಮ್ಮ ಹೊಳೆಯಪ್ಪಣ್ಣವರು, ನಿವೃತ್ತ ಶಿಕ್ಷಕರಾದ ಚಂದ್ರಾಮಪ್ಪ ಕಣಕಾಲ, ಅನಾಳಪ್ಪ ಬಳ್ಳಾರಿ, ಹಿರಿಯಾರದ ಕೃಷ್ಣಪ್ಪ ಬೆಟಗೇರಿ, ಸಿದ್ದನಗೌಡ ಪೊಲೀಸಪಾಟೀಲ, ಯಂಕಣ್ಣ ಚಲ್ಲಾ, ಮುಖ್ಯೋಪಾಧ್ಯಯ ವಾಸುದೇವ ಕುಲಕರ್ಣಿ, ಸಮಾಜ ಸೇವಕ ಜಗದಯ್ಯ ಸಾಲೀಮಠ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಪೂರ್ವದಲ್ಲಿ ಶಂಕರಗೌಡ ಹಿರೇಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.  ಸಂಗಪ್ಪ ಕಣಕಾಲ ನಿರೂಪಿಸಿದರು. ಮಂಜುನಾಥ ಹಿರೇಗೌಡ್ರ ಸ್ವಾಗತಿಸಿದರು. ವಿಶ್ವನಾಥ ಪೊಲೀಸಪಾಟೀಲ ವಂದಿಸಿದರು.  

Advertisement

0 comments:

Post a Comment

 
Top