PLEASE LOGIN TO KANNADANET.COM FOR REGULAR NEWS-UPDATES


ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಅಡ್ಡಿಪಡಿಸುತ್ತಿರುವ ತಮಿಳುನಾಡು ಸರಕಾರದ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹ
ಕೊಪ್ಪಳ : ಕರ್ನಾಟಕ ಸರಕಾರವು ಬೆಂಗಳೂರು ಮತ್ತು ರಾಮನಗರ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಸಲುವಾಗಿ ಕರ್ನಾಟಕ ಪ್ರಧೇಶವಾದ ಮೇಕೆದಾಟುವಿನಲ್ಲಿ ಕುಡಿಯುವ ನೀರಿನ ಯೋಜನೆ ಪ್ರಾರಂಭಿಸಿದ್ದು, ತಮಿಳುನಾಡು ಸರಕಾರ ವಿನಾಕಾರಣ ಆ ಯೋಜನೆಗ ಅಡ್ಡಿಪಡಿಸುವ ಕೆಲಸ ಮಾಡುತ್ತಿದೆ. ಕಾವೇರಿ ನದಿಯ ಜಲಾಯನ ಪ್ರದೇಶದಲ್ಲಿ ಕರ್ನಾಟಕದ ಭೂ ಪ್ರದೇಶದ ವ್ಯಾಪ್ತಿಯಲಿ ಈ ಯೋಜನೆ ಬರುತ್ತದೆ. ಈ ನೀರು ಬಳಸಲು ಕಾವೇರಿ ನ್ಯಾಯಮಂಡಳಿಯ ತೀರ್ಪು ಅನ್ವಯವಾಗುದಿಲ್ಲ. ಆದರೂ ತಮಿಳುನಾಡು ರಾಜಕೀಯ ಕಾರಣಗಳಿಗಾಗಿ ಈ ಯೋಜನೆಯ ಬಗ್ಗೆ ತಕರಾರು ತೆಗೆಯುತ್ತಿದೆ. ರಾಷ್ಟ್ರೀಯ  ಜಲನೀತಿಯ ಅನುಸಾರ ದೇಶದ ಕುಡಿಯುವ ನೀರಿನ ಯೋಜನೆಗೆ ಯಾವುದೇ ರಾಜ್ಯ, ಯಾವುದೇ ಸರಕಾರ ಯಾವುದೇ ಕಾನೂನು ಅಡ್ಡಿ ಪಡಿಸುವ ಹಾಗಿಲ್ಲ, ತಮೀಳುನಾಡು ಮಾತ್ರ ಈ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿ ಕನ್ನಡಿಗರ ಭಾವನೆಗಳಿಗೆ ಬೆಂಕಿ ಹಚ್ಚುವ ಕೆಲಸ ಮಡಿದೆ ತಮಿಳುನಡು ಈಗ ಮೇಕೆ ದಟು ಯೋಜನೆಗೆ ಆದೆ ತೆರನಾದ ಸಂಚು ರೂಪಿದೆ. ಕಾವೇರಿ ತೀರ್ಪು ಕನ್ನಡಿಗರಿಗೆ ಈಗಗಲೇ ಮರಣ ಶಾಸನ ಬರೆದಾಗಿದೆ. ಈಗ ಈ ಯೋಜನೆ ವಿಚಾರದಲ್ಲಿ ಹೀಗಾಗಲು ಕರ್ನಾಟಕ ನವನಿರ್ಮಾಣ ಸೇನೆ ಬಿಡುವುದಿಲ್ಲ, ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ರಾಜ್ಯ ಇರಬೇಕಾದರೆ ಕೇಂದ್ರಸರಕಾರ ಕೂಡಲೇ ತಮಿಳುನಾಡಿಗೆ ಈ ವಿಚಾರದಲ್ಲಿ ಎಚ್ಚರಿಕೆ ನೀಡಬೇಕಂದು ಕನಸೇ  ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದೆ. 

Advertisement

0 comments:

Post a Comment

 
Top