PLEASE LOGIN TO KANNADANET.COM FOR REGULAR NEWS-UPDATES

  ಕೊಪ್ಪಳ:  ಉತ್ತಮ ಸಮಾಜ ನಿರ್ಮಾಣಕ್ಕಾಗಿ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವುದಕ್ಕಾಗಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಬೇಕು ಸರಕಾರವನ್ನು ಒತ್ತಾಯಿಸುವದಾಗಿ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜಷನ್ ರಾಜ್ಯಾಧ್ಯಕ್ಷ ಲಬೀದ್ ಶಾಫಿ ಹೇಳಿದರು. ಅವರು ನಗರದ ಮೀಡಿಯಾ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. 
ವಿದ್ಯಾರ್ಥಿಗಳು ಮುಕ್ತವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಕ್ಯಾಂಪಸ್ ಗಳಲ್ಲಿ ಪ್ರಜಾಸತ್ತಾತ್ಮಕ ವಾತಾವರಣ ಅವಶ್ಯಕ. ವಿಶ್ವವಿದ್ಯಾಲಯಗಳ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಭಾರತ ಅಭಿವೃದ್ದಿಗಾಗಿ ತನುಮನದಿಂದ ಕೆಲಸ ಮಾಡುವ ಭವಿಷ್ಯದ ನಾಯಕರನ್ನು ತಯಾರುಗೊಳಿಸಲು ಈ ಚುನಾವಣೆಗಳು ಅವಶ್ಯಕ. ಸುಪ್ರಿಂ ಕೋರ್ಟ ೨೦೦೬ರಲ್ಲಿಯೇ  ಲಿಂಗ್ಡೋ ಸಮಿತಿಯ ಶಿಪಾರಸ್ಸುಗಳನ್ನು ವಿಶ್ವವಿದ್ಯಾಲಯಗಳಲ್ಲಿ ಅನುಷ್ಠಾನಗೊಳಿಸಲು ನಿರ್ದೆಶಿಸಿದೆ. ಈ ಕುರಿತು ಯುಜಿಸಿ ಎಲ್ಲ ವಿಶ್ವವಿದ್ಯಾಲಯಗಳಿಗೆ ಸುತ್ತೊಲೆ ಕಳುಹಿಸಿದೆ. ಆದರೆ ರಾಜ್ಯದ ಮಂಗಳೂರು ವಿಶ್ವವಿದ್ಯಾಲಯವನ್ನು ಬಿಟ್ಟರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳು ನಡೆಯುತ್ತಿಲ್ಲ. ಯಾವ ಕಾರಣಕ್ಕಾಗಿ ಚುನಾವಣೆಗಳನ್ನು ನಿಷೇಧಿಸಲಾಗಿದೆ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು. ಮತ್ತು ವಿದ್ಯಾರ್ಥಿ  ಸಂಘದ ಚುನಾವಣೆಯ ಸಾಧಕ ಬಾಧಕಗಳ ಕುರಿತು ಅಧಿವೇಶನದಲ್ಲಿ ಚರ್ಚಿಸಿ , ಚುನಾವಣೆಯನ್ನು ಪುನರ್ ಪ್ರಾರಂಭಿಸಲು ಎಸ್ ಐಓ ಒತ್ತಾಯಿಸುತ್ತದೆ ಎಂದರು. ಈ ಸಂದರ್ಭದಲ್ಲಿ  ಎಸ್ ಐಓ ಸ್ಥಾನಿಯಾಧ್ಯಕ್ಷ ಕಲೀಮುಲ್ಲಾಖಾನ್, ಸದಸ್ಯರಾದ ರಿಯಾಜ್ ಅಹ್ಮದ್ ಉಪಸ್ಥಿತರಿದ್ದರು. 

Advertisement

0 comments:

Post a Comment

 
Top