ಕೊಪ್ಪಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಅಭಿನೇತ್ರಿ ಮಹಿಳಾ ಕಲಾ ಬಳಗ,ರೋಟರಿ ಕ್ಲಬ್ ,ಶಕ್ತಿ ಶಾರದೆಯ ಮೇಳ ಹಾಗೂ ಬೆರಗು ಪ್ರಕಾಶನ ಇವರ ಸಹಭಾಗಿತ್ವದಲ್ಲಿ ವಿಶ್ವಮಹಿಳಾ ದಿನಾಚರಣೆ ನಿಮಿತ್ಯ ನಾಟಕ ಪ್ರದರ್ಶನ ,ಕೃತಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಿ. 8ರಂದು ರವಿವಾರ ಸಂಜೆ 4 ಗಂಟೆಗೆ ಸಾಹಿತ್ಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅಭಿನೇತ್ರಿ ಕಲಾಬಳಗದ ಅಧ್ಯಕ್ಷೆ ಶ್ರೀಮತಿ ಇಂದಿರಾ ಭಾವಿಕಟ್ಟಿ ಹೇಳಿದರು. ಅವರು ಮೀಡಿಯಾ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಶ್ರೀಮತಿ ಭಾರತಿ ಮೋಹನ ಕೋಟಿಯವರ ಬಾನಿಗೊಂದು ಎಲ್ಲೆ ಎಲ್ಲಿದೆ ಪುಸ್ತಕ ಬಿಡುಗಡೆ ಹಾಗೂ ಈಶ್ವರ ಹತ್ತಿಯವರ ಅಪೂರ್ಣ ನಾಟಕ ಪ್ರದರ್ಶನ ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಈ ನಾಟಕದ ವಿಶೇಷತೆ ಎಂದರೆ ಪುರುಷ ಪಾತ್ರಗಳನ್ನು ಸಹ ಮಹಿಳೆಯರೇ ಮಾಡುತ್ತಿದ್ದಾರೆ. ಕಳೆದ ಹಲವಾರು ದಿನಗಳಿಂದ ರಿಹರ್ಸಲ್ ನಡೆಸಲಾಗುತ್ತಿದೆ. ಶ್ರೀಮತಿ ಶೀಲಾ ಹಾಲ್ಕುರಿಕೆ ನಿರ್ದೇಶನ ಈ ನಾಟಕಕ್ಕಿದೆ.ವಿವಿಧ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಕಲಾಸಕ್ತರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿ ಗೊಳಿಸಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಮಹಾಂತೇಶ ಮಲ್ಲನಗೌಡರ, ರೋಟರಿ ಕ್ಲಬ್ ನ ಶ್ರೀನಿವಾಸ ಹ್ಯಾಟಿ, ಲಕ್ಷ್ಮೀಕಾಂತ ಗುಡಿ, ಡಿ.ಎಂ.ಬಡಿಗೇರ,ವಿಜಯಲಕ್ಷ್ಮಿ ಕೊಟಗಿ ಉಪಸ್ಥಿತರಿದ್ದರು.
0 comments:
Post a Comment