ಕರ್ನಾಟಕ ವಾಲ್ಮೀಕಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷರು ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದಿನಾಂಕ: ೨೧.೦೩.೨೦೧೫ ರಂದು ಕರ್ನಾಟಕ ವಾಲ್ಮೀಕಿ ಪತ್ತಿನ ಸಹಕಾರಿ ಸಂಘ ನಿಯಮಿತ, ಹೊಸಪೇಟೆ ಅಧ್ಯಕ್ಷರು, ಉಪಾಧ್ಯಕ್ಷರು ಚುನಾವಣೆಯನ್ನು ನಡೆಸಲಾಯಿತು. ಚುನಾವಣಾಧಿಕಾರಿ ಡಿ.ವಿರೇಶ್ ಕುಮಾರ್, ಬಳ್ಳಾರಿರವರ ಸಮ್ಮುಖದಲ್ಲಿ ೧೧ ಜನ ನಿರ್ದೇಶಕರುಗಳ ಪೈಕಿ ಅಧ್ಯಕ್ಷರಾಗಿ ತಾರಿಹಳ್ಳಿ ಹನುಮಂತಪ್ಪ, ಹೊಸಪೇಟೆ , ಉಪಾಧ್ಯಕ್ಷರಾಗಿ ಸಿ.ಡಿ.ಶಿವಣ್ಣರವರು ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರು ಅವಿರೋಧವಾಗಿ ಸಂಘಕ್ಕೆ ಆಯ್ಕೆಯಾದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಕೆ.ಗುರುಪ್ರಸಾದ್ ರಾವ್, ಕೆ.ಹೆಚ್.ವೇದಮೂರ್ತಿ, ಎಂ.ಸುವರ್ಣ ರತ್ನ, ಎಂ.ದೇವರಾಜ್, ಜಿ.ದೊಡ್ಡ ಯರ್ರಿಸ್ವಾಮಿ, ಬಿ.ಜಿಲಾನ್ ಸಾಬ್, ಹೆಚ್.ಬಿ.ಶ್ರೀನಿವಾಸ, ಮುಖಂಡರಾದ ಶ್ರೀಯುತ ಗುಜ್ಜಲ್ ನಾಗರಾಜ್, ಎ.ಪಿ.ಎಂ.ಸಿ. ಸದಸ್ಯರಾದ ಮೌಲಾಸಾಬ್, ಎಂ.ರಾಮಚಂದ್ರಪ್ಪ, ಜೆ.ಸಲೀಂ ಸಾಬ್, ರಾಮು, ಅಮರೇಶಪ್ಪ ಇನ್ನಿತರರು ಹಾಜರಿದ್ದರು.
0 comments:
Post a Comment