ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಕೊಪ್ಪಳ ಮೀಡಿಯಾ ಕ್ಲಬ್ ಮತ್ತು ಜಿಲ್ಲಾ ಪೋಲಿಸ್ ಟೀಮ್ ನಡುವೆ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿತ್ತು. ಪೋಲೀಸ್ ಟೀಂ ನ ನಾಯಕರಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಪಿ.ರಾಜಾ ಮತ್ತು ಮೀಡಿಯಾ ಕ್ಲಬ್ ಟೀಂ ನಾಯಕರಾಗಿ ದೇವು ನಾಗನಾರ ಅದ್ಭುತ ವಾದ ಕ್ರಿಕೆಟ್ ಪಂದ್ಯವಾಡಿದರು
ಮೊದಲು ಬ್ಯಾಟಿಂಗ್ ಮಾಡಿದ ಪೋಲೀಸ್ ಟೀಮ ೧೫ ಓವರ್ ಗಳಲ್ಲಿ 127 ರನ್ ಗಳಿಸಿತು. .. ಮೀಡಿಯಾ ಟೀಂ ೧೫ ಓವರ್ ಗಳಲ್ಲಿ ೧೦೭ ರನ್ ಗಳಿಸಿತು. ೨೧ ರನ್ ಗಳಿಂದ ಪೋಲೀಸ್ ಟೀಂಗೆ ಜಯ.
೮೫ ರನ್ ಗಳಿಸಿದ ಯಲಬುರ್ಗಾ ಪಿಎಸೈ ವಿನಾಯಕ್ ಮ್ಯಾನ್ ಆಪ್ ದಿ ಮ್ಯಾಚ್. ಬಹುಮಾನ ಪಡೆದರು. .. ಬಹುಮಾನ ವಿತರಿಸಿದ ಶಾಸಕ ರಾಘವೇಂದ್ರ ಹಿಟ್ನಾಳ ಪೊಲೀಸ್ ಮತ್ತು ಪತ್ರಕರ್ತರ ನಡುವೆ ಸೌಹಾರ್ಧ ಮೂಡಿಸುವ ಇಂತಹ ಪಂದ್ಯಾವಳಿಗಳು ನಡೆಯಲಿ ಎಂದು ಆಶಿಸಿದರು.




0 comments:
Post a Comment