PLEASE LOGIN TO KANNADANET.COM FOR REGULAR NEWS-UPDATES

ಹೊಸಪೇಟೆ: ನಗರದಲ್ಲಿ ಭಾನುವಾರ ಸಂಜೆ ಸಂಭ್ರಮ, ಸಡಗರದಿಂದ ಸಣ್ಣಕ್ಕಿ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ನಡೆಯಿತು.
ಸಣ್ಣಕ್ಕಿ ವೀರಭದ್ರೇಶ್ವರ ಸ್ವಾಮಿ ರಥೋತ್ಸವದ ಪ್ರಯುಕ್ತ ಬೆಳಿಗ್ಗೆಯಿಂದಲೇ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರ ನಡೆಸಲಾಯಿತು. ಭಕ್ತರು ದೇವರ ದರ್ಶನ ಪಡೆದು ಕಾಯಿಕರ್ಪೂರ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ಸಂಜೆ೬.೨೦ಕ್ಕೆ ಕೊಟ್ಟೂರು ಸ್ವಾಮಿ ಮಠದ ಜಗದ್ಗುರು ಡಾ|| ಸಂಗನಬಸವ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ, ರಥಕ್ಕೆ ಹಣ್ಣುಕಾಯಿ ಎಸೆದು ಭಕ್ತಿಭಾವ ಪ್ರದರ್ಶಿಸಿದರು.
ನಿನ್ನೆ ಯುಗಾದಿಯ ಮೊದಲ ದಿನದ ಪಾಡ್ಯದಂದು ಅಗ್ನಿಕುಂಡ ಪ್ರವೇಶ ಮಾಡಿ  ನೂರಾರು ಭಕ್ತರು ತಮ್ಮ ಹರಕೆಯನ್ನು ತೀರಿಸಿದರು,  ನಾಳೆ ದಿ. ೨೩ರಂದು ಸಂಜೆ ೬ ಗಂಟೆಗೆ ಕಡುಬಿನ ಕಾಳಗವಿದ್ದು ಸ್ವಾಮಿಯ ಮೆರವಣಿಗೆಯು ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ನಗರದ ಮೇನ್ ಬಜಾರ್‌ನಲ್ಲಿರುವ ಶ್ರೀಪೇಟೆ ಬಸವೇಶ್ವರ ದೇವಸ್ಥಾನ ತಲುಪಲಿದೆ.
ಜಾತ್ರ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಜೈಕಾರ ಕೂಗಿದರು, ದ್ವಜದ ಮೆರವಣಿಗೆಯು ನಡೆಯಿತು, ರಥೋತ್ಸವದ ನಂತರ ಭಾಜಾ ಭಜಂತ್ರಿ ಮಂಗಳ ವಾದ್ಯದೊಂದಿಗೆ ಹುಚ್ಚಯ್ಯನ ಮೆರವಣಿಗೆ ನಡೆಯಿತು,  ,  ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಸಮಾಜದ ಮುಖಂಡರು ಹಾಜರಿದ್ದು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜರುಗಿಸಿದರು.
ಜಾತ್ರೆ ಪ್ರಯುಕ್ತ ಜಾಗೃತ ನಾಯಕ ಬಳಗವು ಪ್ರತಿವರ್ಷ ಪಾನಕ ಸೇವೆ ಸಲ್ಲಿಸುತ್ತಿದ್ದು, ಈ ವರ್ಷ ಮಜ್ಜಿಗೆ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Advertisement

0 comments:

Post a Comment

 
Top