PLEASE LOGIN TO KANNADANET.COM FOR REGULAR NEWS-UPDATES


ರಾಜ್ಯ ಗಾಣಿಗ ಸಮಾಜದ ಉಪಾಧ್ಯಕ್ಷನಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ  ಕೊಪ್ಪಳ ಜಿಲ್ಲೆಯ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷರಾಗಿದ್ದ ಶ್ರೀ ವೀರಣ್ಣ ಗಾಣಿಗೇರ ರವರು ತಮ್ಮ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಅಧಿಕೃತವಾಗಿ ರಾಜಿನಾಮೆಯಿಂದ ಖಾಲಿ ಇದ್ದ ನೂತನ ಪದಾಧಿಕಾರಿಗಳ ಆಯ್ಕೆ ಜರುಗಿತು.
ಕುಷ್ಷಗಿ ರಸ್ತೆಯಲ್ಲಿರುವ ಸಮುದಾಯ ಭವನದಲ್ಲಿ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ಜರುಗಿತು. ಕೊಪ್ಪಳ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷರಾಗಿ ನೂತನವಾಗಿ ತೊಟಪ್ಪ ಹನುಮಪ್ಪ ಕಾಮನೂರ ಸಾ:ಹ್ಯಾಟಿ ಆಯ್ಕೆ ಆಗಿದ್ದಾರೆ, ಉಪಾಧ್ಯಕ್ಷರಾಗಿ ಸುಭಾಸ ತಂದೆ ಹೆಗ್ಗಪ್ಪ ವದಗನಾಳ ತಾ: ಯಲಬುರ್ಗಾ, ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ ಈರಣ್ಣ ಸಜ್ಜನ, ಸಹ ಕಾರ್ಯದರ್ಶಿಯಾಗಿ ಮಲ್ಲಪ್ಪ ಬಸಪ್ಪ ಸಜ್ಜನ, ಕೋಶಾಧ್ಯಕ್ಷರಾಗಿ ಬಸವಂತಪ್ಪ ತಂ ಅಂದಪ್ಪ ಸಜ್ಜನ ಆಯೆಯಾದರು ಮತ್ತು
ಸದಸ್ಯರುಗಳಾಗಿ, ಸಂಗನಗೌಡ ಬಿ.ಟಿ.ಪಾಟೀಲ್, ಸಂಗನಗೌಡ ಕರ್ಕಿಹಳ್ಳಿ, ಸಂಗನಗೌಡ ಪೋಲಿಸ ಪಾಟೀಲ್ ಕಾಸನಕಂಡಿ, ಶ್ರೀಶೈಲ್ ಮೇಟಿ, ಬಿ.ರಾಜೇಶ ತಂದೆ ಬಿ.ಗೆದಿಗೇಪ್ಪ ಹೀರೆಜಂತಗಲ್ಲ, ರುದ್ರಪ್ಪ ತಂದೆ ಸಿದ್ದಪ್ಪ ಸಜ್ಜನ ಸಾ; ಕಾರಟಗಿ, ಸಣ್ಣ ಈಶ್ವರಪ್ಪ ಭಾವಿಕಟ್ಟಿ ಸಾ: ಸೋಮನಾಳ, ವಿರೇಶಪ್ಪ ಪತ್ರೇಪ್ಪೆ ಸಜ್ಜನ ಸಾ: ಸಿದ್ದಾಪುರ, ಸಂಗಪ್ಪ ಹಂಪಣ್ಣ ಸಜ್ಜನ ಸಾ: ಕನಕಗಿರಿ, ಮಲ್ಲನಗೌಡ ಎಸ್.ಕೊನನಗೌಡ ಸಾ: ಬೇವೂರ, ಉಮೇಶ ಮೆಣಸಗೇರಿ ವಕೀಲರು ಸಾ: ಚಿಕ್ಕಮ್ಯಾಗೇರಿ, ಅಯ್ಯನಗೌಡ ಆರ್. ಕೆಂಚ್ಚಮ್ಮನವರ ಸಾ; ಹುಣಸಿಹಾಳ, ವೀರುಪಾಕ್ಷಗೌಡ ಹನಮನಗೌಡ ಮ್ಯಾಗೇರಿ ತಾ: ಕುಷ್ಷಗಿ, ಸಂಗಪ್ಪ ಚನ್ನಪ್ಪ ಕುರನಾಳ ತಾ: ಕುಷ್ಷಗಿ, ಬಸವರಾಜ ಮಲಕಾಪುರ ಸಾ: ಮಲಕಪುರ, ವೀರುಪಕ್ಷ ಹನುಮಂತಪ್ಪ ಬೋಮ್ಮನಾಳ ಸಾ: ಮುಸಲಾಪುರ, ಮಂಜುನಾಥ ಹಂದ್ರಾಳ. 

Advertisement

0 comments:

Post a Comment

 
Top