ಹೊಸಪೇಟೆ: ನಗರದಲ್ಲಿ ನಾಳೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಿರ್ಲೋಸ್ಕರ್ ಮಹಿಳಾ ಕ್ಲಬ್ ಹಾಗೂ ತಾಯಮ್ಮ ಶಕ್ತಿಸಂಘ ಸಂಯುಕ್ತವಾಗಿ ವಿವಿಧ ಮಹಿಳಾ ಸಂಘಟನೆಗಳೊಂದಿಗೆ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕಾಗಿ ಜಾಗೃತಿ ಜಾಥಾ ನಡೆಸಲಿದೆ.
ರೈಲ್ವೇ ನಿಲ್ದಾಣದ ರಸ್ತೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ವೃತ್ತದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಎಂಬ ಸಂದೇಶದ ಕರಪತ್ರ ವಿತರಿಸುತ್ತಾ ಜಾಗೃತಿ ಜಾಥಾ ನಡೆಸಲಾಗುತ್ತಿದೆ ಎಂದು ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರಸಿಂಗ್ ತಿಳಿಸಿದ್ದಾರೆ.
0 comments:
Post a Comment