PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ:ಮಾ-೭, ಜಿಲ್ಲಾಡಳಿತ ಭವನದ ಸಚಿವರ ಕಾರ್ಯಲಯದಲ್ಲಿ ಇಂದು ಬೆಳೆಗ್ಗೆ ೧೧-೩೦ಕ್ಕೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿಯವರು ನೂತನ  ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೂ ಹಾಗೂ ನಗರಸಭೆಯ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಸನ್ಮಾನಿಸಿ ಮಾತನಾಡಿದ ಸಚಿವರು ಅಧಿಕಾರದ ಅವದಿಯಲ್ಲಿ ಶ್ರದ್ಧೆ-ನಿಷ್ಠೆಯಿಂದ ಕಾರ್ಯನಿರ್ವಹಿಸಿ ಜನರ ಸಮಸ್ಯಗಳಿಗೆ ಸ್ಪಂದಿಸಿ ಅವರ ಸಮಸ್ಯೆಗಳನ್ನು ಬಗೆಹರಿಸಿ ಕರ್ತವ್ಯನಿರ್ವಹಿಸಿದಾಗ ಮಾತ್ರ ಅಧಿಕಾರದ ಶ್ರೇಯಸ್ಸು ನಿಮಗೂ ನಿಮ್ಮನ್ನು ಆಯ್ಕೆಮಾಡಿದ ಪಕ್ಷದ ವರಿಷ್ಟರಿಗೂ ಮತ್ತು ಪಕ್ಷಕ್ಕೂ ಅದರ ಶ್ರೇಯಸ್ಸು ಸಲ್ಲುತ್ತದೆ. ಅಧಿಕಾರದ ಅವದಿಯಲ್ಲಿ ನಿರ್ಲಕ್ಷ ವಹಿಸದಿರಿ ಅಧಿಕಾರ ನೆಪಮಾತ್ರ ಅಭಿವೃದ್ಧಿ ಕಾರ್ಯಗಳು ಸದಾ ಜನರ ಮನದಲ್ಲಿರುತ್ತದೆ. ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ, ನೂತನ ಪ್ರಾಧಿಕಾರದ ಅಧ್ಯಕ್ಷರಾದ ಜುಲ್ಲು ಖಾದ್ರಿ, ನಗರಸಭೆ ಅಧ್ಯಕ್ಷರಾದ ಬಸಮ್ಮ ಹಳ್ಳಿಗುಡಿ, ಉಪಾಧ್ಯಕ್ಷರಾದ ಬಾಳಪ್ಪ ಬಾರಕೇರ, ಪಕ್ಷದ ಮುಖಂಡರಾದ ಎಸ್.ಬಿ. ನಾಗರಳ್ಳಿ, ಗವಿಸಿದ್ದಪ್ಪ ಮುದುಗಲ್, ಸುರೇಶ ಬುಮರೆಡ್ಡಿ, ಈಶಪ್ಪ ಮಾದಿನೂರು, ಪ್ರಸನ್ನ ಗಡದ, ಕೃಷ್ಣ ಇಟ್ಟಂಗಿ, ವಕ್ತಾರ ಅಕ್ಬರ ಪಾಷಾ ಪಲ್ಟನ ಉಪಸ್ಥಿತರಿದ್ದರು.
 

  

Advertisement

0 comments:

Post a Comment

 
Top