PLEASE LOGIN TO KANNADANET.COM FOR REGULAR NEWS-UPDATES


ಗಂಗಾವತಿ,೨೩- ೧೨ನೇ ಶತಮಾದಲ್ಲಿ ಬಸಣ್ಣನವರು ರಚಿಸಿದ ಜಗತ್ತಿನ ಮೊಟ್ಟಮೊದಲಿನ ಪಾರ್ಲಿಮೆಂಟ್(ಅನುಭವ ಮಂಟಪದ)ಸದಸ್ಯರೇ ಶರಣರು. ಶೂನ್ಯ ಸಿಂಹಾಸನಾಧೀಶ (ಸ್ಪೀಕರ್) ಅಲ್ಲಮಪ್ರಭುಗಳು ಕೆಲಸಮಾಡಿದ್ದಾರೆ ಆನುಭವಮಂಟಪದಲ್ಲಿ ಮಾನವ ಮಾನವ ರಲ್ಲಿ ಭೇದಭಾವ ಹೊಗಲಾಡಿಸಲು ಮುಂದಾಲೋಚನೆಯಿಂದ ರಚಿಸಿದ ವಚನಗನ್ನು ಮಂಡನೆಮಾಡಿ ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಚರ್ಚಿಸಿ ಹೊರಬರುತಿದ್ದವು.ಆವಚನಗಳು ಇಂದೀಗೂ ಪ್ರಸ್ತುತ ಶೂನ್ಯ ಪೀಠದ ಪರಂಪರೆ ಇಂದೀಗೂ ಮುಂದುವರಿದು ಬಂದಿದೆ ಎಂದರು.
ಅವರು ರವಿವಾರ ನಗರದ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವದಳದವರು ಆಯೋಜಿಸಿದ್ದ ಅಲ್ಲಮಪ್ರಭು ಜಯಂತಿ ಕಾರ್ಯಕ್ರಮದಲ್ಲಿ ಮಾತನಡುತ್ತಾ ಅಲ್ಲಮರು ಶರಣರ ಸಂಕುಲದಲ್ಲೇ ಶ್ರೇಷ್ಠ ತತ್ವಜ್ಞಾನಿಯಾಗಿ ನಿಲ್ಲುತ್ತಾರೆಒಂದೇಕಾಲದಲ್ಲಿ ಗುವೂ ಶಿಷ್ಯನೂ ಆಗುವ ಅಲ್ಲಮನ ಪರಿ ಅನನ್ಯವಾದದ್ದು.ಅವರ ವ್ಯೆಕ್ತಿತ್ವ  ಅವರ ಬದುಕಿನಿದಂದ ಅಳಿಯಬಹುದು. ಅಲ್ಲಮಪ್ರಭುಗಳ ಜಯಂತಿಯನ್ನು ಲಿಂಗಾಯತಮoಗಳು  ಆಚರಿಸಬೇಕಿತ್ತು. ಆದರೆ ಇಂತ ಜಯಂತಿಗಳನ್ನು ಆಚರಿಸಿದರೆ ಬಸವಾದಿ ಶರಣರ ತತ್ವ ಸಿದ್ದಾಂತಗಳನ್ನು ಜನಸಾಮಾನ್ಯರಿಗೆ ತಿಳಿಸಬೇಕಾಗುತ್ತದೆ.ಅಂತಕೆಲಸಕ್ಕೆ ಕೈಹಾಕು ಕೆಲಸಮಾಡುವದಿಲ್ಲ. ನಾಡಿನಾದ್ಯಂತ ಬಸವದಳದವರು ಎಲಾ ಶಣರ ಜಯಂತಿ ಆಚರಿಸುತ್ತಾರೆ ಮಾನವರನ್ನು ಪ್ರೀತಿಸುತ್ತಾರೆ,ಬಾಬಾ ಸಾಬ್ ಅಂಬೇಡಕರ್ ಅವರು ಕಾಯಕ ಸಿದ್ದಾಂತದಮೇಲೆ ಸಂವಿಧಾನ ರಚಿಸಿದ್ದಾರೆ. ಕೆಲವರು ಮಠಾಧೀಶರು,ಸಾಹಿತಿಗಳು ಎಂದು ಹೇಳಿಕೊಳ್ಳುವವರು,ಪಡ್ಡಭಧ್ರಹಿತಾಶೆಕ್ತಿಗಳು ಬಸವಧರ್ಮವನ್ನು ನಾಶಮಾಡ ಹೊರಟಿದ್ದಾರೆ, ನಾವೆಲ್ಲರು ಲಿಂಗಾಯತರು ನಮ್ಮದೇವರು ಲಿಂಗದೇವರು,ನಮ್ಮಗುರುಗಳು ಬಸವಣ್ಣನವರು.ಮಾನವರನ್ನು ಮಾನವರಂತೆ ಕಾಣುವದೇ ಬಸವಧರ್ಮ (ಲಿಂಗಾಯತ ಧರ್ಮ) ,ಬಾಬಾ ಸಾಬ್ ಅಂಬೇಡಕರ್ ಮನುಸೃತಿ ಅಲ್ಲಗಳೆದಿದ್ದಾರೆ.ಆದರೆ ನಾವು ಅವುಗಳನ್ನೇ ಅನುಸರಿಸುತಿದ್ದೇವೆಎಂದರು.
   ಬಸವಣ್ಣ ನವರನ್ನು ಮಠ ಮಾನ್ಯಗಳು ಅಪ್ಪಿಕೊಂಡಿದ್ದಾರೆ,ಒಪ್ಪಿಕೊಂಡಿಲ್ಲ ಶೂನ್ಯ ಸಿಂಹಾಸನವೆಂದರೆ,ಆಧ್ಯಾತ್ಮಿಕ ತತ್ವಜ್ಞಾ ನಿಯ ರಾಜತ್ವಪಡೆದು,ಶೂನ್ಯವನ್ನು ಸಂಪಾದಿಸುವ,ಪರಿಪೊರ್ಣತೆಯ ಸಂಕೇತ.ಅಲ್ಲಮ ಪ್ರಭುಗಳ ವ್ಯಕ್ತಿತ್ವವನ್ನು ಕಲ್ಪಿಸಿಕೊಂಡು ಅಕ್ಷರ ರೂಪಕ್ಕಿಳಿಸುವದು ಕಷ್ಟಸಾದ್ಯ ಎಂದು ಸೂಳೇಕಲ್ಲ ಗ್ರಾಮದಲ್ಲಿ ಶರಣಬಸವೇಶ್ವರ ಪ್ರವಚನ ಮಡುತ್ತಿರುವ ಗದುಗಿನ ಶಂಕ್ರಣ್ಣ ಅಂಗಡಿಸಭೆಯ ಅದ್ಯಕ್ಷತೆ ವಹಿಸಿಮಾತನಾಡಿದರು.
ಶರಣರ ತತ್ವಸಿದ್ದಾಂತಗಳು ನಮ್ಮನಜೀನಸಾಧನೆಗಳು ಶರಣರ ಚಿಂತನೆ ಗಳನ್ನು ಸಮಾಜಕ್ಕೆ ಮುಟ್ಟಿಸುವಲ್ಲಿ ಮಠಮಾನ್ಯಗಳ ಕೊಡುಗೆ ಸೂನ್ಯ ಎಂದು ನಿವೃತ್ತ ಪ್ರಾಚಾರ್ಯರಾದ ಓ.ಎಂ.ಬೊಳ್ಳೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಲಿಂಗಪ್ಪತಟ್ಟಿ ಕಾರ್ಯಕ್ರಮ ನಡೆಸಿಕೊಟ್ಟರು.
ಈಸಂಧರ್ಭದಲ್ಲಿ ಲಿಂಗಾಯತ ಮಹಾಸಭಾ ತಾಲೂಕಅಧ್ಯಕ್ಷ ನಿಜಲಿಂಪ್ಪ ಮೆಣಸಗಿ,ರಾ.ಬಸವದಳದ ಅಧ್ಯಕ್ಕ ಕೆ.ಪಂಪಣ್ಣ, ಮಾಟೂರಮಾಮಲ್ಲಪ್ಪ,ಬಾಗೋಡೆಪ್ಪ,ವೀರೇಶಕುಂಬಾರ,ಶ್ರೀನಿವಾಸ್,ದಿಲಿಪ್ ಕುಮಾರ್,ಗವಿಸಿದ್ದಪ್ಪ,ಜ್ಯೋತಿ,ಸೊಮಣ್ಣ,ವಿಜಯ ಅರಳಳ್ಳಿಯ ವೀರಣ್ಣ.ಜ್ಯೋತೆಮ್ಮ ,ಶ್ರೀನಿವಾಸ ಶಿಕ್ಷಕರಾದ ಶ್ರೀಕಾಂತ, ಹಸೇನಪ್ಪ,ಡಣಾಪೂರಮುಂತಾದವರಿದ್ದರು.

Advertisement

0 comments:

Post a Comment

 
Top